ಬಾಗಲಕೋಟೆ | ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ಮೌನ ಪ್ರತಿಭಟನೆ

ಬಾಗಲಕೋಟೆ: ವಕ್ಫ್ ತಿದ್ದುಪಡಿ ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂಬ ಆಗ್ರಹಿಸಿ ಬಾಗಲಕೋಟೆ ಹಾಗೂ ನವನಗರದ ವಿವಿಧ ಮಸೀದಿ ಬಳಿ ಶುಕ್ರವಾರ ಮುಸ್ಲಿಮರು ಮೌನ ಪ್ರತಿಭಟನೆ ನಡೆಸಿದರು. ಮಸ್ಜಿದ್ ಬಳಿ ಕಪ್ಪು ಬಟ್ಟೆ ಕಟ್ಟಿಕೊಂಡು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಶಾಂತಿಯುತವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ವಕ್ಫ್ ಸಂಪತ್ತಿನ ಭದ್ರತೆ ಮತ್ತು ಅದರ ಪ್ರಾಮಾಣಿಕ ನಿರ್ವಹಣೆಗೆ ವಿರೋಧವಲ್ಲ, ಆದರೆ ತಿದ್ದುಪಡಿ ಮಸೂದೆ ವಾಸ್ತವವಾಗಿ ವಕ್ಫ್ ಸಂಪತ್ತಿನ ಮೇಲಿನ ಸಮುದಾಯದ ಹಕ್ಕನ್ನು ಕುಗ್ಗಿಸುತ್ತಿದ್ದು, ಸರ್ಕಾರದ ನಿಯಂತ್ರಣ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಈ ತಿದ್ದುಪಡಿಯಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಆರ್ಥಿಕ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯದ ಹಿರಿಯರು, ಸಮಾಜದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಯುವಕರು ಈ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Next Story