ತುರ್ತು ಪಥಸಂಚಲನದಿಂದ ಸಾಧನೆ ಏನು?: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು, ಅ.19: ಆರೆಸ್ಸೆಸ್‍ನವರು ತುರ್ತು ಪಥಸಂಚಲನ ಮಾಡಿ ಏನು ಸಾಧಿಸಬೇಕಿತ್ತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಥಸಂಚಲನ ಅನುಮತಿ ಸಂಬಂಧ ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಕೋರ್ಟ್ ಹೇಳಿದೆ. ಆದರೆ ಇವತ್ತು ಮಾಡುವಂತಿಲ್ಲ. ಮಾಡಲೂಬಾರದೆಂದು ಕೋರ್ಟ್ ಪ್ರಕಾರ ಇದೆ. ಮತ್ತೊಮ್ಮೆ ಅರ್ಜಿ ಕೊಡಲಿ, ಆಗ ಸರಕಾರ ಮತ್ತೆ ಯೋಚನೆ ಮಾಡುತ್ತದೆ. ಇದು ಸ್ಪಷ್ಟ ಸಂದೇಶ ಎಂದು ತಿಳಿಸಿದರು.
ಅನುಮತಿ ಸಂಬಂಧ ಸಂಘದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಿಲ್ಲ. ಈ ಪ್ರಶ್ನೆಗಳಿಗೆ ಪಥಸಂಚಲನ ನಡೆಸುವವರು ಮಾಹಿತಿಯೇ ನೀಡಿಲ್ಲ. ನಿನ್ನೆ ರಾತ್ರಿ ಸಂಘ ಯಾವುದೇ ನೋಂದಾಯಿತ ಇಲ್ಲವೆಂದು ಬರೆದುಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿ ಕೋರ್ಟ್‍ಗೆ ಹೋಗಿದ್ದಾರೆ. ಕೋರ್ಟ್‍ನಲ್ಲಿ ಬಹಳಷ್ಟು ಚರ್ಚೆ ಆಗಿದೆ. ಸಮಾಜದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಸರಕಾರದ್ದು ಎಂದು ನ್ಯಾಯಾಲಯ ಹೇಳಿದೆ ಎಂದರು.
Next Story





