ನಮ್ಮ ದೊಡ್ಡಮ್ಮನ ಮನೆ ಪಕ್ಕದಲ್ಲೆೇ ಆರೆಸ್ಸೆಸ್ ಶಾಖೆ ಇತ್ತು : ಡಿ.ಕೆ.ಸುರೇಶ್

ಬೆಂಗಳೂರು, ಆ.23: ತಮ್ಮ ದೊಡ್ಡಮ್ಮನ ಮನೆ ಪಕ್ಕದ ಮೈದಾನದಲ್ಲಿಯೇ ಆರೆಸ್ಸೆಸ್ ಶಾಖೆ ನಡೆಸಲಾಗುತಿತ್ತು. ಹೀಗಾಗಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ನಮಸ್ತೆ ಸದಾ ವತ್ಸಲೆ’ ಗೀತೆ ಹಾಡಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಆರೆಸ್ಸೆಸ್ ಗೀತೆಯನ್ನು ಹೇಳಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಆದರೆ, ಇದಕ್ಕೆ ಅವರ ನಂಟು ಇಲ್ಲ. ಯಾವುದೇ ಶಾಖೆಗಳಿಗೂ ಅವರು ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ತಮ್ಮ ದೊಡ್ಡಮ್ಮನ ಮನೆ ಪಕ್ಕದಲ್ಲೇ ಮೈದಾನವಿತ್ತು. ಅಲ್ಲಿ ಆರೆಸ್ಸೆಸ್‌ನವರು ಶಾಖೆ ನಡೆಸುತ್ತಿದ್ದರು. ಚಿಕ್ಕಂದಿನಿಂದ ಅದನ್ನು ನೋಡುತ್ತಿದ್ದೇವೆ, ಶಾಖೆಗೆ ಬರುವ ಹಲವಾರು ಹಿರಿಯರು ಶಿವಕುಮಾರ್ ಅವರಿಗೆ ಸ್ನೇಹಿತರು, ಆದರೆ ಅವರು ಯಾವತ್ತೂ ಶಾಖೆಗೆ ಹೋದವರಲ್ಲ.ಅಲ್ಲದೆ, ನಾವು ಆ ಮೈದಾನಕ್ಕೆ ಆಟಕ್ಕಾಗಿ ಹೋಗುತ್ತಿದ್ದೇವು ಹೊರತು ಆರೆಸ್ಸೆಸ್ ಶಾಖೆಗೆ ಅಲ್ಲ ಎಂದು ಅವರು ಹೇಳಿದರು.
Next Story





