Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ:...

ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ: ಸಂಬಂಧಿಕರನ್ನೂ ಬಿಡದೆ ಹಣ ವಸೂಲಿ

ಸಂಬಂಧಿಕರಿಗೆ 30 ಲಕ್ಷ ರೂ., ಉಳಿದವರಿಗೆ 50 ಲಕ್ಷ ರೂ.

ಜಿ. ಮಹಾಂತೆೇಶ್ಜಿ. ಮಹಾಂತೆೇಶ್14 July 2022 9:08 AM IST
share
ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ: ಸಂಬಂಧಿಕರನ್ನೂ ಬಿಡದೆ ಹಣ ವಸೂಲಿ

ಬೆಂಗಳೂರು, ಜು.13: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮಕೂಟ ರಚಿಸಿಕೊಂಡಿದ್ದವರು ಸಂಬಂಧಿಕರನ್ನೂ ಬಿಡದೇ ಹಣ ವಸೂಲಿ ಮಾಡಿದ್ದರು ಎಂಬ ಸಂಗತಿಯನ್ನು ದೋಷಾರೋಪಣೆ ಪಟ್ಟಿಯನ್ನು ಬಹಿರಂಗಗೊಳಿಸಿದೆ.

ತನ್ನ ಸಂಬಂಧಿಕರು ಎಂಬ ಕಾರಣಕ್ಕಾಗಿ ಆರೋಪಿ ರುದ್ರಗೌಡ ಪಾಟೀಲ್ ಎಂಬಾತ ಒಟ್ಟು ಮೊತ್ತದಲ್ಲಿ 20 ಲಕ್ಷ ರೂ.ಗಳನ್ನು ಕಡಿಮೆ ಮಾಡಿದ್ದ ಎಂಬ ಅಂಶವು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ. ಸಿಐಡಿ ಅಧಿಕಾರಿಗಳು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯು ''ಣhe-ಜಿiಟe.iಟಿ''ಗೆ

ಲಭ್ಯವಾಗಿದೆ.

ವ್ಯವಹಾರ ಕುದುರಿದ ನಂತರ ಪರೀಕ್ಷೆ ಕೇಂದ್ರದಲ್ಲಿ ಸಿಗುವ ನೆರವಿನ ಕುರಿತು ವಿಸ್ತೃತವಾಗಿ ಆರೋಪಿ ರುದ್ರಗೌಡ ಪಾಟೀಲ್ ವಿವರಿಸಿದ್ದ. ‘ನಿಮಗೆ ನಾವು ಒಂದು ಚಿಕ್ಕ ಬ್ಲ್ಯೂಟೂತ್ ಡಿವೈಸ್ ಕೊಡುತ್ತೇವೆ. ಅದನ್ನು ಪರೀಕ್ಷೆ ನಡೆಯುವ ದಿನ ಕಿವಿಯಲ್ಲಿ ಹಾಕಿಕೊಳ್ಳಿ. ನಾವು ನಿಮಗೆ ಕರೆ ಮಾಡಿ ನಿಮ್ಮ ಪ್ರಶ್ನೆಪತ್ರಿಕೆಯಲ್ಲಿ ಬಂದಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತೇವೆ. ಅದನ್ನು ಕೇಳಿಸಿಕೊಂಡು ನೀವು ಉತ್ತರಗಳನ್ನು ಬರೆದರೆ ಸಾಕು ಪಿಎಸ್ಸೈ ಹುದ್ದೆಗೆ ಆಯ್ಕೆಯಾಗುವುದು ಖಚಿತ ಮತ್ತು ನಿಮಗೆ ಕರೆ ಮಾಡಿ ಉತ್ತರಗಳನ್ನು ಹೇಳುವುದಕ್ಕಾಗಿ ನಮಗೆ ಒಂದು ಮೊಬೈಲ್ ಫೋನ್ ಒದಗಿಸಬೇಕು’ ಎಂಬ ಬೇಡಿಕೆಯನ್ನೂ ಇರಿಸಿದ್ದ ಎಂಬ ಸಂಗತಿ ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಅದರಂತೆ 2021 ಅಕ್ಟೋಬರ್ 3ರಂದು ನಡೆದಿದ್ದ ಪಿಎಸ್ಸೈ ಪರೀಕ್ಷೆ ದಿನ ಆರೋಪಿ ಮತ್ತು ಉತ್ತರಿಸುವ ತಂಡವು ಸೇರಿಕೊಂಡು 9901283143 ಮೊಬೈಲ್ ಸಂಖ್ಯೆ ಫೋನ್‌ನಿಂದ 7338633121ಗೆ ಕರೆ ಮಾಡಿಸಿ ಬ್ಲೂಟೂತ್ ಡಿವೈಎಸ್ ಮೂಲಕ ಪ್ರಶ್ನೆಪತ್ರಿಕೆಗಳಿಲ್ಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳಿದ್ದನ್ನು ಕೇಳಿಸಿಕೊಂಡು ಉತ್ತರಗಳನ್ನು ಬರೆದು ಎನ್.ವಿ. ಸುನೀಲ್ ಎಂಬಾತ ಆಯ್ಕೆಗೊಂಡಿದ್ದ ಎಂಬುದು ತಿಳಿದು ಬಂದಿದೆ.

ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖ

ವಸಂತ ನರಿಬೋಳ ಅವರ ಮೂಲಕ ಆರೋಪಿ ರುದ್ರಗೌಡ ಪಾಟೀಲ್ ಅವರನ್ನು ಭೇಟಿ ಮಾಡಿದ್ದ ಆಕಾಂಕ್ಷಿಯೊಬ್ಬರು ಪಿಎಸ್ಸೈ ಹುದ್ದೆಗೆ ಆಯ್ಕೆ ಮಾಡಲು ಸಹಾಯ ಕೋರಿದ್ದರು. ‘ಅಣ್ಣಾ ನಾನು ಪಿಎಸ್ಸೈ ಪರೀಕ್ಷೆಗೆ ಅರ್ಜಿ ಹಾಕಿದ್ದೇನೆ. ಏನಾದರೂ ಮಾಢಿ ನಾನು ಪಿಎಸ್ಸೈ ಹುದ್ದೆಗೆ ಆಯ್ಕೆಯಾಗುವಂತೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಕ್ಕೆ ಬೇರೆ ಕ್ಯಾಂಡಿಡೇಟ್‌ಗಳಿಂದ 50 ಲಕ್ಷ ರೂ. ಪಡೆದುಕೊಳ್ಳುತ್ತೇನೆ. ಸಂಬಂಧಿಕರಿದ್ದೀರಿ, ನೀವು 30 ಲಕ್ಷ ರೂ. ಕೊಡಿ ಸಾಕು. ಬೇರೆ ಯಾವುದಾದರೂ ಈ ಕ್ಯಾಂಡಿಡೇಟ್‌ಗಳಿದ್ದಲ್ಲಿ ಕಳುಹಿಸಿಕೊಡಿ, ಎಂದು ರುದ್ರಗೌಡ ಪಾಟೀಲ್ ಹೇಳಿದ್ದ ಎಂಬುದನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

share
ಜಿ. ಮಹಾಂತೆೇಶ್
ಜಿ. ಮಹಾಂತೆೇಶ್
Next Story
X