ಜಾತಿ ಜನಗಣತಿಯಲ್ಲಿ ‘ಹಿಂದೂ-ಹೂಗಾರ’ ಎಂದು ನಮೂದಿಸಲು ಮನವಿ

ಬೆಂಗಳೂರು, ಸೆ.12: ಜಾತಿ ಜನಗಣತಿ ಸಮೀಕ್ಷೆ ವೇಳೆಯಲ್ಲಿ ಜೀರ, ಗುರವ, ಗುರುವ ಪೂಜಾರ, ಪೂಜಾರಿ, ಪುಲಾರಿ ಫೂಲಮಾಲಿ ಎಂಬ ಉಪನಾಮಗಳಿಂದ ಕರೆಯಲ್ಪಡುವ ಹೂಗಾರ ಸಮುದಾಯದವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು, ಜಾತಿ ಕಾಲಂನಲ್ಲಿ ‘ಹೂಗಾರ’ ಎಂದು ಕುಲಕಸುಬು ಕಾಲಂನಲ್ಲಿ ‘ಹೂಗಾರಿಕೆ’ ಎಂದು ನಮೂದಿಸಬೇಕೆಂದು ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾದ ಅಧ್ಯಕ್ಷ ಶಂಕರ್ ಹೂಗಾರ ಮನವಿ ಮಾಡಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಮನೆ ಮನೆ ಸಮೀಕ್ಷೆಯನ್ನು ಸೆ.9 ರಿಂದ ಅ.7ರ ವರೆಗೆ ನಡೆಸಲಿದೆ. ಮಾಹಿತಿ ಪಡೆದುಕೊಳ್ಳುವ ಸಮಯದಲ್ಲಿ ನೈಜ ಜಾತಿಯನ್ನು ನಮೂದಿಸಬೇಕು ಮತ್ತು ಪ್ರತಿಯೊಬ್ಬರು ಜಾತಿಜನಗಣತಿ ಸಮೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
Next Story





