ಬೆಂಗಳೂರು | ಕಾರಿನಲ್ಲಿ ಮಾದಕ ವಸ್ತು, ನಗದು, ಚಿನ್ನಾಭರಣ ಸಾಗಾಟ: ಆರೋಪಿ ಸೆರೆ

ಬೆಂಗಳೂರು, ಸೆ.17: ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕ ಪದಾರ್ಥ, ನಗದು, ಚಿನ್ನಾಭರಣ ಹಾಗೂ ಮೊಬೈಲ್ ಫೋನ್‍ಗಳನ್ನು ಇಲ್ಲಿನ ಗಿರಿನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸೆ.16ರ ಮಂಗಳವಾರ ಸಂಜೆ 4.30ರ ಸುಮಾರಿಗೆ ವೀರಭದ್ರ ನಗರದ ಸಿಗ್ನಲ್ ಬಳಿ ಚಲಿಸುತ್ತಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಗಾಂಜಾ ಪತ್ತೆಯಾಗಿದ್ದು, ಕಾರು ಸಮೇತ ಚಾಲಕ ನಯೀಂ ಅಹಮದ್‍ನನ್ನು ವಶಕ್ಕೆ ಪಡೆಯಲಾಗಿದೆ.
ಈ ವೇಳೆ 21.93 ಕೆ.ಜಿ. ಗಾಂಜಾ, 2.89 ಲಕ್ಷ ನಗದು, 88 ಗ್ರಾಂ ಚಿನ್ನಾಭರಣ ಹಾಗೂ 5 ಮೊಬೈಲ್ ಫೆÇೀನ್‍ಗಳು ಪತ್ತೆಯಾಗಿವೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ತಿಳಿಸಿದರು.
Next Story





