ಉಡುಪಿ: ಪಾಳುಬಿದ್ದ ಕಟ್ಟಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಉಡುಪಿ, ಎ.1: ಕಲ್ಸಂಕ ಜಂಕ್ಷನ್ನಲ್ಲಿ ನಿರ್ಮಾಣ ಹಂತದಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಕನಕ ಮಹಲ್ ಕಟ್ಟಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರು ನಗರ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್.ಐ ಮಹೇಶ್ ಟಿ.ಎಂ, ಹೆಡ್ ಕಾನ್ಸ್ಟೇಬಲ್ ಸುಷ್ಮಾ ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು, ಸುನೀಲ್ ಬೈಲಕೆರೆ ಮೃತದೇಹವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಹಕರಿಸಿದರು.
ಪಾಳುಬಿದ್ದಿರುವ ಕನಕ ಮಹಲ್ ಬಹುಮಹಡಿ ಕಟ್ಟಡದಲ್ಲಿ ಪತ್ತೆಯಾಗಿರುವ ಶವಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದ್ದು, ವಾರದ ಹಿಂದೆ ಇದೇ ಕಟ್ಟಡದಲ್ಲಿ ಶವವೊಂದು ಪತ್ತೆಯಾಗಿತ್ತು. ಕಟ್ಟಡಕ್ಕೆ ಸಂಬಂಧಪಟ್ಟವರು ಅಪರಿಚಿತರು ಒಳ ನುಸುಳದಂತೆ ಕಾವಲುಗಾರರನ್ನು ನೇಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Next Story