ಹಿರಿಯಡ್ಕ, ಎ.23: ಅಂಜಾರು ಗ್ರಾಮದ ಓಂತಿಬೆಟ್ಟು ನಿವಾಸಿ ರಿತೇಶ್ ಪ್ರವೀಣ್ ಕುಮಾರ್ ತನ್ನ ಮನೆಯ ಎದುರಿನ ರಸ್ತೆ ಬದಿ ಎ.22ರಂದು ರಾತ್ರಿ ನಿಲ್ಲಿಸಿದ್ದ 2.40ಲಕ್ಷ ರೂ. ಮೌಲ್ಯದ ಕೆಎ20 ಎಎ 2128 ನಂಬರಿನ ಫೋರ್ಸ್ ಕಂಪೆನಿಯ ಗೂಡ್ಸ್ ಟ್ರಾವೆಲರ್ ವಾಹನ ಕಳವಾಗಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.