ಕುಮಾರ ಕೃಪಾ ಅತಿಥಿ ಗೃಹದ ಹೆಸರಿನಲ್ಲಿ ನಕಲಿ ವೆಬ್‍ಸೈಟ್ : ಪ್ರಕರಣ ದಾಖಲು

ಬೆಂಗಳೂರು, ಸೆ.12: ರಾಜ್ಯ ಸರಕಾರದ ಅಧಿಕೃತ ಅತಿಥಿ ಗೃಹವಾದ ಕುಮಾರ ಕೃಪಾ ಹೆಸರಿನಲ್ಲಿ ನಕಲಿ ವೆಬ್‍ಸೈಟ್ ರಚಿಸಿದ ಆರೋಪದಡಿ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಸರಕಾರಿ ಅತಿಥಿ ಗೃಹದ ವ್ಯವಸ್ಥಾಪಕ ಅವಿನಾಶ್ ಎಸ್.ಎನ್. ಸಲ್ಲಿಸಿದ ದೂರಿನ ಆಧಾರದ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಅಪರಿಚಿತರು https://kumarakrupaaguesthouse.com ಎಂಬ ನಕಲಿ ವೆಬ್‍ಸೈಟ್ ರಚಿಸಿದ್ದು, ಕೊಠಡಿ ಬುಕಿಂಗ್ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಹಾಗೂ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





