ಬಾಗಲಕೋಟೆ: ದೇವಸ್ಥಾನದ ಆಸ್ತಿ ವಿಚಾರಿಸಿದ್ದಕ್ಕೆ ಹಲ್ಲೆ ಆರೋಪ; ರಕ್ತಸಿಕ್ತ ಸ್ಥಿತಿಯಲ್ಲಿ ಎಸ್ಪಿ ಕಚೇರಿಗೆ ಬಂದ ಗಾಯಾಳುಗಳು

ಗಾಯಾಳುಗಳು
ಬಾಗಲಕೋಟೆ: ದೇವಸ್ಥಾನದ ಆಸ್ತಿ ಬಗ್ಗೆ ವಿಚಾರಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ರಕ್ತಸಿಕ್ತ ಸ್ಥಿತಿಯಲ್ಲೇ ಗಾಯಾಳುಗಳು ಎಸ್ಪಿ ಕಚೇರಿಗೆ ಬಂದ ಘಟನೆ ಬಾಗಲಕೋಟೆಯ ಗದ್ದನಕೇರಿ ತಾಂಡಾದಲ್ಲಿ ನಡೆದಿದೆ.
ಗಾಯಾಳುಗಳನ್ನು ಮಂಜುನಾಥ್ ರಾಠೋಡ, ಏಕನಾಥ್ ಲಮಾಣಿ, ಸಚಿನ್ ರಾಠೋಡ, ವಿಕಾಶ್ ರಾಠೋಡ, ಸುನಿಲ್ ರಾಠೋಡ ಹಾಗೂ ಮನೋಜ್ ರಾಠೋಡ ಎಂದು ಗುರುತಿಸಲಾಗಿದೆ.
ದುರ್ಗಾದೇವಿ ದೇವಸ್ಥಾನದ ಆಸ್ತಿ ವಿವರ ಕೇಳಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ಜಿಪಂ ಮಾಜಿ ಸದಸ್ಯ ಹೂವಪ್ಪ ರಾಠೋಡ, ರತ್ನಪ್ಪ ರಾಠೋಡ ಬೆಂಬಲಿಗರ ಮೇಲೆ ಕೊಡಲಿ, ಕಟ್ಟಿಗೆಯಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಗಾಯಾಳುಗಳು ಆಸ್ಪತ್ರೆಗೆ ತೆರಳದೇ ನೇರವಾಗಿ ಎಸ್ಪಿ ಕಚೇರಿಗೆ ಬಂದಿದ್ದು, ಬಳಿಕ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
Next Story




