ಪಾಕಿಸ್ತಾನದ ಭದ್ರತಾ ಪಡೆ ಕೇಂದ್ರ ಕಚೇರಿಯ ಹೊರಗೆ ಬಾಂಬ್ ಸ್ಫೋಟ : ಕನಿಷ್ಠ 10 ಮಂದಿ ಮೃತ್ಯು

Screengrab:X/@nabilajamal_
ಕ್ವೆಟ್ಟಾದ ಫ್ರಂಟಿಯರ್ ಕಾರ್ಪ್ಸ್ ಮುಖ್ಯ ಕಚೇರಿ ಎದುರು ಗುಂಡಿನ ಚಕಮಕಿ
ಕ್ವೆಟಾ, ಸೆ.30: ಪಾಕಿಸ್ತಾನದ ನೈಋತ್ಯ ನಗರದ ಕ್ವೆಟಾದಲ್ಲಿ ಭದ್ರತಾ ಪಡೆಯ ಕೇಂದ್ರ ಕಚೇರಿಯ ಹೊರಗೆ ಮಂಗಳವಾರ ಸಂಭವಿಸಿದ ಕಾರು ಬಾಂಬ್ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು ಇತರ 30 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಭದ್ರತಾ ಪಡೆಯ ಕೇಂದ್ರ ಕಚೇರಿಯ ಎದುರು ಕಾರು ನಿಲ್ಲಿಸಿದ ನಾಲ್ವರು ಭಯೋತ್ಪಾದಕರು ಕಾರಿನಿಂದ ಕೆಳಗಿಳಿದು ಭದ್ರತಾ ಪಡೆಗಳತ್ತ ಗುಂಡಿನ ದಾಳಿ ನಡೆಸಿದ್ದು ಬಳಿಕ ಕಾರನ್ನು ಸ್ಫೋಟಿಸಿದ್ದಾರೆ. ಭದ್ರತಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಶಂಕಿತ ಭಯೋತ್ಪಾದಕರು ಮೃತಪಟ್ಟಿದ್ದಾರೆ.
ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರೆಲ್ಲರೂ ನಾಗರಿಕರು. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಪ್ರಾಂತೀಯ ಆರೋಗ್ಯ ಸಚಿವ ಬಖತ್ ಕಾಕರ್ ಹೇಳಿದ್ದಾರೆ. ಯಾವುದೇ ಗುಂಪು ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ವರದಿಯಾಗಿದೆ.
Next Story





