Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿಶ್ವಕಪ್ ಗೆ ಮುನ್ನ ಕತರ್ ರಾಜಧಾನಿಯಿಂದ...

ವಿಶ್ವಕಪ್ ಗೆ ಮುನ್ನ ಕತರ್ ರಾಜಧಾನಿಯಿಂದ ಸಾವಿರಾರು ವಲಸೆ ಕಾರ್ಮಿಕರ ತೆರವು

30 Oct 2022 8:51 PM IST
share
ವಿಶ್ವಕಪ್ ಗೆ ಮುನ್ನ ಕತರ್ ರಾಜಧಾನಿಯಿಂದ ಸಾವಿರಾರು ವಲಸೆ ಕಾರ್ಮಿಕರ ತೆರವು

ದೋಹಾ,ಅ.30: ವಿಶ್ವಕಪ್ ಸಂದರ್ಭದಲ್ಲಿ ಫುಟ್ಬಾಲ್ ಪ್ರೇಮಿಗಳು ತಂಗಲಿರುವ ರಾಜಧಾನಿ ದೋಹಾದ ಹೃದಯಭಾಗದಲ್ಲಿಯ ಅಪಾರ್ಟ್‌ಮೆಂಟ್‌ಗಳಿಂದ ಸಾವಿರಾರು ವಿದೇಶಿ ಕಾರ್ಮಿಕರನ್ನು ಕತರ್ ಸರಕಾರವು ತೆರವುಗೊಳಿಸಿದೆ.

ಅಧಿಕಾರಿಗಳು ಒಂದು ಡಝನ್‌ಗೂ ಅಧಿಕ ಕಟ್ಟಡಗಳನ್ನು ತೆರವುಗೊಳಿಸಿ ಬೀಗ ಜಡಿದಿದ್ದಾರೆ. ಕೆಲವು ಕಟ್ಟಡಗಳ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಮುಖ್ಯವಾಗಿ ಏಶ್ಯ ಮತ್ತು ಆಫ್ರಿಕಾದ ಕಾರ್ಮಿಕರು ಹೊಸ ಆಶ್ರಯಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯವಾಗಿದೆ. ಹಲವರು ತಾವು ವಾಸವಿದ್ದ ಕಟ್ಟಡಗಳ ಹೊರಗೆ ಫುಟ್‌ಪಾತ್‌ನಲ್ಲಿಯೇ ತಮ್ಮ ಸ್ವತ್ತುಗಳೊಂದಿಗೆ ತಂಗಿದ್ದಾರೆ ಎಂದು ಈ ಕಾರ್ಮಿಕರು ಸುದ್ದಿಸಂಸ್ಥೆಗೆ ತಿಳಿಸಿದರು.

ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ನ.20ರಿಂದ ಆರಂಭಗೊಳ್ಳಲಿದ್ದು, ಅದಕ್ಕೆ ನಾಲ್ಕು ವಾರಗಳ ಮುನ್ನ ಈ ಬೆಳವಣಿಗೆ ನಡೆದಿದೆ. ವಿದೇಶಿ ಕಾರ್ಮಿಕರನ್ನು ಕತರ್ ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಅದರ ನಿರ್ಬಂಧಿತ ಸಾಮಾಜಿಕ ಕಾನೂನುಗಳು ಈಗ ತೀವ್ರ ಜಾಗತಿಕ ಗಮನವನ್ನು ಸೆಳೆದಿವೆ.

ದೋಹಾದ ಅಲ್ ಮನ್ಸೂರಾ ಜಿಲ್ಲೆಯಲ್ಲಿರುವ ಕಟ್ಟಡವೊಂದರಲ್ಲಿ 1,200 ಜನರು ವಾಸವಾಗಿದ್ದು,ಎರಡು ಗಂಟೆಯೊಳಗೆ ಅಲ್ಲಿಂದ ತೆರವುಗೊಳ್ಳುವಂತೆ ಬುಧವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಅಧಿಕಾರಿಗಳು ಅಲ್ಲಿನ ನಿವಾಸಿಗಳಿಗೆ ಸೂಚಿಸಿದ್ದರು. 10:30ರ ಸುಮಾರಿಗೆ ಮತ್ತೆ ಬಂದ ಅಧಿಕಾರಿಗಳು ಬಲವಂತದಿಂದ ಎಲ್ಲರನ್ನೂ ಹೊರಹಾಕಿ ಕಟ್ಟಡಕ್ಕೆ ಬೀಗ ಜಡಿದಿದ್ದರು. ಕೆಲವರಿಗೆ ತಮ್ಮ ಸೊತ್ತುಗಳನ್ನು ಸಂಗ್ರಹಿಸಲು ಸಕಾಲಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಇತರ ಕಟ್ಟಡಗಳಲ್ಲಿಯ ನಿವಾಸಿಗಳೂ ಇದೇ ಸ್ಥಿತಿಯಲ್ಲಿದ್ದು,ತಾವು ಹೋಗುವುದಾದರೂ ಎಲ್ಲಿಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ಕಾರ್ಮಿಕರನ್ನು ತೆರವುಗೊಳಿಸಿದ್ದಕ್ಕೂ ವಿಶ್ವಕಪ್‌ಗೂ ಸಂಬಂಧವಿಲ್ಲ. ದೋಹಾದ ಪ್ರದೇಶಗಳನ್ನು ಮರುರಚಿಸಲು ನಡೆಯುತ್ತಿರುವ ಸಮಗ್ರ ಮತ್ತು ದೀರ್ಘಾವಧಿಯ ಯೋಜನೆಗೆ ಅನುಗುಣವಾಗಿ ಅವರ ತೆರವು ಕಾರ್ಯಾಚರಣೆ ನಡೆದಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಕತರ್ ಸರಕಾರದ ಅಧಿಕಾರಿಯೋರ್ವರು,ಎಲ್ಲರಿಗೂ ಸುರಕ್ಷಿತ ಮತ್ತು ಸೂಕ್ತ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಸೂಕ್ತ ನೋಟಿಸ್ ನೀಡಿಯೇ ಎಲ್ಲರನ್ನೂ ತೆರವುಗೊಳಿಸಲಾಗಿದೆ ಎಂದು ಹೇಳಿದರು.

ಸುದ್ದಿಸಂಸ್ಥೆಯು ವಿಶ್ವ ಫುಟ್‌ಬಾಲ್ ಸಂಸ್ಥೆ ಫಿಫಾದಿಂದ ಪ್ರತಿಕ್ರಿಯೆ ಕೋರಿತ್ತಾದರೂ ಅದು ಸ್ಪಂದಿಸಿಲ್ಲ. ಕತರ್‌ನ ವಿಶ್ವಕಪ್ ಸಂಘಟಕರು ವಿಚಾರಣೆಗಳಿಗೆ ಸರಕಾರವನ್ನು ಬೆಟ್ಟು ಮಾಡಿದ್ದಾರೆ.

ಕತರ್‌ನ 30 ಲಕ್ಷ ಜನಸಂಖ್ಯೆಯಲ್ಲಿ ಸುಮಾರು ಶೇ.85ರಷ್ಟು ವಿದೇಶಿ ಕಾರ್ಮಿಕರಾಗಿದ್ದಾರೆ. ತೆರವುಗೊಳಿಸಲ್ಪಟ್ಟವರಲ್ಲಿ ಹೆಚ್ಚಿನವರು ಚಾಲಕರು,ದಿನಗೂಲಿ ಕಾರ್ಮಿಕರಾಗಿದ್ದಾರೆ ಅಥವಾ ಕಂಪನಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ತಮ್ಮ ವಸತಿಯ ವ್ಯವಸ್ಥೆ ಅವರದೇ ಹೊಣೆಗಾರಿಕೆಯಾಗಿದೆ. ಆದರೆ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ದುಡಿಯುತ್ತಿರುವವರು ಸಾವಿರಾರು ಜನರು ವಾಸವಾಗಿರುವ ಶಿಬಿರಗಳಲ್ಲಿ ಕಂಪನಿಗಳಿಂದ ವಸತಿ ಸೌಲಭ್ಯ ಹೊಂದಿದ್ದಾರೆ.

ಒಂಟ ಪುರುಷರನ್ನು ಗುರಿಯಾಗಿಸಿಕೊಂಡು ತೆರವು ಕಾರ್ಯಾಚರಣೆ ನಡೆಸಲಾಗಿದೆ,ಕುಟುಂಬಗಳೊಂದಿಗೆ ವಾಸವಿರುವ ವಿದೇಶಿ ಕಾರ್ಮಿಕರ ಗೋಜಿಗೆ ಅಧಿಕಾರಿಗಳು ಹೋಗಿಲ್ಲ ಎಂದು ಕಾರ್ಮಿಕನೋರ್ವ ಸುದ್ದಿಸಂಸ್ಥೆಗೆ ತಿಳಿಸಿದ.

ತೆರವುಗೊಳಿಸಲಾಗಿರುವ ಹೆಚ್ಚಿನ ಕಟ್ಟಡಗಳು ವಿಶ್ವಕಪ್‌ಗೆ ಆಗಮಿಸುವ ವಿದೇಶಿಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರಕಾರವು ಬಾಡಿಗೆಗೆ ಪಡೆದಿರುವ ಕಟ್ಟಡಗಳ ಆಸುಪಾಸಿನಲ್ಲಿಯೇ ಇವೆ. ಸಂಘಟಕರ ವೆಬ್‌ಸೈಟ್‌ನಲ್ಲಿ ಇಂತಹ ಕಟ್ಟಡಗಳನ್ನು ಪಟ್ಟಿ ಮಾಡಲಾಗಿದ್ದು,ಅಲ್ ಮನ್ಸೂರಾದ ಕಟ್ಟಡಗಳಲ್ಲಿಯ ಫ್ಲಾಟ್‌ಗಳಿಗೆ ಪ್ರತಿ ರಾತ್ರಿಗೆ 240ರಿಂದ 426 ಡಾ.ವರೆಗೆ ಬಾಡಿಗೆಯನ್ನು ನಿಗದಿಗೊಳಿಸಲಾಗಿದೆ.

ಮುನ್ಸಿಪಲ್ ಅಧಿಕಾರಿಗಳು ಕುಟುಂಬಗಳ ವಸತಿ ಪ್ರದೇಶದಲ್ಲಿ ಕಾರ್ಮಿಕರ ಶಿಬಿರಗಳನ್ನು ನಿಷೇಧಿಸಿರುವ 2010ರ ಕಾನೂನನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಸರಕಾರದ ಅಧಿಕಾರಿಯೋರ್ವರು ತಿಳಿಸಿದರು.

ವಿಶ್ವಕಪ್ ಆಯೋಜಿಸಲು ಕತಾರ್‌ನಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸಿದ ತಮ್ಮನ್ನು ಪಂದ್ಯಾವಳಿ ಸಮೀಪಿಸುತ್ತಿದ್ದಂತೆ ಹೊರಹಾಕಲಾಗುತ್ತಿದೆ ಎಂದು ಕಾರ್ಮಿಕರೋರ್ವರು ದೂರಿಕೊಂಡರು.

ಕೃಪೆ:Scroll.in

share
Next Story
X