Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಠ, ದೇವಸ್ಥಾನ, ಟ್ರಸ್ಟ್ ಗಳಿಗೆ 142...

ಮಠ, ದೇವಸ್ಥಾನ, ಟ್ರಸ್ಟ್ ಗಳಿಗೆ 142 ಕೋಟಿ ರೂ. ಮಂಜೂರು

ಜಿ.ಮಹಾಂತೇಶ್,ಜಿ.ಮಹಾಂತೇಶ್,18 Aug 2022 9:04 AM IST
share
ಮಠ, ದೇವಸ್ಥಾನ, ಟ್ರಸ್ಟ್ ಗಳಿಗೆ 142 ಕೋಟಿ ರೂ. ಮಂಜೂರು

ಬೆಂಗಳೂರು, ಆ.17: ಅಕ್ಷರ ದಾಸೋಹದ ಬಿಸಿಯೂಟ ಕಾರ್ಯಕರ್ತೆಯರಿಗೆ ಯಾವುದೇ ಪರಿಹಾರ ನೀಡದೇ ಅವರನ್ನು ಬೀದಿಗೆ ತಳ್ಳಿರುವ ರಾಜ್ಯ ಬಿಜೆಪಿ ಸರಕಾರವು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯದ ವಿವಿಧ ಸಮಾಜಗಳ ಮಠ, ದೇವಸ್ಥಾನ, ಸಂಘ ಸಂಸ್ಥೆಗಳು, ಟ್ರಸ್ಟ್‌ಗಳಿಗೆ 142.59 ಕೋಟಿ ರೂ. ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.

ಈ ಪೈಕಿ 178 ಮಠಗಳಿಗೆ ಒಟ್ಟು 108.24 ಕೋಟಿ ರೂ., 59 ದೇವಸ್ಥಾನಗಳಿಗೆ 21.35 ಕೋಟಿ ರೂ., ಸಂಘ ಸಂಸ್ಥೆ, ಟ್ರಸ್ಟ್‌ಗಳಿಗೆ 13.00 ಕೋಟಿ ರೂ. ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿ 2022ರ ಆಗಸ್ಟ್ 11ರಂದು ಆದೇಶ ಹೊರಡಿಸಿದೆ. ಆದೇಶದ ಪ್ರತಿ ‘the-file.in’ಗೆ ಲಭ್ಯವಾಗಿದೆ.

ಪಲಿಮಾರು ಮಠ, ಆದಿಚುಂಚನಗಿರಿ ಶಾಖಾ ಮಠ, ವಿರಕ್ತ ಮಠಗಳು, ಜಂಗಮ ಮಠಗಳು, ರಂಭಾಪುರಿ, ವ್ಯಾಸರಾಜ, ಶೃಂಗೇರಿ ಶಂಕರಮಠ, ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್, ಸಿದ್ಧಾರೂಢ ಮಠ, ರಾಘವೇಂದ್ರಸ್ವಾಮಿ ಮಠ, ಬೆಕ್ಕಿನ ಕಲ್ಮಠ, ಮುರುಘರಾಜೇಂದ್ರ ಮಠ ಸೇರಿದಂತೆ ಒಟ್ಟು 178 ಮಠಗಳಿಗೆ ಅನುದಾನ ನೀಡಲು ಆದೇಶ ಹೊರಡಿಸಿದೆ.

ಬಿಜೆಪಿ ರಾಷ್ಟ್ರೀಯ ಘಟಕದ ಧುರೀಣರು ಮುರುಘಾ ಮಠಕ್ಕೆ ಇತ್ತೀಚೆಗಷ್ಟೇ  ಭೇಟಿ ನೀಡಿದ್ದರ ಬೆನ್ನಲ್ಲೇ ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ಗೆ 5 ಕೋಟಿ ರೂ. ಮತ್ತು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿಯ ಚನ್ನಬಸವೇಶ್ವರ ಮಹಾಮಠಕ್ಕೆ 5 ಕೋಟಿ ರೂ. ನೀಡಿದೆ. ಉಳಿದ ಮಠಗಳಿಗಿಂತಲೂ ಅತಿ ಹೆಚ್ಚು ಅನುದಾನವನ್ನು ಈ ಎರಡೇ ಮಠಗಳಿಗೆ ಒದಗಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಉಡುಪಿಯ ಕುಂಜಾರುಗಿರಿಯ ದುರ್ಗಾ ಬೆಟ್ಟದ ಪರಿಸರದಲ್ಲಿ ಮಧ್ವವನ ಅಭಿವೃದ್ಧಿಗಾಗಿ ಪಲಿಮಾರು ಮಠದ ಶ್ರೀ ರಾಮಾಂಜನೇಯ ಪ್ರತಿಷ್ಠಾನ, ಚಿಕ್ಕಮಗಳೂರಿನ ದೊಡ್ಡಕುರುಬರಹಳ್ಳಿಯ ಶ್ರೀ ಬಸವ ತತ್ವ ಪೀಠಕ್ಕೆ  ತಲಾ 3 ಕೋಟಿ ರೂ. ಒದಗಿಸಿದೆ.

ಒಂದು ಕೋಟಿ ಅನುದಾನ ಪಡೆದ ಮಠಗಳ ಪಟ್ಟಿ: ಕೊಪ್ಪಳದ ರಾಘವೇಂದ್ರ ಸ್ವಾಮಿಗಳ ಮಠ, ನರಗುಂದ ತಾಲೂಕಿನ ದೊರೆಸ್ವಾಮಿ ಮಠ, ಪುಣ್ಯಾರಣ್ಯ, ಪತ್ರಿವನಮಠ, ತಿಪಟೂರಿನ ದಸರಿಘಟ್ಟದ ಆದಿಚುಂಚನಗಿರಿ ಶಾಖಾ ಮಠ, ಶ್ರೀ ಶೃಂಗೇರಿ ಶಿವಗಂಗಾ ಶಾರದಾ ಪೀಠ, ಚಿಕ್ಕನಾಯಕನಹಳ್ಳಿಯ ತಮ್ಮಡಿಹಳ್ಳಿ ಮಠ, ಉಡುಪಿಯ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠ, ದಾವಣಗೆರೆಯ ಹಳೇ ಕುಂದುವಾಡದ ಶ್ರೀ ಸದ್ಗುರು ಕರಿಬಸವೇಶ್ವರ ಸ್ವಾಮಿ ಮಠ, ಧಾರವಾಡದ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಉಚಿತ ಪ್ರಸಾದ ನಿಲಯ ಟ್ರಸ್ಟ್, ಧಾರವಾಡ ಜಿಲ್ಲೆಯ ಸಿದ್ದರೂಢ ಮಠ, ಬೆಂಗಳೂರು ಹನುಮಂತ ನಗರದ ಕುಂದಾಪುರ ವ್ಯಾಸರಾಜ ಮಠ, ಬೆಂಗಳೂರು ಗಿರಿ ನಗರದ ಭಂಡಾರಕೆರೆ ಮಠ, ಬೆಳಗಾವಿಯ ಸವದತ್ತಿ ತಾಲೂಕಿನ ಸಂಬಯ್ಯನಮಠ, ಬೆಳಗಾವಿಯ ಶ್ರೀ ಶೂನ್ಯಸಂಪಾದನ ಮಠ, ಹೊಳೆನರಸೀಪುರದ ಎಡತೊರೆ ಶ್ರೀ ಯೋಗನಂದೇಶ್ವರ ಸರಸ್ವತಿ ಮಠ, ಮೈಸೂರು ತಿ ನರಸೀಪುರದ ಶ್ರೀ ವ್ಯಾಸರಾಜ ಮಠ ಸೋಸಲೆ, ಮೈಸೂರಿನ ಮಹಾಲಿಂಗೇಶ್ವರ ಮಠ, ಮಾಗಡಿಯ ಶ್ರೀ ಜಂಗಮ ಮಠ, ಹಾವೇರಿ ಸವಣೂರಿನ ರೇವಣಸಿದ್ದೇಶ್ವರ ಮಠ, ಶಿಗ್ಗಾಂವಿಯ ವಿರಕ್ತ ಮಠ, ಬಂಕಾಪುರದ ಅರಳಳ್ಳೇ ಮಠ, ಸವಣೂರಿನ ಕಲ್ಮಠ, ಹಾವೇರಿಯ ಹುಕ್ಕೇರಿ ಮಠ, ಹಾನಗಲ್‌ನ ಶ್ರೀ ಗುರುನಂಜೇಶ್ವರ ಮಠ, ದೊಡ್ಡಹುಣಸೆ ಕಲ್ಮಠ, ವಿರಕ್ತಮಠ, ಸಿದ್ದಲಿಂಗೇಶ್ವರ ಕಲ್ಮಠ, ಶ್ರೀ ಹೊಸಮಠಕ್ಕೆ ತಲಾ 1 ಕೋಟಿ ರೂ. ಅನುದಾನ ನೀಡಿ ಆದೇಶ ಹೊರಡಿಸಿದೆ.

ತುಮಕೂರು ಜಿಲ್ಲೆಯ ತಿಪಟೂರಿನ ಷಡಕ್ಷರ ಮಠ, ಬೆಂಗಳೂರಿನ ತಿಪ್ಪ ಶೆಟ್ಟಿ ಮಠ, ಹುಕ್ಕೇರಿ ತಾಲೂಕಿನ ಶ್ರೀ ಹಾವೇರಿ ಮಠ, ಬೆಳಗಾವಿ ಅಥಣಿಯ ಶ್ರೀ ಶಿವಯೋಗಿ ಮುರಘೇಂದ್ರ ಮಠ(ಗಚ್ಚನಮಠ), ಶಿವಮೊಗ್ಗದ ಬೆಕ್ಕಿನಕಲ್ಮಠಕ್ಕೆ ತಲಾ 2 ಕೋಟಿ ರೂ. ಅನುದಾನ ಒದಗಿಸಿದೆ.

ಶ್ರೀ ಗುರುಸಿದ್ದರಾಮೇಶ್ವರ ರಾಜಯೋಗ ಸುಕ್ಷೇತ್ರ ಶ್ರೀಮದ್ ಯಳ ನಾಡು 1 ಕೋಟಿ ರೂ., ಶಿರಸಿ ತಾಲೂಕಿನ ಬನವಾಸಿಯ ಮಧುಕೇಶ್ವರ ದೇವಸ್ಥಾನ (ರಥ ನಿರ್ಮಾಣ) 3 ಕೋಟಿ ರೂ., ವಿಜಯಪುರದ ಶ್ರೀ ವ್ಯಾಸಮಧ್ವ ಸಂಸ್ಕೃತ ವಿದ್ಯಾನಿಲಯಕ್ಕೆ 25 ಲಕ್ಷ ರೂ. ಅನುದಾನ ಒದಗಿಸಿದೆ.

ಹಾಗೆಯೇ ಉಡುಪಿಯ ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನ ಗೀತ ಮಂದಿರಕ್ಕೆ 60 ಲಕ್ಷ ರೂ., ಎಸ್‌ಜಿಎಸ್‌ಬಿವಿ ವಿರಕ್ತ ಮಠ ಮಹಾಗಾಂವಕ್ಕೆ 50 ಲಕ್ಷ ರೂ., ಪಂಡಿತ್ ಬಸವರಾಜ ರಾಜಗುರು ಸಭಾಭವನಕ್ಕೆ 1 ಕೋಟಿ ರೂ., ಬೆಂಗಳೂರಿನ ಬಸವನಗುಡಿಯಲ್ಲಿರುವ ದ್ವೈತ ವೇದಾಂತ ಅಧ್ಯಯನ ಮತ್ತು ಸಂಶೋಧನ ಪ್ರತಿಷ್ಠಾನ, ಶಂಕರಪುರಂನ ಶ್ರೀ ಜಯಸತ್ಯಪ್ರಮೋದ ನಿಧಿ, ಬೆಂಗಳೂರಿನ ಶ್ರೀ ವಿಶ್ವೇಶತೀರ್ಥ ಸಂಶೋಧನಾ ಕೇಂದ್ರ, ಮೈಸೂರಿನ ಉತ್ತನಹಳ್ಳಿಯ ಭಾರತೀಯ ಯೋಗಧಾಮಕ್ಕೆ ತಲಾ 1 ಕೋಟಿ ರೂ. ಅನುದಾನ ನೀಡಿ ಆದೇಶ ಹೊರಡಿಸಿದೆ.

ವಿವಿಧ ದೇವಾಲಯಗಳ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲು ಯಾವುದೇ ತಕರಾರು ಇಲ್ಲದೇ ಸಹಮತ ವ್ಯಕ್ತಪಡಿಸಿದ್ದ ಆರ್ಥಿಕ ಇಲಾಖೆಯು ವಿಶೇಷ ಅನುದಾನದಡಿಯಲ್ಲಿ 116 ಕೋಟಿ ರೂ. ಬಿಡುಗಡೆ ಮಾಡಿ 2022ರ ಜುಲೈ 21ರಂದು ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.

share
ಜಿ.ಮಹಾಂತೇಶ್,
ಜಿ.ಮಹಾಂತೇಶ್,
Next Story
X