ಪರಿಷತ್ ಚುನಾವಣೆ: ಬಿಜೆಪಿಯಿಂದ ಸಂಚಾಲಕರ ನೇಮಕ

Photo credit: PTI
ಬೆಂಗಳೂರು : ವಿಧಾನ ಪರಿಷತ್ನ ನಾಲ್ಕು ಸ್ಥಾನಗಳ ಚುನಾವಣೆಗೆ ಪ್ರತಿಪಕ್ಷ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಈ ಸಂಬಂಧ ಸಂಚಾಲಕರು, ಸಹ ಸಂಚಾಲಕರನ್ನು ನೇಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರ: ಸಂಚಾಲಕರಾಗಿ ಅಮರನಾಥ್ ಪಾಟೀಲ್, ಸಹ ಸಂಚಾಲಕರಾಗಿ ನವೀನ್ ಗುಳಗಣ್ಣನವರ್, ಪಶ್ಚಿಮ ಪದವೀಧರ ಕ್ಷೇತ್ರ: ಸಂಚಾಲಕರಾಗಿ ಅರುಣ್ ಶಹಾಪುರ, ಸಹ ಸಂಚಾಲಕರಾಗಿ ಸಂತೋಷ್ ದೇವರೆಡ್ಡಿ ಆಯ್ಕೆಯಾಗಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರ: ಸಂಚಾಲಕರಾಗಿ ವೈ.ಎ.ನಾರಾಯಣಸ್ವಾಮಿ, ಸಹ ಸಂಚಾಲಕರಾಗಿ ಚಿದಾನಂದ ಎಂ.ಗೌಡ, ಬೆಂಗಳೂರು ಶಿಕ್ಷಕರ ಕ್ಷೇತ್ರ : ಸಂಚಾಲಕರಾಗಿ ಕೇಶವ ಪ್ರಸಾದ್ ಮತ್ತು ಸಹ ಸಂಚಾಲಕರಾಗಿ ಎಸ್.ಎನ್.ರಾಜಣ್ಣ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
Next Story





