ಕಾರ್ಕಳ: ತಾಯಿ ಮೃತಪಟ್ಟ ಚಿಂತೆಯಲ್ಲಿ ಮಗಳು ಆತ್ಮಹತ್ಯೆ
ಕಾರ್ಕಳ, ಮಾ.29: ತಾಯಿ ಮೃತಪಟ್ಟ ವಿಚಾರದಲ್ಲಿ ಮನನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.28ರಂದು ನೂರಾಳ್ಬೆಟ್ಟು ಗ್ರಾಮದ ಉರೆಕಲ್ ಎಂಬಲ್ಲಿ ನಡೆದಿದೆ.
ನೂರಾಳ್ಬೆಟ್ಟು ಗ್ರಾಮದ ಉರೆಕಲ್ ನಿವಾಸಿ ಭಾಗೀ(70) ಎಂಬವರು ಬೆಳಗ್ಗೆ 8:30ಕ್ಕೆ ತಮ್ಮ ಮನೆಯಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ತಾಯಿ ಮೃತಪಟ್ಟ ವಿಚಾರ ತಿಳಿದು ನಾರಾವಿಯಲ್ಲಿ ಫ್ಯಾನ್ಸಿ ಅಂಗಡಿಯಲ್ಲಿ ಕೆಲಸ ಮಾಡಿ ಕೊಂಡಿದ್ದ ರೇಖಾ (25) ಎಂಬವರು ಮನೆಗೆ ಹೊರಟಿದ್ದರು.
ಇದೇ ವಿಚಾರದಲ್ಲಿ ಮನನೊಂದ ರೇಖಾ ಮನೆಗೆ ಹೋಗುವ ದಾರಿ ಮಧ್ಯೆ ಸಿಗುವ ಗೋಳಿದಜೆ ಎಂಬಲ್ಲಿನ ಕೆರೆಗೆ ಬೆಳಗ್ಗೆ 11:45 ಗಂಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story