ಸಾರಿಗೆ ನೌಕರರ ಮೇಲಿನ ಶಿಸ್ತು ಕ್ರಮಗಳನ್ನು ರದ್ದುಗೊಳಿಸಿ : ಅನಂತಸುಬ್ಬರಾವ್

ಬೆಂಗಳೂರು, ಆ.11 : ಸಾರಿಗೆ ನೌಕರರ ಮೇಲಿನ ಚಾರ್ಜ್ ಶೀಟ್, ಶೋಕಾಸ್ ನೋಟೀಸ್ ಹಾಗೂ ಇತರೆ ಎಲ್ಲ ಶಿಸ್ತಿನ ಕ್ರಮಗಳನ್ನು ಬೇಷರತ್ತಾಗಿ ರದ್ದು ಮಾಡಬೇಕು ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಹೈಕೋರ್ಟ್ ನಿರ್ದೇಶನದಂತೆ ಮುಷ್ಕರವನ್ನು ಕೈ ಬಿಟ್ಟಿದ್ದೇವೆಯೇ ವಿನಃ ಮುಷ್ಕರ ವಿಫಲವಾಗಿದೆ. ಎಂಬ ಬಾವನೆಯಿಂದ ಅಧಿಕಾರಿಗಳು ಯಾವುದೇ ಹಂತದಲ್ಲೂ ನೌಕರರನ್ನು ಅಗೌರವದಿಂದ ನಡೆಸಿಕೊಳ್ಳಬಾರದು ಎಂದು ತಿಳಿಸಿದರು.
ಸಾರಿಗೆ ಮುಷ್ಕರಕ್ಕೂ ಮುಂಚೆ ಅಥವಾ ಮುಷ್ಕರದ ಸಂದರ್ಭದಲ್ಲಿ ಯಾವುದಾದರೂ ನೌಕರನನ್ನು ಅಥವಾ ಅಧಿಕಾರಿಯನ್ನು ಅವರ ಇಷ್ಟದ ವಿರುದ್ಧ ವರ್ಗಾವಣೆ ಮಾಡಿದ್ದಲ್ಲಿ ಅಂತಹ ವರ್ಗಾವಣೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಾರಿಗೆ ಮುಖಂಡರು ಹಾಗೂ ಕಾರ್ಮಿಕರು ಹಾಜರಿದ್ದರು.
Next Story





