ಕಾಪು: ಅಂದರ್ ಬಾಹರ್ ಅಡ್ಡೆಗೆ ದಾಳಿ; 32 ಮಂದಿ ಬಂಧನ, 7 ಕಾರು, 6 ಬೈಕ್‌ಗಳು ವಶ

ಕಾಪು, ಮಾ.24: ಉಳಿಯಾರಗೋಳಿ ಗ್ರಾಮದ ಕಲ್ಯಾ ಪಡುಮನೆಯ ಶ್ರೀಕರ್ ಶೆಟ್ಟಿ ಎಂಬವವರ ವಾಸದ ಮನೆಯಲ್ಲಿ ಮಾ.23ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪದಲ್ಲಿ 32 ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಸಂಪತ್ ಶೆಟ್ಟಿ, ಸೂರಜ್ ಶೆಟ್ಟಿ, ಹೇಮಚಂದ್ರ, ಪ್ರಶಾಂತ್ ಸುವರ್ಣ (37), ಬಿಕೆಟ್ (34), ಅಕ್ಷಯ್ (30), ಯಂಕಪ್ಪ (46), ಸಿದ್ದೀಕ್ (41), ರಾಜೇಶ್ (41), ಸತೀಶ್ (54), ರತ್ನಾಕರ್ ಶೆಟ್ಟಿ (34) ನಾರಾಯಣ ಮೆಂಡನ್ (37), ವಿಶ್ವನಾಥ ಬೋಜ ಶೆಟ್ಟಿ (33), ವಿನೋಧ ಶೆಟ್ಟಿ (38), ಅಶ್ರಫ್ (40), ವಿನಯ್ (31), ಶಶಿಕುಮಾರ (30), ಕಿಶೋರ್ ಕುಮಾರ್ (41), ರಾಧಾಕೃಷ್ಣ (54), ಪ್ರಿತೇಶ (26), ಮಣಿಕಂಠ (32), ಚೇತನ್ (29), ಚರಣ್ ಕುಮಾರ್ (38), ಅಶ್ವತ್ (30), ರಕ್ಷಿತ್ (24), ಪಾಂಡು ಟಿ.(32), ಅನ್ವರ್, ಸಂತೋಷ್ (30), ಅರ್ಪಿತ್ (32), ಪ್ರಜ್ವಲ್ (27), ಪ್ರಶಾಂತ್ (23), ಭೋಜರಾಜ್ (47) ಬಂಧಿತ ಆರೋಪಿಗಳು.
ಇವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಜುಗಾರಿ ಆಡಲು ಅನುಮತಿ ಹಾಗೂ ಮನೆಯ ವ್ಯವಸ್ಥೆಯನ್ನು ಶ್ರೀಕರ ಶೆಟ್ಟಿ ನೀಡಿದ್ದು, ಆಟವನ್ನು ತುಳಸಿ ದಿನೇಶ್ ಶೆಟ್ಟಿ ಸೇರಿಕೊಂಡು ಆಡಿಸುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಬಂಧಿತರಿಂದ 3,37,400 ರೂ. ನಗದು, 37 ಮೊಬೈಲ್ ಫೋನ್‌ಗಳು, 7 ಕಾರುಗಳು, 6 ಬೈಕುಗಳು, 2 ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





