Bagalkote | ಮೂವರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಸಾಂದರ್ಭಿಕ ಚಿತ್ರ
ಬಾಗಲಕೋಟೆ : ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ನೇಣು ಹಾಕಿ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾದಾಮಿ ತಾಲೂಕಿನ ಹಿರೇಮುಚಳಗುಡ್ಡ ಗ್ರಾಮದಲ್ಲಿ ರವಿವಾರ ನಡೆದಿರುವುದು ವರದಿಯಾಗಿದೆ.
ರೂಪಾ ಹನಮಂತ ಗೌಡರ (27) ಎಂಬಾಕೆ ಕೌಟುಂಬಿಕ ಕಲಹದಿಂದ ತನ್ನ ಮೂವರು ಮಕ್ಕಳನ್ನು ನೇಣು ಹಾಕಿ ಹತ್ಯೆಗೈದಿದ್ದಾಳೆ ಎನ್ನಲಾಗಿದೆ. ರೂಪಾ ಗೌಡರ ತಮ್ಮ ಮನೆಯಲ್ಲಿ ಮಕ್ಕಳಾದ ಸಮೃದ್ಧಿ ಹನುಮಂತ ಗೌಡರ(5), ಪ್ರೀತಮ್ ಹನುಮಂತ ಗೌಡರ(4), ಸುಶಿಕತ್ ಹನುಮಂತ ಗೌಡರ(2) ರನ್ನು ಹತ್ಯೆಗೈದಿದ್ದು, ಬಳಿಕ ತಾಯಿಯೂ ವಿಷ ಸೇವಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಅಕ್ಕಪಕ್ಕದವರು ಗಮನಿಸಿ, ತಾಯಿಯನ್ನು ರಕ್ಷಿಸಿದ್ದಾರೆ. ತೀವ್ರ ಅವಸ್ಥಗೊಂಡಿದ್ದ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





