ಮಾ.26ರಂದು ಕೊಂಕಣಿ ಕವಿಗೋಷ್ಠಿ
ಉಡುಪಿ, ಮಾ.25: ನಿರಂತರ್ ಉದ್ಯಾವರ ಮತ್ತು ಮಂಗಳೂರು ಪೊಯೆಟಿಕಾ ಆಶ್ರಯದಲ್ಲಿ ಪೊಯೆಟಿಕಾ ಕವಿಗೋಷ್ಠಿ ಮಾ.26ರಂದು ಸಂಜೆ 4 ಗಂಟೆಗೆ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಡಿವೈನ್ ಗ್ಲೋರಿ ರೋಷನ್ ಕ್ರಾಸ್ಟೋ ಅವರ ನಿವಾಸದಲ್ಲಿ ಜರುಗಲಿದೆ.
ಕವಿಗೋಷ್ಠಿಯಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಗೋವಾದ ಕೊಂಕಣಿ ಕವಿಗಳು ಕೂಡ ಭಾಗವಹಿಸಲಿ ರುವರು. ಒಟ್ಟು 30 ಮಂದಿ ಯುವ ಮತ್ತು ಅನುಭವಿ ಕವಿಗಳು ತಮ್ಮ ಕವಿತೆಯನ್ನು ವಾಚಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





