ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಹೆಬ್ರಿ, ಮಾ.14: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮುದ್ರಾಡಿ ಗ್ರಾಮದ ಬಲ್ಲಾಡಿಯ ಮಹಬಲಾಡಿ ನಿವಾಸಿ ಕಾಡ್ಯ ಶೆಟ್ಟಿ ಎಂಬವರ ಪತ್ನಿ ಕಮಲ ಶೆಡ್ತಿ (86) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.13ರಂದು ಸಂಜೆ ವೇಳೆ ಮನೆಯ ಒಳಗಿನ ಕೋಣೆಯಲ್ಲಿ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮನೆಯಲ್ಲಿ ಮಾ.12ರಂದು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾರ್ಕಳ ಕೃಷ್ಣಗಿರಿ ಹಿರಿಯಂಗಡಿ ನಿವಾಸಿ ಪ್ರಜ್ವಲ್ ದೇವಾಡಿಗ (18) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾ.14ರಂದು ಬೆಳಗ್ಗೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story