ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 80 ಮಂದಿ ಗೈರು
ಉಡುಪಿ, ಮಾ.27: ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ಇಂದು ನಡೆದ ದ್ವಿತೀಯ ಪಿಯುಸಿಯ ಎರಡು ಪರೀಕ್ಷೆಗಳಿಗೆ ಒಟ್ಟು 80 ಮಂದಿ ಗೈರುಹಾಜರಿದ್ದಾರೆ ಎಂದು ಡಿಡಿಪಿಯು ಅವರ ಪ್ರಕಟಣೆ ತಿಳಿಸಿದೆ.
ದಿನದಲ್ಲಿ ನಡೆದ ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಪರೀಕ್ಷೆಗೆ 7533 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, 7453 ಮಂದಿ ಪರೀಕ್ಷೆ ಬರೆಯುವ ಮೂಲಕ 80 ಮಂದಿ ಗೈರುಹಾಜರಾಗಿದ್ದಾರೆ.
ಗೃಹ ವಿಜ್ಞಾನ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ ಎಲ್ಲಾ ಐವರು ಪರೀಕ್ಷೆ ಬರೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story