ಧೈರ್ಯವಿದ್ದರೆ ಪಾಕಿಸ್ತಾನ ಜತೆಗಿನ ಪಂದ್ಯ ನಿಲ್ಲಿಸಬೇಕಿತ್ತು : ಪ್ರದೀಪ್ ಈಶ್ವರ್

ಬೆಂಗಳೂರು, ಸೆ.14: ಪುಲ್ವಾಮಾ ದಾಳಿ, ಪಾಕಿಸ್ತಾನದ ಜತೆ ಹೋರಾಡಿ ದೇಶಕ್ಕಾಗಿ ಮಡಿದವರ ಬಗ್ಗೆ ಗೌರವ ಇದ್ದಿದ್ದರೆ ಬಿಜೆಪಿ ನಾಯಕರು ಪಾಕಿಸ್ತಾನ ಜತೆಗಿನ ಕ್ರಿಕೆಟ್ ಪಂದ್ಯವನ್ನು ನಿಲ್ಲಿಸಬೇಕಿತ್ತು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದವರು ಎಂದು ಪ್ರತಿಬಾರಿಯೂ ಬಿಜೆಪಿಯವರು ನಮ್ಮನ್ನು ಟೀಕಿಸುತ್ತಾರೆ. ಆದರೆ, ಈಗ ಪಾಕಿಸ್ತಾನ ಜೊತೆ ಪಂದ್ಯ ಹೇಗೆ ನಡೆಸಲು ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಪಾಕಿಸ್ತಾನ ನಮ್ಮ ಶತ್ರು ದೇಶ. ನೀವು ಹಾಗೆ ತಿಳಿದಿದ್ದರೆ ಪಂದ್ಯ ನಿಲ್ಲಿಸಬೇಕು. ನಾನು ಪಂದ್ಯ ನೋಡುವುದಿಲ್ಲ ಎಂದ ಅವರು, ಪುಲ್ವಾಮಾ ದಾಳಿಯಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಅವರ ಕುಟುಂಬಕ್ಕೆ ಗೌರವ ಬೇಡವೇ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Next Story





