ಬಿಎಂಸಿಆರ್ಐ ನಿರ್ದೇಶಕಿಯಾಗಿ ಡಾ.ಕಾವ್ಯ ಎಸ್.ಟಿ. ನೇಮಕ

ಡಾ. ಕಾವ್ಯ ಎಸ್.ಟಿ
ಬೆಂಗಳೂರು, ಆ.29: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ(ಬಿಎಂಸಿಆರ್ ಐ) ನಿರ್ದೇಶಕಿ ಹಾಗೂ ಡೀನ್ ಹುದ್ದೆಗೆ ವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಕಾವ್ಯ ಎಸ್.ಟಿ. ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ಹುದ್ದೆಯಲ್ಲಿ ಪುಭಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡಾ.ರಮೇಶ ಕೃಷ್ಣ.ಕೆ ಇವರನ್ನು ಬಿಡುಗಡೆಗೊಳಿಸಲಾಗಿದೆ. ಡಾ. ಕಾವ್ಯ ಎಸ್.ಟಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಿ ಆದೇಶಿಸಿದೆ.
Next Story





