Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಧ್ಯಪ್ರದೇಶದಲ್ಲಿ ಆದಿವಾಸಿ ಬಾಲಕಿಯರೇಕೆ...

ಮಧ್ಯಪ್ರದೇಶದಲ್ಲಿ ಆದಿವಾಸಿ ಬಾಲಕಿಯರೇಕೆ ಕಾಣೆಯಾಗುತ್ತಿದ್ದಾರೆ?

ರಿತ್ವಿಕಾ ಮಿತ್ರಾರಿತ್ವಿಕಾ ಮಿತ್ರಾ22 April 2022 11:44 AM IST
share
ಮಧ್ಯಪ್ರದೇಶದಲ್ಲಿ ಆದಿವಾಸಿ ಬಾಲಕಿಯರೇಕೆ ಕಾಣೆಯಾಗುತ್ತಿದ್ದಾರೆ?

ಭಾರತದ ಇತರ ಯಾವುದೇ ರಾಜ್ಯಕ್ಕಿಂತ ಹೆಚ್ಚಿನ ಮಕ್ಕಳು ಮಧ್ಯಪ್ರದೇಶದಲ್ಲಿ ಕಾಣೆಯಾಗುತ್ತಿದ್ದಾರೆ ಮತ್ತು ಈ ಪೈಕಿ ಹೆಚ್ಚಿನವರು ಆದಿವಾಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಕಾಣೆಯಾಗಿರುವ ಮಕ್ಕಳ ಪತ್ತೆಯು ಆದ್ಯತೆಯ ವಿಷಯವಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಭರವಸೆಗಳ ಹೊರತಾಗಿಯೂ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ಕಾಣೆಯಾಗಿ ವಾರಗಳು ಕಳೆದರೂ ಪೊಲೀಸರು ಎಫ್‌ಐಆರ್ ದಾಖಲಿಸುವುದಿಲ್ಲ. ಬಾಲಕಿಯರು ಎರಡು ಅಥವಾ ಮೂರನೇ ಬಾರಿಗೆ ಕಾಣೆಯಾದರೆ ಹೆಚ್ಚಿನ ವೇಳೆ ಎಫ್‌ಐಆರ್‌ಗಳು ದಾಖಲಾಗುವುದೇ ಇಲ್ಲ.

ಧಾರ್ ಜಿಲ್ಲೆಯ ನಾಲಛಾ ತಾಲೂಕಿನ ಗುಗಾಲಿ ಗ್ರಾಮದ ನಿವಾಸಿ ಗಟ್ಟುಲಾಲ್ ಐದು ತಿಂಗಳ ಹಿಂದೆ ಎಂಟನೇ ತರಗತಿಯವರೆಗೆ ಓದಿದ್ದ ತನ್ನ 16ರ ಹರೆಯದ ಪುತ್ರಿಯನ್ನು ದಿನಗೂಲಿಯಾಗಿ ದುಡಿಯಲು ತಾನು ನಂಬಿದ್ದ ಸಂಬಂಧಿಯ ಜೊತೆಗೆ ಇಂದೋರಿನ ಮಹೂ ತಾಲೂಕಿಗೆ ಕಳುಹಿಸಿದ್ದ. ಕೆಲವು ದಿನಗಳ ಬಳಿಕ ಆಕೆ ತಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ನಾಪತ್ತೆಯಾಗಿದ್ದಳು. ಸುಮಾರು ಸಮಯ ಕಾದ ಬಳಿಕ ಗಟ್ಟುಲಾಲ್ ನಾಲಛಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದ. ಹುಡುಗಿ ಇಂದಿಗೂ ಪತ್ತೆಯಾಗಿಲ್ಲ.

‘ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ? ಹೀಗಾಗಿಯೇ ಮಗಳನ್ನು ಕೆಲಸಕ್ಕೆ ಕಳುಹಿಸಿದ್ದೆ’ ಎಂದು ಪರಿಶಿಷ್ಟ ಪಂಗಡವಾಗಿರುವ ಭಿಲ್ ಸಮುದಾಯಕ್ಕೆ ಸೇರಿದ ಲಾಲ್ ಹೇಳಿದ. ಈ ಸಮುದಾಯದಲ್ಲಿ ಸಾಕ್ಷರತೆ ಪ್ರಮಾಣ ಕೇವಲ ಶೇ.42.2ರಷ್ಟಿದ್ದು, ಇದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಸರಾಸರಿ ಸಾಕ್ಷರತೆ ಪ್ರಮಾಣ (ಶೇ.59)ಕ್ಕಿಂತ ತುಂಬ ಕಡಿಮೆಯಿದೆ.

ಮಧ್ಯಪ್ರದೇಶದಿಂದ ಪ್ರತಿವರ್ಷ ಕಾಣೆಯಾಗುತ್ತಿರುವ ಮತ್ತು ಪತ್ತೆಯಾಗದೆ ಉಳಿಯುವ ಸಹಸ್ರಾರು ಬಾಲಕಿಯರಲ್ಲಿ ಲಾಲ್ ಪುತ್ರಿಯೂ ಓರ್ವಳಾಗಿದ್ದಾಳೆ. ಸರಕಾರಿ ಅಂಕಿ-ಅಂಶಗಳಂತೆ 2020ರಲ್ಲಿ ಮಧ್ಯಪ್ರದೇಶದಲ್ಲಿ 8,751 ಮಕ್ಕಳು (ದಿನವೊಂದಕ್ಕೆ 24 ಮಕ್ಕಳು) ಕಾಣೆಯಾಗಿದ್ದು, ಇದು ದೇಶದಲ್ಲಿಯೇ ಗರಿಷ್ಠವಾಗಿತ್ತು. ಈ ಪೈಕಿ ಶೇ.80ಕ್ಕೂ ಅಧಿಕ ಬಾಲಕಿಯರಿದ್ದು, ಹೆಚ್ಚಿನವರು ಆದಿವಾಸಿಗಳಾಗಿದ್ದರು.

2016ರಿಂದ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆ ಯಲ್ಲಿ ಮಕ್ಕಳು ಮಧ್ಯಪ್ರದೇಶದಿಂದ ಕಾಣೆಯಾಗುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಕನಿಷ್ಠ 4,600 ಬಾಲಕಿಯರು ಪತ್ತೆಯಾಗಿಲ್ಲ.

 ಮುಖ್ಯಮಂತ್ರಿ ಚೌಹಾಣ್ 2016ರಲ್ಲಿ ಬಾಲಕಿಯರ ರಕ್ಷಣೆಗಾಗಿ ‘ಆಪರೇಷನ್ ಮುಸ್ಕಾನ್’ಗೆ ಚಾಲನೆ ನೀಡಿದ್ದ ಸಂದರ್ಭದಲ್ಲಿ ಕಾಣೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚುವುದು ತನ್ನ ಸರಕಾರದ ಆದ್ಯತೆಯಾಗಿರುತ್ತದೆ ಎಂದು ಘೋಷಿಸಿದ್ದರು.

 ಆದಾಗ್ಯೂ ಕೆಲವು ಪ್ರಕರಣಗಳಲ್ಲಿ ಮಕ್ಕಳು ನಾಪತ್ತೆಯಾಗಿ ತಿಂಗಳೂ ಕಳೆದರೂ ಎಫ್‌ಐಆರ್‌ಗಳು ದಾಖಲಾಗುತ್ತಿಲ್ಲ. ಹದಿಹರೆಯದ ಹೆಣ್ಣುಮಕ್ಕಳು ನಾಪತ್ತೆಯಾಗುವುದನ್ನು ‘ಮಾಮೂಲು’ ಎಂದು ಪರಿಗಣಿಸಲಾಗುತ್ತದೆ ಎನ್ನುವುದನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಸಂದರ್ಶನಗಳು ಶ್ರುತಪಡಿಸಿವೆ.

ವಾಸ್ತವದಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುವವರೆಗೂ ಎಫ್‌ಐಆರ್‌ಗಳು ದಾಖಲಾಗುವುದಿಲ್ಲ. ಮಕ್ಕಳ ಕಳ್ಳಸಾಗಣೆ ಜಾಲಗಳು ಚುರುಕಾಗಿ ಕೆಲಸ ಮಾಡುತ್ತವೆ. ಮೊದಲ 24 ಗಂಟೆಯೊಳಗೆ ಎಫ್‌ಐಆರ್ ದಾಖಲಾದರೆ ಮಾತ್ರ ನಾಪತ್ತೆಯಾದ ಮಕ್ಕಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯ ಎಂದು ಮಧ್ಯಪ್ರದೇಶದ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ರೇಖಾ ಶ್ರೀಧರ ಹೇಳುತ್ತಾರೆ.

ಮಕ್ಕಳ ನಾಪತ್ತೆಯ ಪ್ರತಿ ಪ್ರಕರಣವನ್ನು,ತನಿಖೆಯು ಬೇರೆ ಕಾರಣಗಳನ್ನು ಒದಗಿಸದಿದ್ದರೆ ಅದನ್ನು ಪೊಲೀಸರು ಅಪಹರಣ ಅಥವಾ ಕಳ್ಳ ಸಾಗಣೆ ಘಟನೆ ಎಂದು ಪರಿಗಣಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು 2013ರಲ್ಲಿ ನಿರ್ದೇಶ ನೀಡಿತ್ತು. ನಾಲ್ಕು ತಿಂಗಳಾದರೂ ಕಾಣೆಯಾದ ಮಕ್ಕಳು ಪತ್ತೆಯಾಗದಿದ್ದರೆ ಪ್ರಕರಣಗಳನ್ನು ರಾಜ್ಯದ ಮಾನವ ಕಳ್ಳಸಾಗಾಣಿಕೆ ನಿಗ್ರಹ ಘಟಕ (ಎಎಚ್‌ಟಿಯು)ಕ್ಕೆ ಒಪ್ಪಿಸಬೇಕಾಗುತ್ತದೆ.

ಸುದ್ದಿಸಂಸ್ಥೆಯು ಮಕ್ಕಳು ನಾಪತ್ತೆಯಾಗಿರುವ ಒಂಭತ್ತು ಕುಟುಂಬಗಳ ಸಂದರ್ಶನ ನಡೆಸಿದೆ. ಈ ಪೈಕಿ ಎಂಟು ಕುಟುಂಬಗಳು ಭಿಲ್ ಸಮುದಾಯಕ್ಕೆ ಸೇರಿದ್ದವು. ಈ ಎಲ್ಲ ಕುಟುಂಬಗಳು ಕಡುಬಡತನದಿಂದ ನರಳುತ್ತಿದ್ದು, ಕೆಲಸಕ್ಕಾಗಿ ವಲಸೆ ಹೋಗುವುದು ಅನಿವಾರ್ಯವಾಗಿದೆ. ರಾಜ್ಯದ ಈ ಭಾಗದಲ್ಲಿ ಬಾಲ ಕಾರ್ಮಿಕ ಪದ್ಧತಿ ಮತ್ತು ಬಾಲ್ಯ ವಿವಾಹಗಳು ಸಾಮಾನ್ಯವಾಗಿವೆ. ಹಲವಾರು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ. ಕೋವಿಡ್ ಸಾಂಕ್ರಾಮಿಕವು ಮೊದಲೇ ಸಂಕಷ್ಟದಲ್ಲಿದ್ದ ಆದಿವಾಸಿ ಕುಟುಂಬಗಳನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ ಮತ್ತು ಬಾಲಕಿಯರು ಇದರ ತೀವ್ರ ದುಷ್ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಸುರಕ್ಷಿತ ವಲಸೆಯನ್ನು ಖಚಿತಪಡಿಸುವಲ್ಲಿ ವೈಫಲ್ಯವು ಮಧ್ಯಪ್ರದೇಶದಲ್ಲಿ ಮಕ್ಕಳ ನಾಪತ್ತೆ ಬಿಕ್ಕಟ್ಟಿನಲ್ಲಿ ತನ್ನ ಪಾಲನ್ನು ಹೊಂದಿದೆ ಎನ್ನುತ್ತಾರೆ ಎನ್‌ಜಿಒ ಎಫ್‌ಎಕ್ಸ್‌ಬಿ ಇಂಡಿಯಾ ಸುರಕ್ಷಾದ ಮುಖ್ಯ ನಿರ್ವಹಣಾಧಿಕಾರಿ ಸತ್ಯ ಪ್ರಕಾಶ್.

ಬಡತನ, ಹವಾಮಾನ ಬದಲಾವಣೆ, ಶಿಕ್ಷಣವನ್ನು ಪಡೆಯಲು ಅಡ್ಡಿಗಳು, ಆಶ್ರಯ ಮತ್ತು ಆಹಾರದ ಕೊರತೆ ಸೇರಿದಂತೆ ಹಲವಾರು ಅಂಶಗಳು ಮಕ್ಕಳು ಕಾಣೆಯಾಗಲು ಪ್ರಮುಖ ಕಾರಣಗಳಾಗಿವೆ.

ತಜ್ಞರ ಪ್ರಕಾರ ಮಧ್ಯಪ್ರದೇಶದಲ್ಲಿ ಮಕ್ಕಳು ಕಾಣೆಯಾಗುತ್ತಿರುವ ಬಿಕ್ಕಟ್ಟನ್ನು ನಿಗ್ರಹಿಸಲು ಹತಾಶ ವಲಸೆ, ಉದ್ಯೋಗಾವಕಾಶಗಳ ಕೊರತೆ ಮತ್ತು ಹಸಿವಿನ ಸಮಸ್ಯೆಗಳನ್ನು ನಿಭಾಯಿಸಬಲ್ಲ ಸಮಗ್ರ ವಿಧಾನವು ಅಗತ್ಯವಾಗಿದೆ.

ಕೃಪೆ:article-14.com

share
ರಿತ್ವಿಕಾ ಮಿತ್ರಾ
ರಿತ್ವಿಕಾ ಮಿತ್ರಾ
Next Story
X