ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದ ವ್ಯಕ್ತಿ ಮೃತ್ಯು
ಮಲ್ಪೆ : ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ 40-45ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ವಿನೋದ ಸುವರ್ಣ ಎಂಬವರ ಶ್ರೀಪರಮೇಶ್ವರ ಬೋಟಿನಲ್ಲಿ ಮೀನುಗಾರಿಕೆಗೆಂದು ಅ.31 ತೆರಳಿದ್ದು, ನ.3ರಂದು ಸಂಜೆ ಮೀನುಗಾರಿಕೆ ಮಾಡುತ್ತಿರುವಾಗ ಅಕಸ್ಮಿಕವಾಗಿ ಕಾಲುಜಾರಿ ಸಮುದ್ರದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನ.4ರಂದು ಈತನ ಮೃತದೇಹವನ್ನು ಬೋಟಿನಲ್ಲಿ ತೆಗೆದುಕೊಂಡು ಬರಲಾಗಿದೆ. ಮೃತನು ಕಪ್ಪು ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಒಳಚಡ್ಡಿ ಧರಿಸಿದ್ದು, ಕೈಯಲ್ಲಿ ಚಂದ್ರ ರಾಥೋಡ್ ಹೆಸರಿನ ಅಚ್ಚೆ ಹಾಗೂ ಕೃಷ್ಣ ದೇವರ ಚಿತ್ರದ ಅಚ್ಛೆ ಇದೆ. ಹಣೆಯ ಮೇಲೆ ಗಾಯದ ಗುರುತಿದೆ. ಸದ್ಯ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆಗೆ ಪ್ರಯತ್ನಿಸಿ ಇಂದು ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story