ಕರ್ನಾಟಕ ಲೇಖಕಿಯರ ಸಂಘದ ನಾಲ್ವರು ಸದಸ್ಯರ ರಾಜೀನಾಮೆ

ಬೆಂಗಳೂರು, ಸೆ.30: ಕರ್ನಾಟಕ ಲೇಖಕಿಯರ ಸಂಘದ ನಾಲ್ಕು ಮಂದಿ ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಕರ್ನಾಟಕ ಲೇಖಕಿಯರ ಸಮ್ಮೇಳನವು ಮಾ.22 ಮತ್ತು 23ರಂದು, ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದಿದ್ದು, ಸಮ್ಮೇಳನದ ಲೆಕ್ಕಪತ್ರಗಳ ಕುರಿತು ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪ ಅವರು ಸಮರ್ಪಕ ವಿವರಣೆ ನೀಡುತ್ತಿಲ್ಲ ಎಂದು ಆರೋಪಿಸಿ, ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ. ಸಹಕಾರ್ಯದರ್ಶಿ ಸುಮಾ ಸತೀಶ್, ಉಪಾಧ್ಯಕ್ಷೆ ಜಯಲಕ್ಷ್ಮಿ ಪಾಟೀಲ, ಕಾರ್ಯಕಾರಿ ಸಮಿತಿ ಸದಸ್ಯೆ ಸರ್ವಮಂಗಳಾ ರಾಜೀನಾಮೆ ನೀಡಿದ್ದಾರೆ.
ಸಮ್ಮೇಳನದಲ್ಲಿ ಉಳಿದ ಹಣವನ್ನು ಸಂಘದ ಪುಸ್ತಕ ಪ್ರಕಟನೆಗೆ ನೀಡುವಾಗ ಪದಾಧಿಕಾರಿಗಳ ಗಮನಕ್ಕೆ ತಂದಿಲ್ಲ ಎನ್ನುವುದು ಸೇರಿದಂತೆ ಅನೇಕ ಆರೋಪಗಳನ್ನು ರಾಜೀನಾಮೆ ನೀಡಿದ ಸದಸ್ಯರು ಮಾಡಿದ್ದಾರೆ.
Next Story





