ಬಾಗಲಕೋಟೆ | ಮಹಾರಾಷ್ಟ್ರದ ಬಸ್ಸಿಗೆ ಕಪ್ಪು ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು

ಬಾಗಲಕೋಟೆ: ಮಹಾರಾಷ್ಟ್ರದ ಬಸ್ಸನ್ನು ತಡೆದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಸ್ಸಿಗೆ ಕಪ್ಪು ಮಸಿ ಬಳಿದ ಘಟನೆ ರಾಷ್ಟ್ರೀಯ ಹೆದ್ದಾರಿ 50ರ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ನಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಇಳಕಲ್ ಬಸ್ ನಿಲ್ದಾಣದಿಂದ ಸೋಲಾಪುರ ಕಡೆ ಹೊರಟಿದ್ದ ಬಸ್ಸನ್ನು ಕೂಡಲಸಂಗಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಸ್ ಫಲಕದ ಮೇಲೆ, ಗಾಜಿನ ಮೇಲೆ ಕಪ್ಪು ಮಸಿ ಬಳಿದಿದ್ದಾರೆ. ಅಲ್ಲದೆ, ಬಸ್ ಚಾಲಕನನ್ನು ಕೆಳಗಿಳಿಸಿ ಅವರಿಂದ ಜೈ ಕರ್ನಾಟಕ ಘೋಷಣೆ ಹೇಳಿಸಿದ್ದಾರೆ. ಬಸ್ ಮೇಲೆ ಕನ್ನಡ ಬಾವುಟ ಹಾರಿಸಿ, ಬಸ್ ಬೆಂಗಳೂರಿಗೆ ತೆರಳಲು ಬಿಟ್ಟಿದ್ದಾರೆ.
Next Story