-

ಜನ ಪ್ರಣಾಳಿಕೆ

ಕೃಷಿ ಮತ್ತು ಗ್ರಾಮೀಣ ಜೀವನೋಪಾಯ

-

ಸರಣಿ - 3

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದ ವಿಧಾನ ಸಭಾ ಚುನಾವಣೆ ಘೋಷಣೆಯಾಗಲಿದೆ. ರಾಜ್ಯದ ಅಧಿಕಾರ ಸೂತ್ರವನ್ನು ಹಿಡಿಯಲು ಎಲ್ಲ ರಾಜಕೀಯ ಪಕ್ಷಗಳೂ ಸಜ್ಜಾಗಿವೆ. ಈ ನಿಟ್ಟಿನಲ್ಲಿ ರಾಜ್ಯದ ಸರ್ವ ಪಕ್ಷಗಳಿಗೆ ಮಾರ್ಗಸೂಚಿಯಾಗುವಂತೆ ಕರ್ನಾಟಕದ ಭವಿಷ್ಯದ ಸರ್ವತೋಮುಖ ಅಭಿವೃದ್ಧಿ ಹೇಗಿರಬೇಕೆಂಬ ‘ಜನ ಪ್ರಣಾಳಿಕೆ’ಯನ್ನು ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪರಿಣಿತರಾದ ಚಿಂತಕರು ಸರಣಿ ರೂಪದಲ್ಲಿ ದಾಖಲಿಸಿದ್ದಾರೆ.

"ಕೃಷಿ ಪುನಶ್ಚೇತನಕ್ಕೆ ಮಾರುಕಟ್ಟೆ, ಮುಂಗಡ ಬಂಡವಾಳಗಳೂ ಮುಖ್ಯ. ಅದೇ ರೀತಿಯಲ್ಲಿ ಕೃಷಿಯನ್ನು ಸುಸ್ಥಿರಗೊಳಿಸಿದರೂ ಅದು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡಲಾರದು. ಆದ್ದರಿಂದ ಕೃಷಿಯೊಂದಿಗೆ ಗ್ರಾಮೀಣ ಉದ್ಯಮಶೀಲತೆಯನ್ನೂ ಉತ್ತೇಜಿಸಬೇಕಾಗಿದೆ. ಅಂದರೆ ಗ್ರಾಮ ಭಾರತದ ಪುನಶ್ಚೇತನವು ಬೇಸಾಯ, ಮಣ್ಣಿನ ಫಲವತ್ತತೆ, ಬಂಡವಾಳ ಮಾರುಕಟ್ಟೆ ಭದ್ರತೆ ಹಾಗೂ ಹೆಚ್ಚುವರಿ ಕಿರು ಉದ್ಯಮಗಳನ್ನು ಹೆಣೆಯುವುದನ್ನು ಅವಲಂಬಿಸಿದೆ".

ಕಳೆದ ಕೆಲವು ವರ್ಷಗಳಿಂದ ಗ್ರಾಮ ಭಾರತವು ತೀವ್ರ ನಿರ್ಲಕ್ಷ್ಯಕ್ಕೊಳಗಾಗಿದೆ. ದೂರಗಾಮಿ, ಸುಸ್ಥಿರ ಯೋಜನೆ/ ಕಾರ್ಯಕ್ರಮಗಳನ್ನು ಸರಕಾರವು ರೂಪಿಸದೆ, ತಾತ್ಕಾಲಿಕವಾದ ಪರಿಹಾರೋಪಾಯಗಳನ್ನು ವರ್ಷವರ್ಷ ರೂಪಿಸುತ್ತಾ ಬಿಕ್ಕಟ್ಟನ್ನು ಕ್ಷಣಿಕವಾಗಿ ದೂರ ಸರಿಸುವ ಪ್ರಯತ್ನ ಮಾಡಿದೆ. ಆದರೆ ಗ್ರಾಮೀಣ ಬಿಕ್ಕಟ್ಟು ಅಲೆಗಳೋಪಾದಿಯಲ್ಲಿ ಮತ್ತೆ ಮತ್ತೆ ಅಪ್ಪಳಿಸುತ್ತಿದೆಯೇ ವಿನಃ ಶಮನವಾಗುತ್ತಿಲ್ಲ

ಕರ್ನಾಟಕದ ಗ್ರಾಮ ಭಾರತವನ್ನು ನಾಲ್ಕು ವಿಭಾಗಗಳಾಗಿ ನೋಡಬಹುದು.

ಕರಾವಳಿ, ಮಲೆನಾಡು, ಮಳೆ ಆಶ್ರಿತ ಬಯಲು ಸೀಮೆ ಮತ್ತು ನೀರಾವರಿ ಸೌಲಭ್ಯವಿರುವ ಭಾಗ.

ಹಾಗೆಯೇ ಬೆಳೆಗಳನ್ನು ಅಲ್ಪಕಾಲೀನ (ಸೀಸನಲ್) ಬೇಗ ಕೊಳೆಯುವ ಬೆಳೆ. (seasonal perishables), ಕೊಳೆಯದ/ಕಾಫಿಡಬಹುದಾದ ಬೆಳೆ (non persiables).

ಹಾಗೆಯೇ ಬಹು ವಾರ್ಷಿಕ ಬೆಳೆಗಳಲ್ಲೂ ಈ ವರ್ಗೀಕರಣ ಮಾಡಬಹುದು.

ಇವೆರಡನ್ನೂ ಒಗ್ಗೂಡಿಸಿದರೆ ಕೊಳೆಯುವ/ ಕಾಪಿಡಬಹುದಾದ ಬೆಳೆಗಳನ್ನು ಅಲ್ಪಕಾಲೀನ ಮತ್ತು ದೀರ್ಘ ಕಾಲೀನ ಕೃಷಿಯಲ್ಲಿ ಗಮನಿಸಬಹುದು.

ತರಕಾರಿಗಳು, ಮಾವು ಮತ್ತಿತರ ತೋಟಗಾರಿಕಾ ಹಣ್ಣಿನ ಬೆಳೆಗಳು ಈ ವರ್ಗಕ್ಕೆ ಸೇರಿದರೆ, ಎಲ್ಲಾ ಬಗೆಯ ಧಾನ್ಯ, ಎಣ್ಣೆಕಾಳು, ದ್ವಿದಳ ಧಾನ್ಯ, ಈರುಳ್ಳಿ ಆಲೂಗಡ್ಡೆಗಳನ್ನು ಅಲ್ಪಕಾಲೀನ ಕಾಪಿಡುವ ಬೆಳೆಗಳಾಗಿ ಗುರುತಿಸಿಬಹುದು. ಹಾಗೆಯೇ ಅಡಿಕೆ, ಕಾಫಿ, ತೆಂಗು, ಕಾಳುಮೆಣಸು ಮುಂತಾದವನ್ನು ಕಾಪಿಡುವ ಬೆಳೆಗಳಾಗಿ ಗುರುತಿಸಬಹುದು.

ಇವುಗಳನ್ನು ಸೂಚಿಗಳಾಗಿ ಇಟ್ಟುಕೊಂಡು ಮುಖ್ಯ ನಾಲ್ಕು ವಲಯಗಳ ಬೆಳೆಗಳ ಸ್ಥಳೀಯತೆಗಳನ್ನು ಗುರುತಿಸಿ (ಉದಾ: ಹಾಸನ ಜಿಲ್ಲೆಯಲ್ಲಿ ಕಾಫಿಯಂತಹ ವ್ಯಾಪಾರಿ ಬೆಳೆ, ನೀರಾವರಿ ಭತ್ತ, ಅಲ್ಪಕಾಲೀನ ಮಳೆ ಆಶ್ರಿತ ಬೆಳೆ ವಲಯಗಳಿವೆ.) ಕಾರ್ಯಸೂಚಿಯನ್ನು ಜಿಲ್ಲಾ ಮಟ್ಟದ ರೈತ ತಜ್ಞರು, ಕೃಷಿ ವಿಜ್ಞಾನಿಗಳು ಮತ್ತು ಮಾರುಕಟ್ಟೆ ತಜ್ಞರ ಸಮಿತಿಯ ಮೂಲಕ ಕಾರ್ಯ ಯೋಜನೆ ಸಿದ್ಧಗೊಳಿಸಿ ಜಾರಿಗೊಳಿಸುವುದು.

ಜಿಲ್ಲಾವಾರು ಉತ್ಪಾದನಾ ವೆಚ್ಚದಲ್ಲೂ ವ್ಯತ್ಯಾಸ ಇರುವ ಕಾರಣ ಬೆಲೆ ಆಯೋಗವನ್ನು ಜಿಲ್ಲಾ ಮಟ್ಟದಲ್ಲಿ ರಚಿಸುವುದು ಬಹು ಮುಖ್ಯ. ಇದು ಬೆಳೆಗಳ ಕುರಿತು. ಹಾಗೆಯೇ ರಾಜ್ಯದ ಬಹುತೇಕ ಕೃಷಿ ಜಮೀನಿನ ಫಲವತ್ತತೆ ಕುಸಿದಿದೆ. ಅಂತರ್ಜಲ ಬಳಕೆ ಇರುವ ಜಮೀನುಗಳಲ್ಲಿ ಅಂತರ್ಜಲದ ಪ್ರಮಾಣ ಕುಸಿದಿದೆ. ನೀರಾವರಿ ವ್ಯವಸ್ಥೆ ಇದ್ದಲ್ಲಿ ಈ ಮಣ್ಣಿನ ಫಲವತ್ತತೆ ಕುಸಿದಿರುವುದು ಅರಿವಿಗೆ ಬಾರದಷ್ಟು ರಾಸಾಯನಿಕಗೊಬ್ಬರಗಳ ಮೂಲಕ ಮರೆಮಾಚಬಹುದಾಗಿದೆ.

ಕೃಷಿ ಪುನಶ್ಚೇತನಕ್ಕೆ ಮಾರುಕಟ್ಟೆ, ಮುಂಗಡ ಬಂಡವಾಳಗಳೂ ಮುಖ್ಯ. ಅದೇ ರೀತಿಯಲ್ಲಿ ಕೃಷಿಯನ್ನು ಸುಸ್ಥಿರಗೊಳಿಸಿದರೂ ಅದು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡಲಾರದು. ಆದ್ದರಿಂದ ಕೃಷಿಯೊಂದಿಗೆ ಗ್ರಾಮೀಣ ಉದ್ಯಮಶೀಲತೆಯನ್ನೂ ಉತ್ತೇಜಿಸಬೇಕಾಗಿದೆ. ಅಂದರೆ ಗ್ರಾಮ ಭಾರತದ ಪುನಶ್ಚೇತನವು ಬೇಸಾಯ, ಮಣ್ಣಿನ ಫಲವತ್ತತೆ, ಬಂಡವಾಳ ಮಾರುಕಟ್ಟೆ ಭದ್ರತೆ ಹಾಗೂ ಹೆಚ್ಚುವರಿ ಕಿರು ಉದ್ಯಮಗಳನ್ನು ಹೆಣೆಯುವುದನ್ನು ಅವಲಂಬಿಸಿದೆ.

ಈ ಹಿನ್ನೆಲೆಯಲ್ಲಿ, ಪ್ರಣಾಳಿಕೆಯ ರೂಪದಲ್ಲಿ ಕೆಲವು ಕಾರ್ಯ ಸಾಧು (doable) ಕಾರ್ಯಕ್ರಮಗಳನ್ನು ಮುಂದಿಡಲಾಗಿದೆ.

ಮಳೆ ಆಶ್ರಿತ ಯಾವುದೇ ಬೆಳೆಗೆ ಕನಿಷ್ಠ ಹೆಕ್ಟೇರಿಗೆ 5 ಸಾವಿರ ಪ್ರೋತ್ಸಾಹ ಧನ.

ಉತ್ಪಾದನಾ ವೆಚ್ಚ ಕಡಿಮೆಗೊಳಿಸಲು ಉದ್ಯೋಗ ಖಾತರಿ ಯೋಜನೆಯಲ್ಲಿ ಅಲ್ಪಕಾಲೀನ ಬೆಳೆಗಳ ಬೇಸಾಯ ಸಂಬಂಧಿ ಕೆಲಸಗಳನ್ನೂ ಸೇರಿಸಿ ಕುಟುಂಬವೊಂದಕ್ಕೆ 20 ದಿನಗಳ ಕೆಲಸವನ್ನು ನಿಗದಿ ಪಡಿಸುವುದು. (ಈಗಿರುವಂತೆ ಉದ್ಯೋಗ ಖಾತರಿ ಯೋಜನೆಯಲ್ಲಿ ಸೀಸನಲ್ ಅಲ್ಪಾವಧಿ ಬೆಳೆಗಳಿಗೆ ಈ ಸೌಲಭ್ಯ ಇಲ್ಲದೆ ತೋಟಗಾರಿಕಾ ಬೆಳೆಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಈ ಮೂಲಕ ಅಲ್ಪಾವಧಿ ಮಳೆ ಆಶ್ರಿತ ಬೆಳೆ ಮತ್ತು ನೀರಾವರಿ+ತೋಟಗಾರಿಕಾ ಬೆಳೆಗಳ ನಡುವೆ ಇರುವ ಕಂದಕವನ್ನು ಇನ್ನಷ್ಟು ಹಿಗ್ಗಲಿಸಲಾಗಿದೆ.)

ಹಂಗಾಮಿನ ಆರಂಭದಲ್ಲೇ ಬೇಸಾಯಕ್ಕೊಳಪಟ್ಟ ಆಯಾ ಬೆಳೆಗಳ ಪ್ರದೇಶದ ದಾಖಲೆಯು ಸರಕಾರಕ್ಕೆ ಲಭ್ಯವಿರುವ ಕಾರಣ ಪ್ರತೀ ಹಂತದಲ್ಲೂ ಉಪಗ್ರಹಾಧಾರಿತ ಮುನ್ಸೂಚನೆಯೊಂದಿಗೆ ಇಳುವರಿ ಪ್ರಮಾಣ ಮತ್ತು ಮಾರುಕಟ್ಟೆ ಪ್ರತಿಕ್ರಿಯೆಗಳ ಬಗ್ಗೆ ಮುಂಗಾಣ್ಕೆಯ ಮೂಲಕ ಮಾಹಿತಿ ಹಂಚಿಕೆ.

ಯಾವ ಯಾವ ಬೆಳೆ ಎಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಎಂಬ ದಾಖಲೆ ಸರಕಾರದಲ್ಲಿರುವಾಗ ಅದು ಯಾವಾಗ ಕಟಾವಿಗೆ ಬರುತ್ತದೆ, ಎಷ್ಟು ಇಳುವರಿಯಾಗಬಹುದು ಎಂಬ ವಿವರವೂ ಸರಕಾರದಲ್ಲಿರುತ್ತದೆ. ಇದರೊಂದಿಗೇ ಬೆಲೆ ಮುಂಗಾಣ್ಕೆಯನ್ನೂ ಪಡೆಯುವುದು ಕಷ್ಟವಲ್ಲ. ಆದ್ದರಿಂದಲೇ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಸರಕಾರ ತಕ್ಷಣವೇ ಸಿದ್ಧವಾಗಬಹುದು. ಈ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಹಿಡುವಳಿ/ಇಳುವರಿ ಮಿತಿಯನ್ನು ಹಾಕಕೂಡದು.

ಈ ಖರೀದಿಯನ್ನು ಪಂಚಾಯತ್ ಮಟ್ಟದಲ್ಲೂ ಮಾಡಬೇಕು. ಖರೀದಿಯ ಸ್ಥಳೀಯ ಏಜೆನ್ಸಿಯನ್ನು ಸ್ಥಳೀಯ ಮಹಿಳಾ ಒಕ್ಕೂಟಕ್ಕೆ ನೀಡಬೇಕು. (ಮಹಿಳಾ ಒಕ್ಕೂಟಗಳಿಗೆ ಜವಾಬ್ದಾರಿ ಕೊಟ್ಟಾಗ ಉತ್ಪನ್ನದ ಗುಣಮಟ್ಟದಲ್ಲಿ ಕಲಬೆರಕೆ/ಕಳಪೆ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವ ವಿವರ ಆಂಧ್ರಪ್ರದೇಶದಲ್ಲಿದೆ)

ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ರೈತ ಪ್ರತಿನಿಧಿ, ಸಹಕಾರಿ ಸಂಘಗಳ ಪ್ರತಿನಿಧಿ ಸಹಿತದ ಸಮಿತಿ. ತಾಲೂಕು ಮಟ್ಟದ ಕೃಷಿ ಬೆಳವಣಿಗೆಗಳ ಬಗ್ಗೆ ಕನಿಷ್ಠ ತ್ರೈಮಾಸಿಕ ಸಭೆ ಮತ್ತು ಸ್ಪಂದನಾ ಕ್ರಿಯಾ ಯೋಜನೆ. ಜಿಲ್ಲಾ ಮಟ್ಟದಲ್ಲೂ ಕ್ರೋಡೀಕರಣ.

ಎಲ್ಲಾ ಬೆಳೆಗಳ ದಾಸ್ತಾನು ಆಧಾರಿತ ಸಾಲ ವ್ಯವಸ್ಥೆಗೆ ಪಂಚಾಯತ್ ಮಟ್ಟದಲ್ಲಿ ಗೋದಾಮು.

ಬೆಳೆ ಅಡವು ಸಾಲಕ್ಕೆ ಶೂನ್ಯ ಬಡ್ಡಿ.

ಪಂಚಾಯತ್ ಮಟ್ಟದಲ್ಲಿ ಕಿರು ಸಂಸ್ಕರಣಾ ಘಟಕಗಳ ಸ್ಥಾಪನೆ (ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು) ಗ್ರಾಮ ಮಟ್ಟದ ಮಹಿಳಾ ಒಕ್ಕೂಟಕ್ಕೆ 1,000 ಟನ್ ಸಂಸ್ಕರಣಾ ಘಟಕ ಸ್ಥಾಪನೆ ಮತ್ತು ಕಾಪು ದಾಸ್ತಾನಿಗೆ ಆವರ್ತ ನಿಧಿ.

ಗುಣ ಮಟ್ಟದ ತಿಪ್ಪೆ/ಸಾವಯವ ಗೊಬ್ಬರ ತಯಾರಿಗೆ ಉದ್ಯೋಗ ಖಾತರಿ ಯೋಜನೆ ಮೂಲಕ ನಡೆಪ್ ಘಟಕ ನಿರ್ಮಾಣ.

ಮಣ್ಣಿನ ಗುಣ ಮಟ್ಟ ಹೆಚ್ಚಿಸಲು ಡಯಂಚಾ ಮತ್ತಿತರ ಗೊಬ್ಬರ ಬೆಳೆಯ ಉಚಿತ ಸರಬರಾಜು. (ಎಕರೆಗೆ 5 ಕೆಜಿ, ಪಂಚಾಯತ್‌ಗೆ 5 ಟನ್)

ಪ್ರತೀ ಪಂಚಾಯತ್ ಮಟ್ಟದಲ್ಲಿ ಹಂಗಾಮಿನ ಮೊದಲು ಮತ್ತು ವರ್ಷಾಂತ್ಯಕ್ಕೆ ಪಂಚಾಯತ್ ಮತ್ತು ಇಲಾಖಾ ಸಹಯೋಗದೊಂದಿಗೆ ಬೆಳೆಗಳ ಆಯ್ಕೆ, ಸಂಭಾವ್ಯ ಹವಾಮಾನ ಪ್ರತಿಕೂಲ ಸ್ಥಿತಿ ಬಗ್ಗೆ ಚರ್ಚೆ. ಹಂಗಾಮಿನ ಬಳಿಕ ಆಯಾ ಹಂಗಾಮಿನ ಬೆಳೆ- ಉತ್ಪನ್ನಗಳ ಮೇಲೆ ಹವಾಮಾನ ಬದಲಾವಣೆ ಸಂಬಂಧಿ ಪ್ರತಿಕೂಲ ಪ್ರಭಾವಗಳ ಬಗ್ಗೆ ಚರ್ಚೆ/ ದಾಖಲೀಕರಣ.

ಕೃಷಿ ಪೂರಕ, ಇತರ ಆದಾಯ ಮೂಲಗಳಾದ ಪಶು ಸಂಗೋಪನೆ/ ಹೈನುಗಾರಿಕೆ ಅಭಿವೃದ್ಧಿಗೆ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ವಿಶೇಷ ಸಾಲ ಸೌಲಭ್ಯ.

ಸ್ಥಳೀಯ ಕೃಷಿ ಆಧಾರಿತ ಕಿರು ಉದ್ಯಮ ಅಭಿವೃದ್ಧಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯಕ್ಕೆ ಕನಿಷ್ಠ 500 ಕೋಟಿ ರೂ. ಅನುದಾನ

ರಾಜ್ಯದ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ)ಗಳನ್ನು ಒಕ್ಕೂಟವಾಗಿ (ಕೆಎಂಎಫ್ ಮಾದರಿಯಲ್ಲಿ) ರೂಪಿಸುವುದು. (ಈಗಿರುವಂತೆ ಶೇ.90ರಷ್ಟು ಎಫ್‌ಪಿಒಗಳು ಕುಂಟುತ್ತಿವೆ. ಪರಸ್ಪರ ಜಿಲ್ಲೆಗಳಲ್ಲಿ ತಮ್ಮ ಉತ್ಪನ್ನ ಮಾರಲು ಸ್ಪರ್ಧಿಸುತ್ತಿವೆ.) ಮಾರುಕಟ್ಟೆ ವಿಸ್ತರಣೆಗೆ ಬೇಕಾದ ತಜ್ಞ ಮಾರ್ಗದರ್ಶನ ಇಲ್ಲ. ಇವುಗಳನ್ನು ಸ್ವಾಯತ್ತತೆ ಉಳಿಸಿಕೊಂಡೂ ಒಕ್ಕೂಟವಾಗಿ ರೂಪಿಸಿದರೆ ಸ್ಪರ್ಧಾತ್ಮಕತೆ, ಉತ್ಪನ್ನಗಳ ಗುಣಮಟ್ಟ ಮತ್ತು ಮಾರುಕಟ್ಟೆ ವಿಸ್ತರಣೆಗೆ ಬೇಕಾದ ಹಣಕಾಸು ಪ್ರತಿಭಾನ್ವೇಷಣೆಗೆ ಅನುಕೂಲವಾಗುತ್ತದೆ.

 ಕೆಡುವ ಕೃಷಿ ಉತ್ಪನ್ನಗಳನ್ನು ಬೆಳೆಯುವ ತಾಲೂಕುಗಳಲ್ಲಿ ಶೀತಲಗೃಹ ನಿರ್ಮಾಣ.

ವಿವಿಧ ಕೃಷಿ ಮಾಹಿತಿ/ ತಂತ್ರಜ್ಞಾನ/ ಕೃಷಿ ಯಂತ್ರೋಪಕರಣ ನಿರ್ವಹಣೆ, ರಿಪೇರಿ/ ಇತ್ಯಾದಿಗಳ ಅಲ್ಪಾವಧಿ ತರಬೇತಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಇತರ ತರಬೇತಿ ಸಂಸ್ಥೆಗಳ ಸಹಯೋಗದೊಂದಿಗೆ.

  ರೈತ ಉತ್ಪನ್ನಗಳ ಸಾಗಾಟಕ್ಕೆ ಪಂಚಾಯತ್ ಮಟ್ಟದಲ್ಲಿ ನಿರ್ದಿಷ್ಟ ದಿನಗಳಲ್ಲಿ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಉಚಿತ ಸಾಗಣೆ ವ್ಯವಸ್ಥೆ.

  ಕೃಷಿ ಸಾಲದ ವಿಸ್ತರಣೆಗೆ ಮಹಿಳಾ ಸ್ವಸಹಾಯ ಸಂಘಗಳಂತೆ ಪುರುಷ ಜವಾಬ್ದಾರಿ ಸಂಘಗಳ ಸ್ಥಾಪನೆ. (Joint Liability Groups) ಈ ಮೂಲಕ ಕಿರುಸಾಲ ನೀಡಿಕೆಯ ದಂಧೆ ನಡೆಸುತ್ತಿರುವ ಸಂಸ್ಥೆಗಳ ಪ್ರಭಾವವನ್ನು ಕಡಿಮೆಗೊಳಿಸಬಹುದು. ಹಾಗೆಯೇ ಖಾಸಗಿ ಸಾಲಗಳಿಂದಲೂ ಬಿಡುಗಡೆ ಪಡೆಯಬಹುದು.

ರೈತ ವೇದಿಕೆಗಳ ಮೂಲಕ ಸುಸ್ಥಿರ ಕೃಷಿ ಕುರಿತ ಸಮಗ್ರ ಮಾಹಿತಿ/ ಅನುಭವ ಹಂಚಿಕೆ ಮತ್ತು ಮಾರ್ಗದರ್ಶನದ ಕಮ್ಮಟ ಪ್ರಸ್ತುತಿಗೆ ಸುಸ್ಥಿರ ಕೃಷಿ ಮಿಶನ್ ಸ್ಥಾಪನೆ.

ಮುಖ್ಯವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಂದ ತಿದ್ದುಪಡಿಯನ್ನು ಹಿಂಪಡೆದು ಎಪಿಎಂಸಿಗಳನ್ನು ರೈತಸ್ನೇಹಿಯಾಗಿ ಸದೃಢಗೊಳಿಸುವುದು.

ಕನಿಷ್ಠ ಬೆಂಬಲ ಬೆಲೆಗೆ ಶಾಸನಾತ್ಮಕ ಸ್ವರೂಪ ನೀಡುವುದು.

ಕೃಷಿಗೆ ಸಂಬಂಧಿಸಿದ ವಸ್ತು, ಉಪಕರಣಗಳನ್ನು ಜಿಎಸ್‌ಟಿ ರಹಿತವಾಗಿ ಹಾಗೂ ಸಗಟು ಬೆಲೆಯಲ್ಲಿ ಖರೀದಿಸಲು ತಾಲೂಕು ಮಟ್ಟದಲ್ಲಿ ಸರಕಾರವೇ ಅಂಗಡಿಗಳನ್ನು ತೆರೆಯುವುದು

ಅಂತರ್ಜಲ ವೃದ್ಧಿಗೆ ಎಲ್ಲಾ ಕೊಳವೆ ಬಾವಿಗಳಿಗೆ ಜಲ ಮರುಪೂರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದು ಮತ್ತು ಈ ರಚನೆಗಳಿಗೆ ಉದ್ಯೋಗ ಖಾತರಿ ಯೋಜನೆಯನ್ನು ಬಳಸುವುದು.

  ರೈತರಿಗೆ ಬೇಕಾದ ತಳಿಗಳ ಬೀಜಗಳು ಮತ್ತು ತಾಲೂಕು ಮಟ್ಟದಲ್ಲಿ ಲಭ್ಯತೆ ಕುರಿತಂತೆ ಸಕಾಲಿಕ ವ್ಯವಸ್ಥೆ (ವಾಟ್ಸ್‌ಆ್ಯಪ್ ಮಾಹಿತಿ/ ನೋಂದಣಿ ಇತ್ಯಾದಿಯನ್ನು ಪೂರಕಗೊಳಿಸಬಹುದು.)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top