Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅದೇ ರಾಷ್ಟ್ರೀಯವಾದಿ ನಿರೂಪಣೆ, ಅದೇ...

ಅದೇ ರಾಷ್ಟ್ರೀಯವಾದಿ ನಿರೂಪಣೆ, ಅದೇ ಕಾಗುಣಿತ ದೋಷ: ಹಿಂಡನ್ ಬರ್ಗ್ ವಿರುದ್ಧ ನಕಲಿ ಸುದ್ದಿಗಳ ಸರಪಳಿ!

ತಾನಿಯಾ ರಾಯ್ - thewire.inತಾನಿಯಾ ರಾಯ್ - thewire.in10 Feb 2023 5:12 PM IST
share
ಅದೇ ರಾಷ್ಟ್ರೀಯವಾದಿ ನಿರೂಪಣೆ, ಅದೇ ಕಾಗುಣಿತ ದೋಷ: ಹಿಂಡನ್ ಬರ್ಗ್ ವಿರುದ್ಧ ನಕಲಿ ಸುದ್ದಿಗಳ ಸರಪಳಿ!

ಅದಾನಿ ಗ್ರೂಪ್ ವಿರುದ್ಧ ಶೇರುಗಳ ಬೆಲೆಗಳ ಕೃತಕ ಏರಿಕೆ, ಲೆಕ್ಕಪತ್ರ ವಂಚನೆ ಇತ್ಯಾದಿಗಳನ್ನು ಆರೋಪಿಸಿರುವ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ವರದಿಯಿಂದಾಗಿ ಗ್ರೂಪ್ ಕಂಪನಿಗಳ ಶೇರುಗಳು ತೀವ್ರ ಕುಸಿತವನ್ನು ಕಂಡ ಬಳಿಕ 'ರಾಷ್ಟ್ರೀಯವಾದಿ ನಿರೂಪಣೆ'ಯ ಹಿನ್ನೆಲೆಯಲ್ಲಿ ಹಿಂಡನ್ಬರ್ಗ್ ವಿರುದ್ಧ ಹಲವಾರು ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೊರಹೊಮ್ಮಿವೆ.

ಹಿಂಡನ್ಬರ್ಗ್ ವರದಿಯು ದುರುದ್ದೇಶಪೂರಿತ ಮತ್ತು ಆಧಾರರಹಿತವಾಗಿದೆ ಮಾತ್ರವಲ್ಲ, ಅದು ಭಾರತದ ವಿರುದ್ಧ ವ್ಯವಸ್ಥಿತ ದಾಳಿಯಾಗಿದೆ ಎಂದು ಅದಾನಿ ಗ್ರೂಪ್ ನ ಅಧಿಪತಿ ಗೌತಮ್ ಅದಾನಿ ಪ್ರತಿಕ್ರಿಯಿಸಿದ್ದರು.

ಗ್ರೂಪ್ ಕಂಪನಿಗಳ ವಿರುದ್ಧ ಹಿಂಡನ್ಬರ್ಗ್ ಮಾಡಿದ್ದ ಅರೋಪಗಳನ್ನು ವಿಶ್ಲೇಷಿಸುವ ಬದಲು ಅವುಗಳನ್ನು 'ರಾಷ್ಟ್ರೀಯವಾದಿ' ವಿಷಯವೆಂಬಂತೆ ಬಿಂಬಿಸುತ್ತಿರುವುದು ಅದಾನಿ ಮಾತ್ರವಲ್ಲ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರೂ ಅದಾನಿ ಗ್ರೂಪ್ ಅನ್ನು ಬೆಂಬಲಿಸುವ ಭರದಲ್ಲಿ ಯಾವುದೇ ಪುರಾವೆಗಳಿಲ್ಲದ, ದಾರಿ ತಪ್ಪಿಸುವ ಹೇಳಿಕೆಗಳನ್ನು ಹರಡುತ್ತಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಸಂಜು ವರ್ಮಾ ಫೆ.4ರಂದು ಮಾಡಿದ್ದ ಟ್ವೀಟ್ ನಲ್ಲಿ 'ಶೇರುಗಳ ಬೆಲೆ ತಿರುಚುವಿಕೆಗಾಗಿ ನಿಮ್ಮ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಿರುವುದು ನಿಜವೇ? ನ್ಯೂಯಾರ್ಕ್ ಶೇರು ವಿನಿಮಯ ಕೇಂದ್ರ (ಎನ್ವೈಎಸ್ಇ)ದಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಕುರಿತು ಸಂಶೋಧನೆ ನಡೆಸುವುದರಿಂದ ನಿಮ್ಮನ್ನು ನಿಷೇಧಿಸಲಾಗಿದೆ ಎನ್ನುವುದು ನಿಜವೇ? ನೀವು ಅದಾನಿ ಶೇರುಗಳನ್ನು ಶಾರ್ಟ್ ಸೆಲ್ ಮಾಡಿ ನಂತರ ಅದಾನಿ ಗ್ರೂಪ್ ವಿರುದ್ಧ ವರದಿಯನ್ನು ಪ್ರಕಟಿಸಿದ್ದು ನಿಜವೇ' ಎಂದು ಹಿಂಡನ್ಬರ್ಗ್ ಅನ್ನು ಪ್ರಶ್ನಿಸಿದ್ದರು.

ಇದರ ಬೆನ್ನಿಗೇ ಟ್ವೀಟಿಸಿದ್ದ 'ಜನ್ ಕಿ ಬಾತ್'ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ಥಾಪಕ ಪ್ರದೀಪ್ ಭಂಡಾರಿ ಟ್ವೀಟಿಸಿ 'ಹಿಂಡನ್ಬರ್ಗ್ ಕುರಿತು ಬಚ್ಚಿಡಲಾಗಿರುವ ಮೂರು ಸತ್ಯಗಳು ಇಲ್ಲಿವೆ; ಅದು ಅಮೆರಿಕದಲ್ಲಿ ಮೂರು ಕ್ರಿಮಿನಲ್ ತನಿಖೆಗಳನ್ನು ಎದುರಿಸುತ್ತಿದೆ, ವಂಚನೆ ಆರೋಪದಲ್ಲಿ ಅದರ ಬ್ಯಾಂಕ್ ಖಾತೆಗಳನ್ನು ಸುದೀರ್ಘ ಸಮಯದಿಂದ ಸ್ತಂಭನಗೊಳಿಸಲಾಗಿದೆ ಮತ್ತು ಎನ್ವೈಎಸ್ಇಯಲ್ಲಿನ ಕಂಪನಿಗಳ ವಿರುದ್ಧ ಯಾವುದೇ ವರದಿಯನ್ನು ಅದು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ' ಎಂದು ಹೇಳಿದ್ದರು.

ಭಂಡಾರಿಯವರ ಟ್ವೀಟ್ ಅನ್ನು ವರ್ಮಾ ಮರುಟ್ವೀಟಿಸಿದ್ದರು. 

ಈ ಹೇಳಿಕೆಗಳನ್ನು ಇನ್ನೋರ್ವ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಕೂಡ ಮರುಟ್ವೀಟಿಸಿದ್ದರು.

2022, ಸೆಪ್ಟಂಬರ್ ನಲ್ಲಿ ಭಾರತ ಜೋಡೊ ಯಾತ್ರೆಗೆ ವ್ಯತ್ಯಯವನ್ನುಂಟು ಮಾಡಲು ನಕಲಿ ಮತ್ತು ಒಡಕನ್ನು ಹುಟ್ಟಿಸುವ ಸುದ್ದಿಗಳನ್ನು ಹರಡುತ್ತಿದ್ದಕ್ಕಾಗಿ ಕಾಂಗ್ರೆಸ್ ಇದೇ ಗಾಂಧಿ ವಿರುದ್ಧ ಕಾನೂನು ಕ್ರಮವನ್ನು ಆರಂಭಿಸಿತ್ತು.

ಫೆ.6ರಂದು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ವಕೀಲರೋರ್ವರು ಇವೇ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು.

'ಮಿಂಟ್'ನ ವರದಿಯಂತೆ ಸದ್ಯಕ್ಕೆ ಹಿಂಡನ್ಬರ್ಗ್ ವಿರುದ್ಧ ತಪ್ಪುಗಳನ್ನು ಮಾಡಿರುವ ಯಾವುದೇ ಆರೋಪಗಳಿಲ್ಲ. ಅದರ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಲಾಗಿದೆ ಎಂದು ಹೇಳುವ ಯಾವುದೇ ವರದಿಗಳೂ ಇಲ್ಲ.

ಎನ್ವೈಎಸ್ಇ ಕಂಪನಿಗಳ ಕುರಿತು ವರದಿಗಳನ್ನು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ ಎಂಬ ಮೂರನೇ ಹೇಳಿಕೆ ಕುರಿತಂತೆ ಹೇಳುವುದಾದರೆ, ಅದಾನಿ ಕುರಿತು ವರದಿಯನ್ನು ಬಿಡುಗಡೆಗೊಳಿಸುವ ಎರಡು ತಿಂಗಳು ಮೊದಲು 2022, ಡಿ.7ರಂದು ಹಿಂಡನ್ಬರ್ಗ್ ಎನ್ವೈಎಸ್ಇಯಲ್ಲಿ ಲಿಸ್ಟ್ ಅಗಿರುವ ಕಂಪನಿಯೊಂದರ ಕುರಿತು ವರದಿಯನ್ನು ಪೋಸ್ಟ್ ಮಾಡಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿಯ ಹೇಳಿಕೆಗಳು ಯಾವ 'ಕ್ರಿಮಿನಲ್ ತನಿಖೆ 'ಗಳ ಕುರಿತು ಮಾತನಾಡುತ್ತಿವೆ ಎನ್ನುವುದು ಸ್ಪಷ್ಟವಾಗಿಲ್ಲ. ಪ್ರತ್ಯೇಕವಾಗಿ (#AdaniFPOFullySubscribed, IndiaINCSupportsAdani)ನಂತಹ ಹ್ಯಾಷ್ಟ್ಯಾಗ್ ಗಳು ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದವು.

ಅದಾನಿ ಎಂಟರ್ಪ್ರೈಸಸ್ನ ಎಫ್ಪಿಒ ಶೇರು ಮಾರಾಟದಲ್ಲಿ ಹೂಡಿಕೆದಾರರಾಗಿ ಶೇರುಗಳನ್ನು ಖರೀದಿಸಲು ಅದಾನಿ ಗ್ರೂಪ್ನೊಂದಿಗೆ ಸಂಬಂಧ ಹೊಂದಿರುವ ಮೂರು ಹೂಡಿಕೆ ನಿಧಿಗಳು ಬದ್ಧವಾಗಿದ್ದವು ಎಂದು ಫೋರ್ಬ್ಸ್ನ ವಿಶ್ಲೇಷಣೆಯು ಬಹಿರಂಗಗೊಳಿಸಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಮಾರಿಷಸ್ನ ಆಯುಷ್ಮತ್ ಲಿ. ಮತ್ತು ಎಲ್ಮ್ ಪಾರ್ಕ್ ಫಂಡ್ ಹಾಗೂ ಭಾರತದ ಏವಿಯೇಟರ್ ಗ್ಲೋಬಲ್ ಇನ್ವೆಸ್ಟ್ಮೆಂಟ್ ಫಂಡ್ ಈ ಮೂರು ಸಂಸ್ಥೆಗಳಾಗಿವೆ. ಈ ಮೂರು ಸಂಸ್ಥೆಗಳು ಒಟ್ಟಾಗಿ ಆ್ಯಂಕರ್ ಹೂಡಿಕೆದಾರರಿಗೆ ಲಭ್ಯವಿರುವ ಶೇ.9.24ರಷ್ಟು ಶೇರುಗಳ ಖರೀದಿಗೆ ಒಪ್ಪಿಕೊಂಡಿದ್ದವು.

ಶೇರು ಮಾರಾಟ ಆರಂಭಗೊಳ್ಳುವ ಒಂದು ದಿನ ಮೊದಲು ಆ್ಯಂಕರ್ ಹೂಡಿಕೆದಾರರಿಗೆ ಶೇರುಗಳನ್ನು ಹಂಚಿಕೆ ಮಾಡಲಾಗುತ್ತದೆ. ಆ್ಯಂಕರ್ ಹೂಡಿಕೆದಾರರಿಂದ ಹೂಡಿಕೆಯು ರಿಟೇಲ್ ಅಥವಾ ಚಿಲ್ಲರೆ ಹೂಡಿಕೆದಾರರಲ್ಲಿ ಶೇರುಗಳ ಬಗ್ಗೆ ವಿಶ್ವಾಸವನ್ನು ಮೂಡಿಸುತ್ತದೆ.

ಆದರೆ 'ಮಿಂಟ್ ವರದಿಯಂತೆ ಚಿಲ್ಲರೆ ಹೂಡಿಕೆದಾರರು ಅದಾನಿ ಎಂಟರ್ಪ್ರೈಸಸ್ನ ಎಫ್ಪಿಒದಿಂದ ದೂರವೇ ಉಳಿದಿದ್ದರು. ಮಾರಾಟಕ್ಕಿದ್ದ ಶೇರುಗಳ ಹೆಚ್ಚಿನ ಭಾಗವನ್ನು ಸಂಸ್ಥೆಗಳು ಮತ್ತು ಹಾಲಿ ಶೇರುದಾರರು ಖರೀದಿಸಿದ್ದರು.

ಕುತೂಹಲದ ವಿಷಯವೆಂದರೆ ಹಿಂಡನ್ಬರ್ಗ್ ತನ್ನ ವರದಿಯನ್ನು ಬಿಡುಗಡೆಗೊಳಿಸುವ ಬಹಳ ಮೊದಲೇ ಅದಾನಿ ಗ್ರೂಪ್ನ ಅತಿಯಾದ ಸಾಲ ಮತ್ತು ಅದರ ಲೆಕ್ಕಪತ್ರ ವಿಧಾನಗಳ ಬಗ್ಗೆ ಕಳವಳಗಳು ವ್ಯಕ್ತಗೊಂಡಿದ್ದವು. ವಿಷಯವು ಮತ್ತೊಮ್ಮೆ ಬೆಳಕಿಗೆ ಬಂದಿರುವುದರಿಂದ ಅದಾನಿ ಗ್ರೂಪ್ನ ಸಾಲ ಆಧಾರಿತ ವಿಸ್ತರಣೆಯ ನಡುವೆ ಇಷ್ಟೊಂದು ತ್ವರಿತ ಬೆಳವಣಿಗೆಯ ಬಗ್ಗೆ ಕೆಲವು ಕಳವಳಗಳನ್ನು ಎತ್ತಲಾಗಿದೆ. ಪ್ರತ್ಯೇಕವಾಗಿ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದೇ ಬಗೆಯ ಕಾಗುಣಿತ ದೋಷದೊಂದಿಗೆ ಹಿಂಡನ್ಬರ್ಗ್ ವಿರುದ್ಧ ಟ್ವೀಟಿಸಿರುವುದು ಈ ವಿಷಯದಲ್ಲಿ ಸಂಘಟಿತ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಕುರಿತು ಪ್ರಶ್ನೆಗಳನ್ನೆಬ್ಬಿಸಿದೆ. ಈ ಎಲ್ಲ ಟ್ವೀಟ್ಗಳಲ್ಲಿ('Nation')  ಅನ್ನು ('Natioin') ಎಂದೇ ಬರೆಯಲಾಗಿತ್ತು! ಈ ಎಲ್ಲ ಟ್ವೀಟ್ಗಳು (IndiaINCSupportsAdan)i ಮತ್ತು  (IndiaStandsWithAdani) ಹ್ಯಾಷ್ಟ್ಯಾಗ್ಗಳೊಂದಿಗೆ ಟ್ರೆಂಡ್ ಆಗಿದ್ದವು.

ಬಹಳಷ್ಟು ನಕಲಿ ಖಾತೆಗಳು ಅದಾನಿಯನ್ನು ಸಮರ್ಥಿಸಿಕೊಂಡು ('#EconomyWillNeverDie ')ಹ್ಯಾಷ್ಟ್ಯಾಗ್ನೊಂದಿಗೆ ಹಿಂಡನ್ಬರ್ಗ್ ವರದಿಯನ್ನು ಗುರಿಯಾಗಿಸಿಕೊಂಡಿವೆ ಎಂದು ಆಲ್ಟ್ ನ್ಯೂಸ್ ನ ಸ್ಥಾಪಕ ಮುಹಮ್ಮದ್ ಝುಬೈರ್ ಟ್ವೀಟಿಸಿದ್ದರು.

ಕೃಪೆ: thewire.in

share
ತಾನಿಯಾ ರಾಯ್ - thewire.in
ತಾನಿಯಾ ರಾಯ್ - thewire.in
Next Story
X