Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿಶೇಷಚೇತನರಿಗೆ ಅನುಕಂಪಕ್ಕಿಂತ...

ವಿಶೇಷಚೇತನರಿಗೆ ಅನುಕಂಪಕ್ಕಿಂತ ಪ್ರೋತ್ಸಾಹ ಸಿಗಲಿ

ಇಂದು ವಿಶ್ವ ವಿಶೇಷಚೇತನರ ದಿನ

ಡಾ. ಕರವೀರಪ್ರಭು ಕ್ಯಾಲಕೊಂಡ,  ಬಾಗಲಕೋಟೆಡಾ. ಕರವೀರಪ್ರಭು ಕ್ಯಾಲಕೊಂಡ, ಬಾಗಲಕೋಟೆ3 Dec 2022 9:55 AM IST
share
ವಿಶೇಷಚೇತನರಿಗೆ ಅನುಕಂಪಕ್ಕಿಂತ ಪ್ರೋತ್ಸಾಹ ಸಿಗಲಿ
ಇಂದು ವಿಶ್ವ ವಿಶೇಷಚೇತನರ ದಿನ

ಅಂಗವೈಕಲ್ಯ ಎನ್ನುವುದು ಶಾಪವಲ್ಲ. ಅದು ತಂದೆ ತಾಯಿಗಳ ಜೀವಾಣುಗಳ ವ್ಯತ್ಯಾಸ ಹಾಗೂ ಪರಿಸರದ ಪ್ರಭಾವದಿಂದ ಆಗುವ ಆಘಾತ. ವಿಶೇಷಚೇತನರು ಎದೆಗುಂದಬೇಕಾಗಿಲ್ಲ. ಇಂದು ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಹತ್ತು ಹಲವು ಮಾರ್ಗಗಳಿವೆ. ಸರಕಾರವೂ ನೆರವಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಬೇರೆಯವರಂತೆ ಅವರೂ ಸಮಾಜದ ಆಧಾರಸ್ಥಂಭಗಳಾಗಬಹುದು.

ಪ್ರತೀವರ್ಷ ಡಿಸೆಂಬರ್ 3ರಂದು ಅಂತರ್‌ರಾಷ್ಟ್ರೀಯ ವಿಶೇಷಚೇತನರ ದಿನಾಚರಣೆಯನ್ನು 1992ರಿಂದ ವಿಶ್ವ ಸಂಸ್ಥೆಯ ಸೂಚನೆಯಂತೆ ಆಚರಿಸುತ್ತ ಬಂದಿದ್ದೇವೆ. ಇದರ ಉದ್ದೇಶ- ಅಂಗಾಂಗ ವೈಕಲ್ಯ ಹೊಂದಿದವರೂ ಆರೋಗ್ಯವಂತರಾಗಿ ಬಾಳಿ ಬದುಕುವ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ಪ್ರಚುರ ಪಡಿಸುವುದು ಮತ್ತು ರಾಜಕೀಯ, ಹಣಕಾಸಿನ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಆಯಾಮಗಳಲ್ಲಿ ವಿಶೇಷಚೇತನರನ್ನು ತೊಡಗಿಸಿಕೊಳ್ಳಲು ಜಾಗೃತಿಯನ್ನುಂಟು ಮಾಡುವುದು. 1976ರಲ್ಲಿ ವಿಶ್ವಸಂಸ್ಥೆಯಲ್ಲಿ ಅಂಗವೈಕಲ್ಯ ಸಮಸ್ಯೆಯ ಬಗ್ಗೆ ಪ್ರಸ್ತಾವವಾಗಿ, ಆನಂತರ 1981ರಲ್ಲಿ ಅಂತರ್‌ರಾಷ್ಟ್ರೀಯ ವಿಶೇಷಚೇತನರ ವರ್ಷಾಚರಣೆಗೆ ನಿರ್ಧರಿಸಲಾಯಿತು. ಆ ವರ್ಷವಿಡೀ ಮಾಹಿತಿ ಕಲೆಹಾಕಿ ವಿಶ್ಲೇಷಣೆ ಮಾಡಿತು. ಸಮಸ್ಯೆಯ ಆಳ ಅಗಲ ಅರಿತು, ಅವರಿಗೆ ಮನೋಧೈರ್ಯ ತುಂಬಲು, ಕೀಳರಿಮೆ ತೊಲಗಿಸಲು, ಸಿಗುವ ಸೌಲಭ್ಯಗಳ ಸಮರ್ಪಕವಾಗಿ ಬಳಸಿಕೊಳ್ಳಲು, ಹುರುಪು ಹುಮ್ಮಸ್ಸು ತುಂಬಲು ಪ್ರತೀ ವರ್ಷ ವಿಶೇಷಚೇತನರ ದಿನಾಚರಣೆ ಆಚರಿಸಲು ತೀರ್ಮಾನಿಸಿತು. 

ವೈದ್ಯಕೀಯ ವ್ಯವಸ್ಥೆ ಎಷ್ಟೇ ಮುಂದುವರಿದಿದ್ದರೂ ಕೆಲವೊಮ್ಮೆ ನಮ್ಮ ಕೈಮೀರಿ ಮಕ್ಕಳು ವಿಶೇಷಚೇತನರಾಗುವ ಸಾಧ್ಯತೆಗಳಿವೆ. ಪಾಲಕರ, ಇಡೀ ಸಮಾಜದ ಹಿರಿಮೆ ಅಡಗಿರುವುದು ವಿಶೇಷಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕೈ ಜೋಡಿಸುವ ಕಾಯಕದಲ್ಲಿ. ಯಾವ ತಂದೆ- ತಾಯಿಗಳೂ ತಮ್ಮ ಮಕ್ಕಳು ವಿಶೇಷಚೇತನರಾಗಿ ಹುಟ್ಟಲೆಂದು ಬಯಸುವುದಿಲ್ಲ. ಹೀಗಿದ್ದೂ ಇಂತಹ ಆಘಾತಗಳು ಸಂಭವಿಸಿಬಿಡುತ್ತವೆ. ಆಗ ಅಪ್ಪ, ಅಮ್ಮನ ಜವಾಬ್ದಾರಿ ಹೆಚ್ಚು. ಅದಕ್ಕಿಂತ ಮುಖ್ಯವಾಗಿ ತಮ್ಮ ಮಕ್ಕಳ ಅಂಗವೈಕಲ್ಯವನ್ನು ಒಪ್ಪಿಕೊಂಡು, ಅದಕ್ಕೆ ಚಿಕಿತ್ಸೆ ಪಡೆಯುವುದು ಇನ್ನೂ ಮುಖ್ಯವಾದದ್ದು. ಯಾಕೆಂದರೆ, ಎಷ್ಟೋ ತಂದೆ ತಾಯಿ, ತಮ್ಮ ಮಕ್ಕಳು ಹೀಗೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಹಾಗೆ ಸಿದ್ಧರಿಲ್ಲದಿದ್ದರೆ ಮಕ್ಕಳ ಸ್ಥಿತಿ ಸುಧಾರಿಸುವುದೂ ಇಲ್ಲ. 

ಇಂದಿಗೂ ಅನೇಕ ಪ್ರಾದೇಶಿಕ ನೆಲೆಗಟ್ಟಿನಲ್ಲಿ ಅಂಗವೈಕಲ್ಯ ಒಂದು ಶಾಪ ಎಂಬ ಕೊರಗಿನಲ್ಲೇ ಜನ ಬದುಕುತ್ತಿದ್ದಾರೆ. ಇದಕ್ಕೆ ಕಾರಣ ಜನರಲ್ಲಿರುವ ಅನಕ್ಷರತೆ, ಅಜ್ಞಾನ ಹಾಗೂ ಮೌಢ್ಯ. ಇಂತಹ ಮೌಢ್ಯದ ವಿರುದ್ಧ ಸಮಾಜ, ವ್ಯವಸ್ಥೆಯೊಂದಿಗೆ ವೈದ್ಯರಾದವರು ಸತತವಾಗಿ ಹೋರಾಡಬೇಕಿದೆ. ವೈದ್ಯರು ಕೇವಲ ದೇಹದ ರೋಗಗಳಿಗೆ ಔಷಧಿ ನೀಡಿದರೆ ಸಾಲದು. ವೈದ್ಯರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮೀಣ ಪ್ರದೇಶದ ಮನಸ್ಸುಗಳಲ್ಲಿ ಸುಪ್ತವಾಗಿರುವ ಮೌಢ್ಯ, ಮೂಢನಂಬಿಕೆ, ತಪ್ಪುತಿಳುವಳಿಕೆ ಇತ್ಯಾದಿಗಳಿಗೂ ಚಿಕಿತ್ಸೆ ನೀಡಬೇಕಿದೆ. 

ಜಗತ್ತಿನ ಒಟ್ಟು ಜನಸಂಖ್ಯೆಯ ಪ್ರತಿಶತ 15ರಷ್ಟು ಜನಕ್ಕೆ ಒಂದಲ್ಲ ಒಂದು ಅಂಗವೈಕಲ್ಯ ಅಪ್ಪಿಕೊಂಡಿರುತ್ತದೆ. ಇವರಲ್ಲಿ ಪ್ರತಿಶತ 80ರಷ್ಟು ಜನರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿರುವರು. 

ಸಾಧಕರು 
ವಿಶೇಷಚೇತನರಾಗಿದ್ದೂ ಜಗತ್ತಿನಾದ್ಯಂತ ಹಲವರು ಸಾಧನೆ ಮೆರೆದಿದ್ದಾರೆ. ಪೋಲಿಯೋ ಪೀಡಿತ ಫ್ರಾಂಕ್ಲಿನ್ ರೋಸ್‌ವೆಲ್ಟ್ ಅಮೆರಿಕದ ಅಧ್ಯಕ್ಷರಾಗಿದ್ದರು. ಒಮ್ಮೆಯಲ್ಲ ನಾಲ್ಕು ಅವಧಿಗೆ. ಕಣ್ಣು, ಕಿವಿ ಮತ್ತು ಬಾಯಿಯ ಸಹಾಯವಿಲ್ಲದ ಹೆಲೆನ್ ಕಿಲ್ಲರ್ ವಿಶೇಷಚೇತನರ ಬದುಕಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟವರು.

ಕಲಿಕೆಯಲ್ಲಿ ಹಿಂದಿದ್ದ ಆಲ್ಬರ್ಟ್ ಐನ್‌ಸ್ಟಿನ್, ಅಲೆಕ್ಸಾಂಡರ್ ಗ್ರಾಹಮ್ ಬೆಲ್ ಈ ಜಗತ್ತು ಕಂಡ ಅಪ್ರತಿಮ ವಿಜ್ಞಾನಿಗಳು. ಜಾನ್ ಮಿಲ್ಟನ್ -ಸುಪ್ರಸಿದ್ಧ ಇಂಗ್ಲಿಷ್ ಕವಿ, ಬರಹಗಾರ 42ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡಿದ್ದ. ಎರಡೂ ಕಾಲಿಲ್ಲದ ಸುಧಾ ಚಂದ್ರನ್ ಖ್ಯಾತ ಅಪ್ರತಿಮ ಭರತನಾಟ್ಯ ಕಲಾವಿದೆ, ಕಿವಿ ಕೇಳದ ವಾಲ್ಟ್ ಡಿಸ್ನಿ, ಹಾಲಿವುಡ್ ಸ್ಟಾರ್ ಟಾಮ್ ಕ್ರೂಜಿ .......ವಿಶೇಷಚೇತನರಾಗಿದ್ದರು. ಅಂಗವೈಕಲ್ಯ ಅವರ ಸಾಧನೆಗೆ ಎಂದೂ ಅಡ್ಡಿಯಾಗಿರಲಿಲ್ಲ. 

ವಿಶೇಷಚೇತನರಿಗೆ ಆಶಾಕಿರಣರಾದವರು
ನಾಲ್ಕನೇ ಶತಮಾನದಲ್ಲಿ ಗ್ರೀಕ್ ದೇಶದ ಸಂತರಾದ ಬ್ಯಾಸಿಲ್‌ರವರು ಕಣ್ಣಿನ ದೃಷ್ಟಿಯಿಲ್ಲದವರಿಗಾಗಿ ಒಂದು ಆಸ್ಪತ್ರೆಯನ್ನು ಕ್ಯಾಪಡೋಸಿಯಾದಲ್ಲಿ ಆರಂಭಿಸಿದರು. ಹದಿನೆಂಟನೇ ಶತಮಾನದ ಅಂತ್ಯದಲ್ಲಿ ಕಣ್ಣಿನ ದೃಷ್ಟಿಯಿಲ್ಲದವರಿಗೂ ವಿದ್ಯಾಭ್ಯಾಸ ಮತ್ತು ತರಬೇತಿ ಕೊಡುವ ಯೋಜನೆ ಆರಂಭವಾಯಿತು. ಸ್ವತಃ ಕಣ್ಣು ಕಾಣದಿದ್ದ ಲೂಯಿ ಬ್ರೈಲ್ ಕಣ್ಣಿನ ದೃಷ್ಟಿಯಿಲ್ಲದವರು ಸುಲಭವಾಗಿ ಬರೆಯುವ ಲಿಪಿಯನ್ನು ಕಂಡು ಹಿಡಿದರು. 

ಬ್ರೈಲ್ ಲಿಪಿಯ ಸಹಾಯದಿಂದ ದೃಷ್ಟಿಯಿಲ್ಲದವರು ಇಂದು ವಿದ್ಯೆ ಕಲಿತು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ. ಕಿವಿ ಕೇಳದಿದ್ದವರಿಗೆ ಓದು ಕಲಿಸುವ ಮೊದಲ ಪ್ರಯತ್ನ ಹದಿನಾರನೇ ಶತಮಾನದಲ್ಲಿ ಸ್ಪೇನಿನ ಪೀದ್ರೋದ ಪಾನ್ ಎಂಬಾತನಿಂದ ನಡೆಯಿತು. ಇಂಗ್ಲೆಂಡಿನ ಬ್ರಿಸ್ಟಾಲ್‌ನ ಕಲಾವಿದರಾದ ಜೇಮ್ಸ್‌ಬಿಗ್ಸ್ 1921ರಲ್ಲಿ ಬಿಳಿ ಬಿದಿರಿನ ಕೋಲನ್ನು ದೃಷ್ಟಿಯಿಲ್ಲದವರ ಉಪಯೋಗಕ್ಕೆ ಬಳಕೆಗೆ ತಂದರು. 

ದೃಷ್ಟಿಯಿಲ್ಲದವರು ಇದನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. 1945ರಲ್ಲಿ ಬಾಲ್ಟಿಮೋರ್‌ನ ಹೆಸರಾಂತ ನೇತ್ರ ತಜ್ಞರಾದ ಡಾ.ವಿಲಿಯಂ ರಿಚರ್ಡ್ ಹೂವರ್‌ರವರು ಉದ್ದದ ಅಲ್ಯುಮಿನಿಯಂ ಕಡ್ಡಿಯನ್ನು ದೃಷ್ಟಿಯಿಲ್ಲದವರ ಬಳಕೆಗೆಂದು ಅಭಿವೃದ್ಧಿ ಪಡಿಸಿ, ಸಣ್ಣಗೆ ಮಡಚಿ ಚೀಲದಲ್ಲಿ ಇಟ್ಟುಕೊಳ್ಳುವಂತೆ ವಿನ್ಯಾಸಗೊಳಿಸಿದರು.

ಮನಸ್ಥಿತಿ ಬದಲಾಗಲಿ
ವಿಶೇಷಚೇತನ ಮಕ್ಕಳಲ್ಲಿ ಇತರ ಮಕ್ಕಳಿಗಿಂತ ಹೆಚ್ಚು ಪ್ರತಿಭೆ ಇರಬಹುದು. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಬೇಕು. ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕ ತರಬೇತಿ ಕೇಂದ್ರಗಳಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬಹುದು. ಸಮಾಜದಲ್ಲಿ ವಿಶೇಷಚೇತನರ ಬಗೆಗಿರುವ ಧೋರಣೆ ಬದಲಾಗಬೇಕು. ಅವರಿಗೆ ಅಯ್ಯೋ ಪಾಪ ಎನ್ನುವ ಕನಿಕರದ ಕಂಬನಿಬೆರೆತ ಮಾತುಗಳಿಗಿಂತ ನಿನ್ನಲ್ಲಿ ಸಾಧಿಸುವ ಛಲವಿದೆ, ಸಾಧಿಸು ಎನ್ನುವ ಪ್ರೋತ್ಸಾಹದ ನುಡಿಗಳು ಬೇಕು. ಅವರು ಸಾಧನೆಗೈದ ಬಳಿಕ ಅವರನ್ನು ಇತರ ಸಾಧಕರಂತೆ ಸಮಾನವಾಗಿ ಗೌರವಿಸಬೇಕು. 

ಅಂಗವೈಕಲ್ಯ ಎನ್ನುವುದು ಶಾಪವಲ್ಲ. ಅದು ತಂದೆ ತಾಯಿಗಳ ಜೀವಾಣುಗಳ ವ್ಯತ್ಯಾಸ ಹಾಗೂ ಪರಿಸರದ ಪ್ರಭಾವದಿಂದ ಆಗುವ ಆಘಾತ. ವಿಶೇಷಚೇತನರು ಎದೆಗುಂದಬೇಕಾಗಿಲ್ಲ. ಇಂದು ವಿಶೇಷಚೇತನರು ಸಮಾಜದ ಮುಖ್ಯ ವಾಹಿನಿಗೆ ಬರಲು ಹತ್ತು ಹಲವು ಮಾರ್ಗಗಳಿವೆ. ಸರಕಾರವೂ ನೆರವಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಬೇರೆಯವರಂತೆ ಅವರೂ ಸಮಾಜದ ಆಧಾರಸ್ಥಂಭಗಳಾಗಬಹುದು. ಇಂದು ಎಲ್ಲ ಕ್ಷೇತ್ರಗಳಲ್ಲಿ ವಿಶೇಷಚೇತನರು ಅಪ್ರತಿಮ ಸಾಧನೆಗೈದಿದ್ದಾರೆ. ಇವರೆಲ್ಲ ವಿಶೇಷಚೇತನರ ಬಾಳಿಗೆ ದಾರಿದೀಪ

share
ಡಾ. ಕರವೀರಪ್ರಭು ಕ್ಯಾಲಕೊಂಡ,  ಬಾಗಲಕೋಟೆ
ಡಾ. ಕರವೀರಪ್ರಭು ಕ್ಯಾಲಕೊಂಡ, ಬಾಗಲಕೋಟೆ
Next Story
X