ಮಸ್ಜಿದೆ ಉಮ್ಮುಲ್ ಹಸ್ನೈನ್: ನೂತನ ಆಡಳಿತ ಸಮಿತಿ ಆಯ್ಕೆ

ಬೆಂಗಳೂರು : ಇಂದಿರಾ ನಗರದ ಮಸ್ಜಿದೆ ಉಮ್ಮುಲ್ ಹಸ್ನೈನ್ ನಲ್ಲಿ ಸೋಮವಾರ ಬೆಳಗ್ಗೆ ಫಝರ್ ನಮಾಝ್ ಬಳಿಕ ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 2025-28ರ ಅವಧಿಗೆ ನೂತನ ಆಡಳಿತ ಸಮಿತಿಯ ಆಯ್ಕೆಯಾಯಿತು.
ಮಸೀದಿಯ ಹಾಲಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಖಾನ್ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಿಝಾಮುದ್ದೀನ್ ಸಾಬ್, ಕಾರ್ಯದರ್ಶಿಯಾಗಿ ಮುಹಮ್ಮದ್ ಜಲಾಲುದ್ದೀನ್ ಅಕ್ಬರ್, ಜಂಟಿ ಕಾರ್ಯದರ್ಶಿಯಾಗಿ ಸುಹೇಲ್ ಲಾಲಾಮಿಯಾ, ಖಜಾಂಚಿಯಾಗಿ ಸಬೀಲ್ ಅಹ್ಮದ್ ಹಾಗೂ ಲೆಕ್ಕಪರಿಶೋಧಕರಾಗಿ ಮುವೀದ್ ಅಹ್ಮದ್ ಚುನಾಯಿತರಾದರು.
Next Story





