Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇತರ ಪಕ್ಷಗಳ ಕುಟುಂಬ ರಾಜಕಾರಣ v/s...

ಇತರ ಪಕ್ಷಗಳ ಕುಟುಂಬ ರಾಜಕಾರಣ v/s ಸುಲ್ತಾನ್ ಮೋದಿಯ ಗುಲಾಮ ರಾಜಕಾರಣ

ಯಶವಂತ್ ಸಿನ್ಹಯಶವಂತ್ ಸಿನ್ಹ28 Nov 2020 12:10 AM IST
share
ಇತರ ಪಕ್ಷಗಳ ಕುಟುಂಬ ರಾಜಕಾರಣ v/s ಸುಲ್ತಾನ್ ಮೋದಿಯ ಗುಲಾಮ ರಾಜಕಾರಣ

ಹಿರಿಯರನ್ನು ಮನೆಗೆ ಕಳಿಸಲಾಯಿತು; ಆ ಪೈಕಿ ಕೆಲವರನ್ನು ಒಮ್ಮೆಯೂ ಸಭೆ ಸೇರದ ಮಾರ್ಗದರ್ಶಕ ಮಂಡಳಿಗೆ ಸೇರಿಸಲಾಯಿತು. ಉಳಿದವರು ಯಾವುದೇ ತಗಾದೆ ತೆಗೆಯದೆ ಹೇಳಿದಂತೆ ಮಾಡಿದರು. ಆಮೇಲೆ ಆಡಳಿತಗಾರ ತನಗೆ ಇಷ್ಟವಾದ ಗುಲಾಮನನ್ನು ಆಯ್ಕೆ ಮಾಡಿ ತನಗಿಷ್ಟವಾದ ಹುದ್ದೆ ನೀಡತೊಡಗಿದ. ಒಂದು ರಾಜ್ಯ ಸರಕಾರದಲ್ಲಿ ರಾಜ್ಯ ಸಚಿವರಾಗಿದ್ದವರನ್ನು ತಂದು ಪಕ್ಷದ ಅಧ್ಯಕ್ಷರಾಗಿ ನೇಮಿಸಿ ಪಕ್ಷದ ಎರಡನೇ ಅತಿದೊಡ್ಡ ನಾಯಕನಾಗಿಸಲಾಯಿತು. ಹಾಗೆ ಇತರ ನೆಚ್ಚಿನ ಶಿಷ್ಯರೂ ಉತ್ತಮ ಹುದ್ದೆ ಪಡೆದರು. ಈಗ ಪಕ್ಷದ ವರಿಷ್ಠರು ಎಂದರೆ ಒಬ್ಬ ಸುಲ್ತಾನ ಮತ್ತು ಆತನ ನೆಚ್ಚಿನ ಗುಲಾಮರು. ಈ ಗುಲಾಮ ಸಂತತಿ ಒಂದು ಕುಟುಂಬ ಸಂತತಿಗಿಂತ ಹೇಗೆ ಒಳ್ಳೆಯದು ಎಂದು ಯಾರಾದರೂ ನನಗೆ ಹೇಳುತ್ತೀರಾ?


ಅನಾದಿ ಕಾಲದಿಂದಲೂ ರಾಜಾಡಳಿತ ಮತ್ತು ಸರ್ವಾಧಿಕಾರದಲ್ಲಿ ಅನುವಂಶೀಯತೆಯೇ ಅಧಿಕಾರ ಹಸ್ತಾಂತರಕ್ಕೆ ಮೂಲ ಆಧಾರವಾಗಿ ಸ್ವೀಕೃತವಾಗಿದೆ. ಪ್ರಜಾಪ್ರಭುತ್ವ ಬಂದು ರಾಜಾಡಳಿತ ಹೋದ ಮೇಲೆ ಗಾದೆ ಮಾತಿನಂತೆ ಆಳುವವರು ರಾಣಿಯ ಹೊಟ್ಟೆಯಿಂದಲ್ಲ ಮತ ಪೆಟ್ಟಿಗೆಯಿಂದ ಹುಟ್ಟಿ ಬರುತ್ತಿದ್ದಾರೆ. ಆದರೂ ನಮ್ಮದೂ ಸೇರಿದಂತೆ ಹಲವು ಪ್ರಜಾಪ್ರಭುತ್ವ ದೇಶಗಳಲ್ಲಿ ಕೆಲವು ರಾಜಕೀಯ ಕುಟುಂಬಗಳೇ ಹಲವು ಪೀಳಿಗೆಗಳ ಕಾಲ ಅಧಿಕಾರವನ್ನು ಅನುಭವಿಸುತ್ತಾ ಬಂದಿವೆ. ಭಾರತದಲ್ಲಿ ಇದಕ್ಕೆ ಅತ್ಯುತ್ತಮ ಉದಾಹರಣೆ ನೆಹರೂ ಗಾಂಧಿ ಕುಟುಂಬ. ಈ ಕುಟುಂಬ ನೇರವಾಗಿ ಮೂರು ಪೀಳಿಗೆ ಹಾಗೂ ಪರೋಕ್ಷವಾಗಿ ಒಂದು ಪೀಳಿಗೆ ಸೇರಿದಂತೆ ಒಟ್ಟು ನಾಲ್ಕು ಪೀಳಿಗೆಗಳ ಕಾಲ ಈ ದೇಶವನ್ನು ಆಳಿದೆ. ಈಗ ಅದೇ ಕುಟುಂಬದ ಐದನೇ ಪೀಳಿಗೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದೆ. ಇಂದು ಆ ಕುಟುಂಬ ಮತ್ತು ಪ್ರಜಾಪ್ರಭುತ್ವದಲ್ಲಿ ಅನುವಂಶೀಯತೆಯ ಸಿದ್ಧಾಂತದ ವಿರುದ್ಧ ಈ ದೇಶದ ಪ್ರಧಾನ ಮಂತ್ರಿಯೇ ನೇರವಾಗಿ ದಾಳಿ ನಡೆಸುತ್ತಿದ್ದಾರೆ. ಅವರ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಕುಟುಂಬ ರಾಜಕಾರಣವನ್ನು ದೇಶದ ಜನರು ಸಂಪೂರ್ಣವಾಗಿ ತಿರಸ್ಕರಿಸಬೇಕು. ಈ ವಿಷಯದಲ್ಲಿ ನನಗೆ ಅವರ ಜೊತೆ ಸಂಪೂರ್ಣ ಸಹಮತವಿದೆ. ಆದರೆ ಈ ಕುಟುಂಬ ರಾಜಕಾರಣಕ್ಕೆ ಬದಲು ಅವರು ತೋರಿಸುತ್ತಿರುವ ಪರ್ಯಾಯ ಯಾವುದು ? ಈ ಬಗ್ಗೆ ಸ್ವಲ್ಪವಿವರವಾಗಿ ಚರ್ಚಿಸೋಣ.

ಇವತ್ತು ಭಾರತದಲ್ಲಿ ನೆಹರೂ ಗಾಂಧಿ ಕುಟುಂಬವೊಂದೇ ಈ ಕುಟುಂಬ ರಾಜಕಾರಣ ಮಾಡುತ್ತಿರುವುದಲ್ಲ. ದೇಶಾದ್ಯಂತ ಹಲವು ಕುಟುಂಬಗಳು ಹೀಗೆ ರಾಜಕೀಯ ಅಧಿಕಾರ ಅನುಭವಿಸುತ್ತಿವೆ. ಈ ಪೈಕಿ ಕೆಲವರಂತೂ ಕುಟುಂಬ ರಾಜಕಾರಣವನ್ನು ಖಂಡತುಂಡವಾಗಿ ವಿರೋಧಿಸುತ್ತಲೇ ರಾಜಕೀಯ ಪ್ರಾರಂಭಿಸಿ ಸ್ವತಃ ಅವರಿಗೆ ಅವಕಾಶ ಸಿಗುವಾಗ ಅದೇ ಬಲೆಗೆ ಬಿದ್ದುಬಿಟ್ಟವರು. ಪ್ರಜಾಪ್ರಭುತ್ವದಲ್ಲಿ ಕುಟುಂಬ ರಾಜಕಾರಣವನ್ನು ವಿರೋಧಿಸಬೇಕೇ? ಖಂಡಿತ ವಿರೋಧಿಸಬೇಕು. ಆದರೆ ರಾಜಕೀಯ ಕುಟುಂಬದ ಕುಡಿಯೊಂದಕ್ಕೆ ಜನರೇ ಚುನಾವಣೆಯಲ್ಲಿ ಗೆಲ್ಲಿಸಿ ಆಶೀರ್ವದಿಸಿದರೆ ಆಗ ಏನು ಮಾಡಬೇಕು? ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅತ್ಯಂತ ಜಿದ್ದಾಜಿದ್ದಿನ ಪೈಪೋಟಿ ನೀಡಿ ಗೆಲುವಿನ ಅಂಚಿಗೆ ಬಂದು ತಲುಪಿದ್ದರು. ಅವರಿಗೆ ಮಾಧ್ಯಮ ಸಹಿತ ಎಲ್ಲರಿಂದ ವ್ಯಾಪಕ ಪ್ರಶಂಸೆ ಸಿಕ್ಕಿತು. ಪ್ರಧಾನಿ ಮತ್ತು ಅವರ ಪಕ್ಷವನ್ನು ಹೊರತುಪಡಿಸಿ ಬೇರೆ ಯಾರೂ ತೇಜಸ್ವಿಯ ಕುಟುಂಬ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ, ಪಕ್ಷದ ಹುದ್ದೆಗಳಿಗೆ ಚುನಾವಣೆ ನಡೆಸುವ ಪಕ್ಷ, ಸಾಮಾನ್ಯ ಕಾರ್ಯಕರ್ತರಿಗೂ ಅರ್ಹತೆ ಹಾಗೂ ಕೆಲಸಕ್ಕೆ ತಕ್ಕ ಸ್ಥಾನಮಾನ ಸಿಗುವ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯ ಪರಿಸ್ಥಿತಿ ಹೇಗಿದೆ ಈಗ? ಆ ಪಕ್ಷದಲ್ಲಿ ಹಲವು ವರ್ಷಗಳ ಕಾಲ ಇದ್ದ ನನಗೆ ಅಲ್ಲಿನ ಆಂತರಿಕ ಪ್ರಜಾಪ್ರಭುತ್ವ ಎಷ್ಟು ಟೊಳ್ಳು ಎಂದು ಚೆನ್ನಾಗಿ ಗೊತ್ತಿದೆ.

ಅಲ್ಲಿ ಆಂತರಿಕ ಚುನಾವಣೆಗಳು ನಡೆದರೂ ಅದು ಬರೇ ಹೆಸರಿಗೆ ಮಾತ್ರ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಯಾರು ಯಾವ ಸ್ಥಾನ ಪಡೆಯಬೇಕು ಎಂದು ಮೊದಲೇ ಪಕ್ಷದ ಹಾಗೂ ಆರೆಸ್ಸೆಸ್‌ನ ಕೆಲವೇ ಕೆಲವು ಹಿರಿಯ ನಾಯಕರ ಗುಂಪು ಮೊದಲೇ ನಿರ್ಧರಿಸುತ್ತದೆ. ಆಮೇಲೆ ಹೆಸರಿಗೆ ಮಾತ್ರ ಚುನಾವಣೆ ನಡೆದು ವಿಜೇತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗುತ್ತದೆ. ಒಮ್ಮೆ ಈ ಪದ್ಧತಿಗೆ ಸವಾಲು ಹಾಕಬೇಕು ಎಂದು ನಾನು ನಿರ್ಧರಿಸಿದೆ. ಆಗ ನಿತಿನ್ ಗಡ್ಕರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಅವರಿಗೆ ಎರಡನೇ ಅವಧಿ ನೀಡಬೇಕು ಎಂದು ಪಕ್ಷದ ಬಾಸ್‌ಗಳು ಆಗಲೇ ನಿರ್ಧರಿಸಿದ್ದರು. ಇದಕ್ಕೆ ತಡೆ ಹಾಕಲು ನಾನು ನಿರ್ಧರಿಸಿದೆ. ಅಧ್ಯಕ್ಷ ಹುದ್ದೆಯ ಚುನಾವಣೆಗೆ ಎಲ್ಲ ವ್ಯವಸ್ಥೆ ಆಗಿತ್ತು. ಚುನಾವಣಾಧಿಕಾರಿಯೂ ನೇಮಕವಾಗಿದ್ದರು. ಚುನಾವಣಾ ದಿನಾಂಕವೂ ಘೋಷಣೆಯಾಗಿತ್ತು. ಯಾರು ಬೇಕಾದರೂ ಚುನಾವಣಾಧಿಕಾರಿ ಬಳಿ ನಾಮಪತ್ರ ಸಲ್ಲಿಸಲು ಅರ್ಜಿ ಕೇಳಬಹುದಿತ್ತು. ನಾನು ಚುನಾವಣೆ ಗೆಲ್ಲುವುದು ಬಿಡಿ, ನಾಮಪತ್ರ ಸಲ್ಲಿಸಲು ಬೇಕಾದ ಬೆಂಬಲವೂ ನನಗೆ ಸಿಗುವುದಿಲ್ಲ ಎಂದು ನನಗೆ ಗೊತ್ತಿತ್ತು. ಆದರೂ ನಾಮಪತ್ರ ಸಲ್ಲಿಸಲು ಅರ್ಜಿ ಕೇಳಲು ನಿರ್ಧರಿಸಿದೆ. ನಾನು ನಾಮಪತ್ರ ಸಲ್ಲಿಸಲು ಬಯಸಿದ್ದೇನೆ ಎಂಬ ಸುದ್ದಿ ಎಲ್ಲ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಅಷ್ಟಕ್ಕೇ ಪಕ್ಷದ ಬಾಸ್‌ಗಳು ಎಚ್ಚೆತ್ತುಕೊಂಡು ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಗಡ್ಕರಿಗೆ ಇನ್ನೊಂದು ಅವಧಿ ಬೇಡ, ಅವರ ಬದಲಿಗೆ ರಾಜನಾಥ್ ಸಿಂಗ್ ಅವರನ್ನು ಪಕ್ಷಾಧ್ಯಕ್ಷರಾಗಿ ಆಯ್ಕೆ ಮಾಡಲು ನಿರ್ಧರಿಸಲಾಯಿತು.

ನಾನು ನನ್ನ ಕೆಲಸ ಮಾಡಿ ಅಲ್ಲಿಗೆ ಬಿಟ್ಟುಬಿಟ್ಟೆ. ರಾಜನಾಥ್ ಸಿಂಗ್ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿ ಆಂತರಿಕ ಚುನಾವಣೆಯ ಪ್ರಕ್ರಿಯೆಗಳನ್ನಾದರೂ ನಡೆಸುತ್ತದೆ. ಆದರೆ ಕಾಂಗ್ರೆಸ್ ಮತ್ತು ಇತರ ಹಲವು ಪಕ್ಷಗಳು ಈ ಬಗ್ಗೆ ಘೋರ ಅಸಡ್ಡೆ ಪ್ರದರ್ಶಿಸಿ ದಶಕಗಳಿಂದ ಆಂತರಿಕ ಚುನಾವಣೆಗಳನ್ನೇ ನಡೆಸಿಲ್ಲ. ಭಾರತದ ಶ್ರೇಷ್ಠ ಪ್ರಜಾಪ್ರಭುತ್ವದಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ಇತರ ಯಾವ ಪಕ್ಷಗಳಲ್ಲೂ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ಈಗ ಸರಕಾರ ಹಾಗೂ ಪಕ್ಷ ಎರಡರಲ್ಲೂ ಅತ್ಯಂತ ಪ್ರಭಾವೀ ಒಬ್ಬನೇ ನಾಯಕ ಎಂದಾದ ಮೇಲೆ ಬಿಜೆಪಿಯ ಪರಿಸ್ಥಿತಿ ತೀರಾ ಬಿಗಡಾಯಿಸಿದೆ. ಕಾಂಗ್ರೆಸ್‌ನಂತೆ ಕುಟುಂಬವೇ ಮತ್ತೆ ಮತ್ತೆ ಅಧಿಕಾರ ಹಿಡಿದರೆ ಅದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ರಾಹುಲ್ ಗಾಂಧಿಗೆ ಪಕ್ಷದ ನಾಯಕತ್ವ ಬೇಕಿಲ್ಲ. ಆದರೂ ಪಕ್ಷ ಅವರನ್ನು ಬಿಡಲು ಸಿದ್ಧವಿಲ್ಲ. ಇಷ್ಟು ಪುರಾತನ ಪಕ್ಷ ಒಂದು ಕುಟುಂಬದ ಮೇಲೆ ಈ ರೀತಿ ಅವಲಂಬಿತವಾಗಿರುವುದು ಶೋಚನೀಯ ಸ್ಥಿತಿಯಾಗಿದೆ. ಇದು ಮುಂದುವರಿದಷ್ಟೂ ಮೋದಿಯ ಅಧಿಕಾರ ಅಬಾಧಿತ. ಆದರೆ ಬಿಜೆಪಿಯೊಳಗಿನ ಆಂತರಿಕ ಪ್ರಜಾಪ್ರಭುತ್ವದ ಕತೆಯೇನು?

ಇವತ್ತು ಬಿಜೆಪಿ ಗುಲಾಮರ ಪಕ್ಷವಾಗಿದೆ. ಹಾಗೆ ಹೇಳಿದರೆ ನಿಮಗೆ ಅಚ್ಚರಿಯಾಗುತ್ತದೆಯೇ? ಇಲ್ಲ. ಏಕೆಂದರೆ ಭಾರತದಲ್ಲಿ ಈ ರೀತಿಯ ಉದಾಹರಣೆ ಇತಿಹಾಸದಲ್ಲಿದೆ. ಭಾರತ ಹಲವು ದಶಕಗಳ ಕಾಲ ‘ಗುಲಾಮರ ಸಂತತಿಯ’ ಆಳ್ವಿಕೆಯಲ್ಲಿತ್ತು. ಕುತ್ಬುದ್ದೀನ್ ಐಬಕ್ ತನ್ನ ದೊರೆ ಮುಯಿಝುದ್ದೀನ್ ಅವರ ನೆಚ್ಚಿನ ಗುಲಾಮನಾಗಿದ್ದ. ಬಳಿಕ ಆತನೇ ದಿಲ್ಲಿಯ ದೊರೆಯಾದ. ಆತನ ನೆಚ್ಚಿನ ಗುಲಾಮ ಇಲ್ತಮಿಷ್ ಆತನ ಬಳಿಕ ದೊರೆಯಾದ. ಮತ್ತೆ ಇಲ್ತಮಿಷ್‌ನ ನೆಚ್ಚಿನ ಗುಲಾಮ ಬಲ್ಬನ್ ಸರದಿ. ಆಮೇಲೆ ಅದರ ಪತನ ಆರಂಭವಾಯಿತು. ರಝಿಯಾ ಸುಲ್ತಾನರ ಬಳಿಕ ಆ ಸಂತತಿ ಸಂಪೂರ್ಣ ಪತನವಾಯಿತು. ಆದರೆ ಆ ಸಂತತಿ ಮೂರ್ನಾಲ್ಕು ಪೀಳಿಗೆಯಷ್ಟು ಕಾಲ ದಿಲ್ಲಿಯ ಗದ್ದುಗೆ ಆಳಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಬಿಜೆಪಿಯ ಗೋವಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ ಸಂದರ್ಭ ಹೇಗಿತ್ತು ಎಂಬುದನ್ನು ಹೆಚ್ಚಿನವರು ಮರೆತಿದ್ದಾರೆ. ಆದರೆ ಆ ಸಭೆಗೆ ಹೋಗದ ಕಾರಣಕ್ಕೆ ಅವರು ಮೋದಿ ಅವರ ಆಯ್ಕೆಗೆ ವಿರೋಧವಿದ್ದಾರೆ ಎಂದು ಪರಿಗಣಿಸಿ ದಿಲ್ಲಿಯ ಅವರ ಮನೆಯ ಮುಂದೆ ಪ್ರತಿಭಟನಾ ಧರಣಿ ನಡೆದದ್ದು ಅವರಿಗೆ ಮರೆತು ಹೋಗಿರಲಿಕ್ಕಿಲ್ಲ.

ಅದು ಮುಂದಿನ ಬೆಳವಣಿಗೆಗಳ ಮುನ್ಸೂಚನೆಯಾಗಿತ್ತು. ಬಹಳ ಬೇಗ ಇಡೀ ಪಕ್ಷ ಸಂಪೂರ್ಣವಾಗಿ ಮೋದಿ ಎದುರು ಶರಣಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಅವರ ಭರ್ಜರಿ ಜಯ ಅವರನ್ನು ಪಕ್ಷದ ಸುಪ್ರೀಂ ನಾಯಕನಾಗಿ ಮಾಡಿತು ಮತ್ತು ಏನು ಬೇಕು ಅದನ್ನು ಮಾಡುವ ಅವಕಾಶ ಅವರದ್ದಾಯಿತು. ಆ ಅಧಿಕಾರವನ್ನು ಅವರು ಹಲವು ರೀತಿ ಚಲಾಯಿಸಿದರು. ಹಿರಿಯರನ್ನು ಮನೆಗೆ ಕಳಿಸಲಾಯಿತು; ಆ ಪೈಕಿ ಕೆಲವರನ್ನು ಒಮ್ಮೆಯೂ ಸಭೆ ಸೇರದ ಮಾರ್ಗದರ್ಶಕ ಮಂಡಳಿಗೆ ಸೇರಿಸಲಾಯಿತು. ಉಳಿದವರು ಯಾವುದೇ ತಗಾದೆ ತೆಗೆಯದೆ ಹೇಳಿದಂತೆ ಮಾಡಿದರು. ಆಮೇಲೆ ಆಡಳಿತಗಾರ ತನಗೆ ಇಷ್ಟವಾದ ಗುಲಾಮನನ್ನು ಆಯ್ಕೆ ಮಾಡಿ ತನಗಿಷ್ಟವಾದ ಹುದ್ದೆ ನೀಡತೊಡಗಿದ. ಒಂದು ರಾಜ್ಯ ಸರಕಾರದಲ್ಲಿ ರಾಜ್ಯ ಸಚಿವರಾಗಿದ್ದವರನ್ನು ತಂದು ಪಕ್ಷದ ಅಧ್ಯಕ್ಷರಾಗಿ ನೇಮಿಸಿ ಪಕ್ಷದ ಎರಡನೇ ಅತಿದೊಡ್ಡ ನಾಯಕನಾಗಿಸಲಾಯಿತು. ಹಾಗೆ ಇತರ ನೆಚ್ಚಿನ ಶಿಷ್ಯರೂ ಉತ್ತಮ ಹುದ್ದೆ ಪಡೆದರು. ಈಗ ಪಕ್ಷದ ವರಿಷ್ಠರು ಎಂದರೆ ಒಬ್ಬ ಸುಲ್ತಾನ ಮತ್ತು ಆತನ ನೆಚ್ಚಿನ ಗುಲಾಮರು. ಈ ಗುಲಾಮ ಸಂತತಿ ಒಂದು ಕುಟುಂಬ ಸಂತತಿಗಿಂತ ಹೇಗೆ ಒಳ್ಳೆಯದು ಎಂದು ಯಾರಾದರೂ ನನಗೆ ಹೇಳುತ್ತೀರಾ?

ಇದಕ್ಕೆ ಉತ್ತರ - ನಮಗೆ ಇನ್ನಷ್ಟು ಶಕ್ತ ಪ್ರಜಾಪ್ರಭುತ್ವ ಬೇಕು ಎಂಬುದು. ಎಲ್ಲ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದೆ ಭಾರತದ ಪ್ರಜಾಪ್ರಭುತ್ವ ಅಪೂರ್ಣವಾಗಿದೆ. ಹಾಗಾಗಿ ನಾವು ಕುಟುಂಬ ರಾಜಕಾರಣವನ್ನು ತಿರಸ್ಕರಿಸಿದ ಹಾಗೆಯೇ ಗುಲಾಮ ರಾಜಕಾರಣವನ್ನೂ ತಿರಸ್ಕರಿಸಬೇಕು. ಇವತ್ತಿನ ಹೊಸ ಭಾರತದಲ್ಲಿ ಪ್ರತಿಭಟನೆಗೆ ಅವಕಾಶವೇ ಇಲ್ಲ. ಪ್ರತಿಭಟನಾಕಾರನಿಗೆ ಕೂಡಲೇ ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಜನರು ಪ್ರಶ್ನೆ ಕೇಳಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾದ ಸಂಸ್ಥೆಗಳು ಒಂದೋ ನಿರ್ನಾಮವಾಗಿವೆ ಇಲ್ಲವೇ ಮೌಲ್ಯ ಕಳಕೊಂಡಿವೆ. ಮಾಧ್ಯಮಗಳಲ್ಲಿ ಆಳುವವರಿಗಿಂತ ಸರಕಾರದ ವಿರುದ್ಧ ಧ್ವನಿ ಎತ್ತುವವರನ್ನೇ ಹೆಚ್ಚು ಪ್ರಶ್ನಿಸಲಾಗುತ್ತಿದೆ. ನಾಝಿ ಜರ್ಮನಿಯ ಬಗ್ಗೆ ಒಂದು ಪ್ರಶ್ನೆ ಸದಾ ನನ್ನನ್ನು ಕಾಡುತ್ತದೆ: ಒಬ್ಬ ವ್ಯಕ್ತಿಯ ಹುಚ್ಚುತನ ನನಗೆ ಅರ್ಥವಾಗುತ್ತದೆ ಆದರೆ ಒಂದಿಡೀ ದೇಶದ ಉನ್ಮಾದ ನನಗೆ ಅರ್ಥವಾಗುತ್ತಿಲ್ಲ. ಈಗ ನಾವು ಅದೇ ಹಂತದಲ್ಲಿದ್ದೇವೆ. ಭಾರತಕ್ಕೀಗ ಒಂದು ಹೊಸ ವಿರೋಧ ಪಕ್ಷ ತುರ್ತಾಗಿ ಬೇಕಾಗಿದೆ. ಈಗಿರುವ ಚದುರಿ ಹೋಗಿರುವ ವಿರೋಧ ಪಕ್ಷದಿಂದ ಏನೂ ಆಗುವುದಿಲ್ಲ. ಈಗ ಬಿಜೆಪಿ ಹಾಗೂ ವಿಪಕ್ಷದಲ್ಲಿರುವ ಸಕ್ರಿಯ ರಾಜಕಾರಣಿಗಳು ಈ ಬಗ್ಗೆ ಯೋಚಿಸಿ, ಕೂಡಲೇ ಕಾರ್ಯಪ್ರವೃತ್ತರಾಗಿ ನಮ್ಮ ಪ್ರಜಾಪ್ರಭುತ್ವ, ಮೌಲ್ಯಗಳು ಹಾಗೂ ಈ ದೇಶವನ್ನು ರಕ್ಷಿಸುವರೇ?

ಕೃಪೆ: thewire.in 

 ಯಶವಂತ್ ಸಿನ್ಹ

share
ಯಶವಂತ್ ಸಿನ್ಹ
ಯಶವಂತ್ ಸಿನ್ಹ
Next Story
X