ರಂಗಭೂಮಿ ದಿಗ್ಗಜನ ನಿರ್ಗಮನ
-

ಮನಸ್ಸು ಮಾಡಿದ್ದರೆ ಕಾರ್ನಾಡ್ ಜಗತ್ತಿನ ಯಾವ ಭಾಗದಲ್ಲಾದರೂ ಉದ್ಯೋಗ ಪಡೆದು ಕೈತುಂಬಾ ವೇತನ ಪಡೆಯಬಹುದಿತ್ತು. ಆದರೆ ನನ್ನೊಂದಿಗೆ ಒಮ್ಮೆ ಹೇಳಿದ್ದ ಹಾಗೆ, ‘‘ ನಾಟಕವೆಂಬ ಹುಚ್ಚುತನದ ಆಯ್ಕೆಯನ್ನು ’’ಬದುಕಾಗಿ ಅವರು ಮಾಡಿಕೊಂಡರು.
ಸಾಹಿತಿ, ಚಿತ್ರನಟ, ಚಿಂತಕ,ರಂಗಕಲಾವಿದ ಹೀಗೆ ಹಲವು ಪ್ರತಿಭೆಗಳ ಸಂಗಮ ವಾಗಿದ್ದ ಗಿರೀಶ್ ಕಾರ್ನಾಡ್ ಅವರ ನಿಧನದೊಂದಿಗೆ ವಿವಿಧ ಸೃಜನಶೀಲ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ತಲೆಮಾರುಗಳಾಚೆಗೆ ಆಳವಾದ ಛಾಪನ್ನು ಮೂಡಿಸಿದ ಮಹಾನ್ ಪ್ರತಿಭೆಯ ನಿರ್ಗಮಿಸಿದಂತಾಗಿದೆ.
► ಮಹತ್ತರವಾದ ಧ್ವನಿ
ಎಲ್ಲದಕ್ಕಿಂತಲೂ ಮೊದಲು ಗಿರೀಶ್ ಕಾರ್ನಾಡ್ ಓರ್ವ ನಾಟಕ ಸಾಹಿತಿಯಾಗಿದ್ದಾರೆ. ಆದರೆ ಅವರು ನಟ, ನಿರ್ದೇಶಕ,ಅನುವಾದಕ, ಆಡಳಿತಗಾರ ಅಷ್ಟೇ ಅಲ್ಲದೆ, ಜನಸಾಮಾನ್ಯರಿಗೆ ಹತ್ತಿರವಾದ ಪ್ರಬುದ್ಧ ಚಿಂತಕರೂ ಹೌದು.
ಬಹುತ್ವವಾದಿ ಇತಿಹಾಸ ಹೊಂದಿರುವ ಭಾರತದಲ್ಲಿ ಇಂದು ವೈವಿಧ್ಯದ ಪರಂಪರೆಗಳಿಗೆ ತೀವ್ರವಾದ ಸವಾಲೊಡ್ಡಲಾಗುತ್ತಿದೆ.ಇದೀಗ ಗಿರೀಶ್ ಕಾರ್ನಾಡ್ ಅವರ ನಿಧನದೊಂದಿಗೆ, ಬಹುತ್ವವಾದದ ಆಧಾರಸ್ತಂಭವೊಂದು ಕುಸಿದುಬಿದ್ದಂತಾಗಿದೆ. ಆದಾಗ್ಯೂ ಅವರ ಸಾಧನೆಗಳು ಹಾಗೂ ಬದುಕು, ನಮಗೆ ಒಂದು ಒಳ್ಳೆಯ ಹೋರಾಟವನ್ನು ನಡೆಸಲು ಸ್ಫೂರ್ತಿ ಹಾಗೂ ಮಾರ್ಗದರ್ಶನವನ್ನು ನೀಡುತ್ತವೆ.
ಗಿರೀಶ್ ಕಾರ್ನಾಡ್ ಅವರು 1938ರ ಮೇ 19ರಂದು ಧಾರವಾಡದಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ್ದರು. ಆಗ ಧಾರವಾಡವು ಬ್ರಿಟಿಷ್ ಆಳ್ವಿಕೆಯ ಮುಂಬೈ ಸಂಸ್ಥಾನಕ್ಕೊಳಪಟ್ಟಿತ್ತು. ಅವರ ತಂದೆ ವೈದ್ಯರಾಗಿದ್ದರು. ತಾಯಿ ನರ್ಸ್. ವಿಧವೆಯಾಗಿದ್ದ ಆಕೆ, ಮರುವಿವಾಹವಾಗಿದ್ದುದು ಆಗಿನ ಕಾಲದಲ್ಲಿ ಕ್ರಾಂತಿಕಾರಿ ಹೆಜ್ಜೆಯೆನಿಸಿತ್ತು.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಗಿರೀಶ್ ಕಾರ್ನಾಡ್‌ಗೆಆಕ್ಸ್‌ಫರ್ಡ್ ವಿವಿಯಲ್ಲಿ ಗಣಿತಶಾಸ್ತ್ರ ಅಧ್ಯಯನ ಮಾಡಲು ಪ್ರತಿಷ್ಠಿತ ರೋಡ್ಸ್ ವಿದ್ಯಾರ್ಥಿವೇತನ ದೊರೆತಿತ್ತು. ವಿದ್ಯಾರ್ಥಿಯಾಗಿ ಉತ್ಕೃಷ್ಟ ಶೈಕ್ಷಣಿಕ ಸಾಧನೆ ಮಾಡಿದ ಅವರು ಆಕ್ಸ್‌ಫರ್ಡ್ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಮನಸ್ಸು ಮಾಡಿದ್ದರೆ ಕಾರ್ನಾಡ್ ಜಗತ್ತಿನ ಯಾವ ಭಾಗದಲ್ಲಾದರೂ ಉದ್ಯೋಗ ಪಡೆದು ಕೈತುಂಬಾ ವೇತನ ಪಡೆಯಬಹುದಿತ್ತು. ಆದರೆ ನನ್ನೊಂದಿಗೆ ಒಮ್ಮೆ ಹೇಳಿದ್ದ ಹಾಗೆ, ‘‘ ನಾಟಕವೆಂಬ ಹುಚ್ಚುತನದ ಆಯ್ಕೆಯನ್ನು ’’ಬದುಕಾಗಿ ಅವರು ಮಾಡಿಕೊಂಡರು. ಕಾರ್ನಾಡ್ ಬಹುಶಃ ಅವರ ಐತಿಹಾಸಿಕ ನಾಟಕಗಳಿಂದ ಪ್ರಸಿದ್ಧರಾಗಿರಬಹುದು. ಆದರೆ ಅವರು ಬರೆದ ಹಲವಾರು ನಾಟಕಗಳಲ್ಲಿ ತಘಲಕ್ ನಾಟಕ ಆಗ್ರಸ್ಥಾನ ಪಡೆದಿದೆ.
ಕೊಂಕಣಿ ಮಾತೃಭಾಷೆಯ ಗಿರೀಶ್ ಕಾರ್ನಾಡ್ ಅವರು ಕನ್ನಡದಲ್ಲಿ ಬರೆಯುವುದನ್ನು ಆಯ್ಕೆ ಮಾಡಿಕೊಂಡರು.
ಗತಬದುಕಿನ ಪಯಣಗಳು
ಕೊಂಕಣಿ, ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಭಾವನೆಗಳನ್ನು ಅಭಿವ್ಯಕ್ತಿಪಡಿಸುವಲ್ಲಿ ಬರಹಗಾರನಲ್ಲಿ ಉಂಟಾಗುವ ಸಂಘರ್ಷವು ಅವರೊಂದಿಗೆ ಕೊನೆಯ ತನಕವೂ ಉಳಿದುಕೊಂಡಿತ್ತು. 1970ರ ದಶಕದಲ್ಲಿ ಅವರು ಬರೆದ ಒಡಕಲು ಬಿಂಬ ನಾಟಕದಲ್ಲಿಯೂ ಅದು ಅಭಿವ್ಯಕ್ತಿಗೊಂಡಿತ್ತು. ಆ ನಾಟಕವು ಕೇವಲ ಬರಹಗಾರರಿಗೆ ಅವರ ಆಯ್ಕೆಯ ಭಾಷೆಯ ಕುರಿತು ಮಾತ್ರವೇ ಅಲ್ಲ,ಅವು ಅವರು ಬೆಳೆಸಿಕೊಳ್ಳುವ ಸ್ಥಳೀಯ ಅಥವಾ ಜಾಗತಿಕ ಮಟ್ಟದ ದೃಷ್ಟಿಕೋನದ ಕುರಿತೂ ಆಗಿದೆ.
ಈ ನಾಟಕವು ಅವರ ಸಾಹಿತ್ಯ ಬದುಕಿನಲ್ಲೇ ಮಹತ್ವದ್ದಾಗಿದೆ. ತನ್ನ ವಿರುದ್ಧ ವಿಮರ್ಶಕರು ಮಾಡಿದ್ದ ಆರೋಪಗಳಿಗೆ ಅವರು ಈ ನಾಟಕದಲ್ಲಿ ಉತ್ತರಿಸಿದ್ದರು. ಅಲ್ಲಿಯವರೆಗೆ ಅವರು ತನ್ನ ನಾಟಕಗಳ ಪಾತ್ರಗಳು, ದೃಶ್ಯಗಳು ಹಾಗೂ ಸಂಭಾಷಣೆಗಳ ಸೃಷ್ಟಿಗೆ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಜಗತ್ತನ್ನು ಬಳಸಿಕೊಳ್ಳುತ್ತಿದ್ದರು. ‘ತುಘಲಕ್’, ‘ಟಿಪ್ಪುಸುಲ್ತಾನನ ಕನಸುಗಳು ’ಆಗಲಿ ಅಥವಾ ಥಾಮಸ್ ಮ್ಯಾನ್ನ್ ಅವರ ‘ಟ್ರಾನ್ಸ್‌ಪೋಸ್ಡ್ ಹೆಡ್ಸ್’ನಿಂದ ಪ್ರೇರಿತವಾದ ಹಯವದನ ನಾಟಕ ಇದಕ್ಕೆ ಉತ್ತಮ ನಿದರ್ಶನಗಳಾಗಿವೆ.
ಆದರೆ ಒಡಕಲು ದನಿ ನಾಟಕದೊಂದಿಗೆ ಅವರು ವರ್ತಮಾನದೆಡೆಗೆ ಮರಳಿದ್ದರು.
ಒಡಕಲು ದನಿ ನಾಟಕವು ಟೆಲಿವಿಶನ್
ಸ್ಟುಡಿಯೋ ಒಂದರ ಹಿನ್ನೆಲೆಯಲ್ಲಿ ನಡೆಯುತ್ತದೆ. ಆಧುನಿಕ ಜೀವನ ಹಾಗೂಚಿಂತನೆ ಮೇಲೆ ತಂತ್ರಜ್ಞಾನದ ಪ್ರಭಾವದ ಬಗ್ಗೆ ಗಿರೀಶ್ ಕಾರ್ನಾಡ್ ಅವರು ಈ ನಾಟಕದಲ್ಲಿ ಅವಲೋಕನ ನಡೆಸಿದ್ದಾರೆ. ಅವರು ಬರೆದಿರುವ ‘ಬೆಂದಕಾಳು ಆನ್ ಟೋಸ್ಟ್’, ‘ಮದುವೆ ಆಲ್ಬಮ್’ ನಾಟಕಗಳು ಕೂಡಾ ವರ್ತಮಾನ ಬದುಕಿನ ಕಥಾಹಂದರವನ್ನು ಹೊಂದಿವೆ.
ಆದಾಗ್ಯೂ, ಕಾರ್ನಾಡ್‌ಗೆ ಅವರ ಐತಿಹಾಸಿಕ ನಾಟಕಗಳೇ ಹೆಚ್ಚು ಹೆಸರನ್ನು ತಂದುಕೊಟ್ಟಿವೆ.
► ಪ್ರಭಾವಶಾಲಿ ನಾಟಕ
1964ರಲ್ಲಿ ಪ್ರಕಟವಾದ ತುಘಲಕ್ ನಾಟಕವು ದಿಲ್ಲಿಯ 14ನೇ ಶತಮಾನದ ಸುಲ್ತಾನ ಮುಹಮ್ಮದ್ ಬಿನ್ ತುಘಲಕ್‌ನ ಬದುಕಿನ ಕಥೆಯನ್ನು ಹೊಂದಿದೆ. ಈ ನಾಟಕವು ಭಾರತದ ಎಲ್ಲಾ ಪ್ರಮುಖ ಭಾಷೆಗಳಿಗೆ ಅನುವಾದಗೊಂಡು, ಪ್ರದರ್ಶನವನ್ನು ಕಂಡಿದೆ ಹಾಗೂ ಅದು ಶಾಶ್ವತವಾಗಿ ಭಾರತೀಯ ಹವ್ಯಾಸಿ ನಾಟಕರಂಗದ ನೋಟವನ್ನೇ ಬದಲಾಯಿಸಿದೆ.
ಈ ನಾಟಕವು ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ, ಈ ನಾಟಕದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ನಟ ಸಿ.ಆರ್. ಸಿಂಹ ಅವರಿಗೆ ನೂರಕ್ಕೂ ಅಧಿಕ ಕನ್ನಡ ನಾಟಕಗಲ್ಲಿ ಅಭಿನಯಿಸುವ ಅವಕಾಶ ಒಲಿದುಬಂದಿತು. ಈ ನಾಟಕದ ಮೂಲಕ ಅವರು ತನಗಾಗಿ ಉತ್ತಮವಾದ ವೃತ್ತಿಬದುಕನ್ನು ರೂಪಿಸಿಕೊಂಡರು. ತುಘಕ್ ಪಾತ್ರದ ಛಾಯೆಯಿಂದ ಹೊರಬರಲು ಅವರು ಹರಸಾಹಸ ಪಡಬೇಕಾಯಿತು. 2018ರಲ್ಲಿ ಕಾರ್ನಾಡ್ ಬರೆದ ಕೊನೆಯ ನಾಟಕ ರಾಕ್ಷಸತಂಗಡಿಯೊಂದಿಗೆ ಅವರು ಮತ್ತೆ ಇತಿಹಾಸಕ್ಕೆ ಮರಳಿದ್ದರು. ಈ ಮಾರ್ಮಿಕವಾದ ನಾಟಕವು, ರಾಜಕೀಯಲಾಭಕ್ಕಾಗಿ ಶತಮಾನಗಳಷ್ಟು ಪುರಾತನವಾದ ಹಿಂದೂ-ಮುಸ್ಲಿಂ ಬಾಂಧವ್ಯದಲ್ಲಿ ಒಡಕು ಮೂಡಿಸುವ ಸನ್ನಿವೇಶವಿರುವ ವರ್ತಮಾನ ಕಾಲದ ಭಾರತಕ್ಕೆ ಕೆಲವೊಂದು ನೀತಿಪಾಠಗಳನ್ನು ಬೋಧಿಸುತ್ತದೆ.
ಸಿನೆಮಾ ರಂಗದಲ್ಲೂ ಕಾರ್ನಾಡ್ ಅವರ ಸಾಧನೆ ಗಮನಾರ್ಹವಾಗಿದೆ. ತನ್ನ ಸಾರ್ವಜನಿಕ ಬದುಕಿನಲ್ಲಿಯೂ ಕಾರ್ನಾಡ್ ಅವರು ಅವಕಾಶ ಸಿಕ್ಕಾಗಲೆಲ್ಲಾ ಧಾರ್ಮಿಕ ಸೌಹಾರ್ದ ಹಾಗೂ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆದ ಬಗ್ಗೆ ಧ್ವನಿಯೆತ್ತುತ್ತಿದ್ದರು. ಭಾರತೀಯ ಇತಿಹಾಸ, ರಾಜಕೀಯ ಹಾಗೂ ಭಾರತೀಯ ಮುಸ್ಲಿಮರನ್ನು ತಪ್ಪಾಗಿ ನಿರೂಪಿಸುತ್ತಿದ್ದ ನೊಬೆಲ್ ಪುರಸ್ಕೃತ ವಿ.ಎಸ್. ನೈಪಾಲ್ ಅವರನ್ನು ಕೂಡಾ ಕಾರ್ನಾಡ್ ಸಾಹಿತ್ಯ ಉತ್ಸವವೊಂದರಲ್ಲಿ ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಗೌರಿ ಲಂಕೇಶ್ ಹತ್ಯೆಗೀಡಾದಾಗ, ಗಿರೀಶ್ ಕಾರ್ನಾಡ್ ಅನಾರೋಗ್ಯದ ನಡುವೆಯೂ ಮೂಗಿಗೆ ಆಮ್ಲ ಜನಕದ ನಳಿಕೆಯನ್ನು ಸಿಲುಕಿಸಿಕೊಂಡು, ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಬೆಂಗಳೂರಿನ ಬೀದಿಗಳಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ದೃಶ್ಯವು ಈಗಲೂ ಮನಃಪಟಲದಲ್ಲಿ ಸುಳಿದಾಡುತ್ತಿದೆ. ಕಾರ್ನಾಡ್ ಅವರ ಬದುಕಿನ ರಂಗಪರದೆ ಇಳಿದಿದೆ. ಆದರೆ ಅವರ ಮಾತುಗಳು ಹಾಗೂ ಕೃತಿಗಳು ಚಿರಸ್ಥಾಯಿಯಾಗಿ ಉಳಿಯಲಿದೆ.
ಕಾರ್ನಾಡ್ ‘ಜನಪ್ರಿಯ’ ಮುಖ
ಕರ್ನಾಟಕದ ಉಳಿದೆಲ್ಲ ಕಲಾವಿದರು, ನಾಟಕಕಾರರಿಗೆ ಗಿರೀಶ್ ಕಾರ್ನಾಡ್ ಅವರು ಭಿನ್ನವಾಗಿ ನಿಲ್ಲುವುದಕ್ಕೆ ಇನ್ನೊಂದು ಕಾರಣವಿದೆ. ಆಳದಲ್ಲಿ ಗಂಭೀರ ಚಿಂತಕರು, ಕಲಾವಿದರೂ ಆಗಿರುವ ಕಾರ್ನಾಡ್, ನಟರಾಗಿ ಜನಪ್ರಿಯ ಚಿತ್ರಗಳಲ್ಲಿಯೂ ಗಮನಾರ್ಹವಾಗಿ ಗುರುತಿಸಿಕೊಂಡರು. ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಮೊದಲಾದ ಚಿತ್ರಗಳಲ್ಲಿ ಖಳನಾಯಕ, ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು. ಸಂಸ್ಕಾರ, ಆನಂದ ಭೈರವಿ, ವಂಶವೃಕ್ಷ, ಮಾಲ್ಗುಡಿ ಡೇಸ್ ಮೊದಲಾದವುಗಳು ಕಾರ್ನಾಡರೊಳಗಿನ ಗಂಭೀರ ಕಲಾವಿದನ ಒಂದು ಮುಖವಾದರೆ, ಶ್ರೀಸಾಮಾನ್ಯರು ಆರಾಧಿಸುವ ಜನಪ್ರಿಯ ಚಿತ್ರಗಳಲ್ಲೂ ನಟಿಸಿ ಜನಸಾಮಾನ್ಯರ ಕೈಗೆಟಕಿದ್ದಾರೆ. ಕನ್ನಡದಲ್ಲಿ ನೀ ತಂದ ಕಾಣಿಕೆ, ಎ. ಕೆ. 47, ಆ ದಿನಗಳು, ಸಂತಶಿಶುನಾಳ ಶರೀಫ್ ಮೊದಲಾದ ಚಿತ್ರಗಳಲ್ಲಿ ಅವರು ಗುರುತಿಸಿಕೊಂಡಿದ್ದರೆ, ಹಿಂದಿಯಲ್ಲೂ ಅಪಾರ ಸಂಖ್ಯೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರ ‘ಏಕ್ ಥಾ ಟೈಗರ್’ನಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು. ತಮಿಳಿನಲ್ಲಿ ಪ್ರಭುದೇವ್ ನಟಿಸಿದ ‘ಕಾದಲನ್’ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದರು. ತೆಲುಗಿನಲ್ಲೂ ಇವರು ಹತ್ತಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರರಂಗ
ಸಂಸ್ಕಾರ ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರ.ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಗಿರೀಶ್ ಕಾರ್ನಾಡರದು ಪ್ರಮುಖ ಪಾತ್ರ ಪ್ರಾಣೇಶಾಚಾರ್ಯರದು.ಪಿ.ಲಂಕೇಶಅವರದು ವಿರುದ್ಧ ವ್ಯಕ್ತಿತ್ವದ ಪಾತ್ರ. ಈ ಚಿತ್ರದ ನಿರ್ದೇಶಕರು ಪಟ್ಟಾಭಿರಾಮರೆಡ್ಡಿ ಅವರು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ.
ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪುರಸ್ಕಾರ ಪಡೆಯಿತು.
ಮುಂದೆ ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿಚಿತ್ರಗಳನ್ನು ನಿರ್ದೇಶಿಸಿದರು.ಕಾಡು ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ ಉತ್ಸವ, ಗೋಧೂಳಿಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು.
ಬಳಿಕ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯನ್ನು ಆಧರಿಸಿ ಕಾನೂರು ಹೆಗ್ಗಡತಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು.
ಇದಲ್ಲದೆಕನಕ ಪುರಂದರ, ದ.ರಾ.ಬೇಂದ್ರೆ ಹಾಗೂ ಸೂಫಿ ಪಂಥ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು.
ಪರಿಸರ ವಿನಾಶ ಕುರಿತು ಚೆಲುವಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು.
ಸಾಧಕನ ಹಿರಿಮೆ
► ಕಾರ್ನಾಡ್ ಅವರಿಗೆ ಪ್ರಶಸ್ತಿ ಬಂದಾಗ ಸೌಜನ್ಯದಿಂದಲೇ ಮರಾಠಿಯ ವಿಜಯ ತೆಂಡೂಲ್ಕರ್ ಅವರಂಥವರಿಗೆ ಈ ಪ್ರಶಸ್ತಿ ಬರಬೇಕಿತ್ತು ಎಂದು ಹೇಳಿ ದೊಡ್ಡತನ ಮೆರೆದಿದ್ದರು.
► ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು ಕುವೆಂಪುರ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು.ಆರ್. ಅನಂತಮೂರ್ತಿಯವರ ಸಂಸ್ಕಾರ ಸಿನೆಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೆ ಕಾರ್ನಾಡ್ ಪಾತ್ರರಾಗಿದ್ದಾರೆ.
► ತಮ್ಮ 42ರ ವಯಸ್ಸಿನಲ್ಲಿ ಕೊಡಗಿನ ವೀರಯೋಧ ಕೋದಂಡೇರ ಗಣಪತಿಯವರ ಪುತ್ರಿ, ಡಾ. ಸರಸ್ವತಿ ಗಣಪತಿಯವರನ್ನು ಅಧಿಕೃತವಾಗಿ ಮದುವೆಯಾದ ಗಿರೀಶರಿಗೆ 2 ಮಕ್ಕಳು, ಶಾಲ್ಮಲಿ ರಾಧಾ ಮತ್ತು ರಘು ಅಮಯ್. 10 ವರ್ಷಗಳ ಕಾಲ, ಲಿವ್-ಇನ್ ಆಗಿ ಸಂಸಾರ ನಡೆಸಿದ ಹಿರಿಮೆ ಕಾರ್ನಾಡರದು.
► ತುಘಲಕ್ ನಾಟಕವನ್ನು ತಮ್ಮ ಮಿತ್ರ ಮತ್ತು ಸಹಾಯಕ ನಿರ್ದೇಶಕ ಕೃಷ್ಣ ಬಸರೂರುರೊಡಗೂಡಿ ಬರೆದಿದ್ದಾಗಿ, ಆ ನಾಟಕದ ಅರ್ಪಣೆಯಲ್ಲಿ ಹೇಳಿದ್ದಾರೆ.
► ಒಂದಾನೊಂದು ಕಾಲದಲ್ಲಿ ಚಿತ್ರವನ್ನು 1977ರಲ್ಲಿ ನಿರ್ದೇಶಿಸುವಾಗ ಕಳರಿಪಯಟ್ಟು ಮತ್ತು ಮುಂತಾದ ಸಾಹಸಕಲೆಗಳನ್ನು ಮೊದಲ ಬಾರಿ ಕನ್ನಡ ತೆರೆಯಲ್ಲಿ ಅಳವಡಿಸಿದ ಹಿರಿಮೆ ಕಾರ್ನಾಡರದ್ದು.
ಸಂದ ಪ್ರಶಸ್ತಿ
► ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
► ಗುಬ್ಬಿ ವೀರಣ್ಣ ಪ್ರಶಸ್ತಿ,
► ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ,
► ಪದ್ಮಶ್ರೀ -1974
► ಪದ್ಮಭೂಷಣ -1992
► ಜ್ಞಾನಪೀಠ -1998
► ಕಾಳಿದಾಸ ಸಮ್ಮಾನ್ - 1998
► ಪ್ರಶಸ್ತಿಗಳ ಗೌರವ ದೊರೆಕಿದೆ.
ಕೃಪೆ: http://www.bbc.com
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.