ಬಾಗಲಕೋಟೆ | ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ಯತ್ನ: ಯೋಧ, ಬಾಲಕ ಇಬ್ಬರೂ ಮೃತ್ಯು

ಬಾಗಲಕೋಟೆ : ಮಲಪ್ರಭಾ ನದಿಯಲ್ಲಿ ಮುಳುಗಿ ಯೋಧ ಸಹಿತ ಇಬ್ಬರ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಣ್ಣೇರಿ ಗ್ರಾಮ ನಡೆದಿದೆ.
ಮೃತರನ್ನು ಹಂಸನೂರು ಗ್ರಾಮದ ಶೇಖಪ್ಪ(15) ಮತ್ತು ಗದಗ ಜಿಲ್ಲೆಯ ಬೇನಾಳ ಗ್ರಾಮದ ಯೋಧ ಮಹಾಂತೇಶ (25) ಎಂದು ಗುರುತಿಸಲಾಗಿದೆ.
ನದಿಯಲ್ಲಿ ಸ್ನಾನ ಮಾಡಲು ಶೇಖಪ್ಪ ಮೊದಲು ನದಿಗೆ ಇಳಿದ್ದ. ಈ ವೇಳೆ ಈಜಲಾಗದೆ ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ಯೋಧ ಧಾವಿಸಿದ್ದಾರೆ. ಆದರೆ, ನದಿಯ ದಡ ಸೇರಲಾರದೇ ಇಬ್ಬರೂ ಮೃತಪಟ್ಟಿದ್ದಾರೆ.
ಅಗ್ನಿಶಾಮಕ ದಳ ಮತ್ತು ಪೋಲಿಸರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದಾರೆ. ಘಟನೆ ಸಂಬಂಧ ಬಾದಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story