ಹೆಬ್ರಿ: ಮೆಸ್ಕಾಂ ಜನ ಸಂಪರ್ಕ ಸಭೆ
ಉಡುಪಿ, ಜೂ.5: ಮೆಸ್ಕಾಂ ಹೆಬ್ರಿ ಉಪಭಾಗ ಕಛೇರಿಯಲ್ಲಿ ಜೂನ್ 7 ರಂದು ಬೆಳಗ್ಗೆ 10:30ರಿಂದ 12 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ.
ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಮಾಹಿತಿಗೆ ದೂರವಾಣಿ ಸಂ: 08253-251079ನ್ನು ಸಂಪರ್ಕಿಸಬಹುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Next Story