ಬೆಂಗಳೂರು, ಅ.15 : 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರಕಾರಿ ನೌಕರರಿಗೆ ಪ್ರಸಕ್ತ ಸಾಲಿನ ಜು.1ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ತೆ ದರಗಳನ್ನು ಪ್ರಸಕ್ತ ಮೂಲ ವೇತನದ ಶೇ.12.25 ರಿಂದ ಶೇ.14.25ಕ್ಕೆ ಪರಿಷ್ಕರಿಸಿ ಮಂಜೂರು ಮಾಡಿ ಸರಕಾರ ಬುಧವಾರ ಆದೇಶ ಹೊರಡಿಸಿದೆ.