ರೈತರ ಹಿತ ಕಾಯುವುದು ರಾಜ್ಯ ಸರಕಾರದ ಕರ್ತವ್ಯ: ಬಸವರಾಜ ಬೊಮ್ಮಾಯಿ

ಬೆಂಗಳೂರು : ‘ಕಬ್ಬಿಗೆ ಬೆಲೆ ನಿಗದಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರಕಾರವನ್ನು ಹೊಣೆ ಮಾಡುವಂತದ್ದು ಸಮಂಜಸವಲ್ಲ. ನಮ್ಮ ರಾಜ್ಯದ ರೈತರ ಹಿತ ಕಾಯುವುದು ರಾಜ್ಯ ಸರಕಾರದ ಕರ್ತವ್ಯ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ನಾನು ಈ ಮೊದಲೇ ಸಿಎಂ ಮಧ್ಯಪ್ರವೇಶ ಮಾಡಬೇಕು. ಸಕ್ಕರೆ ವಾಣಿಜ್ಯ ಬೆಳೆ. ಸಕ್ಕರೆ ಪ್ರತಿನಿತ್ಯ ಉಪಯೋಗಿಸುವ ವಸ್ತು. ಹೀಗಾಗಿ ಕೇಂದ್ರ ಸರಕಾರ ಸಕ್ಕರೆ ಮತ್ತು ಅದರ ಉಪ ಉತ್ಪನ್ನಗಳ ಮೊತ್ತವನ್ನು ತಿರ್ಮಾನ ಮಾಡುವಾಗ ಸಮತೋಲನದ ನಿರ್ಧಾರ ಮಾಡಬೇಕಾಗುತ್ತದೆ. ಜನಸಾಮಾನ್ಯರಿಗೆ ಹೊರೆಯಾಗದಂತೆ ರೈತರಿಗೆ ಹೆಚ್ಚಿಗೆ ದರ ಕೊಡುವ ಕೆಲಸ ಮಾಡುತ್ತದೆ’ ಎಂದಿದ್ದಾರೆ.
ಕಬ್ಬಿಗೆ ಬೆಲೆ ನಿಗದಿ ಮಾಡಲು ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್‍ಎಪಿ ಕಾನೂನು ಮಾಡಲಾಗಿದ್ದು, ಆ ಕಾನೂನಿನಲ್ಲಿ ರಾಜ್ಯ ಸರಕಾರಕ್ಕೆ ಸಂಪೂರ್ಣ ಅಧಿಕಾರ ಇದೆ. ಇದನ್ನು ಸರಕಾರ ಇದುವರೆಗೂ ಬಳಕೆ ಮಾಡಿಲ್ಲ. ಸಿಎಂ ಇದನ್ನು ಬಳಕೆ ಮಾಡಿ ರೈತರಿಗೆ ನ್ಯಾಯ ಕೊಟ್ಟರೆ ಕಬ್ಬಿನ ಸಮಸ್ಯೆಗೆ ನ್ಯಾಯ ಸಮ್ಮತ ಪರಿಹಾರ ಸಾಧ್ಯ ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಾರ್ಖಾನೆ ಮಾಲಕರ ಜೊತೆ ಸಭೆ ನಡೆಸಿ ಪ್ರತಿಟನ್ ಕಬ್ಬಿಗೆ 2900ರೂ. ಇದ್ದಿದ್ದನ್ನು 3200ರೂ. ವರೆಗೂ ಹೆಚ್ಚಿಗೆ ಮಾಡಿ ರೈತರ ಪ್ರೀತಿಗೆ ಪಾತ್ರರಾಗಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿ ದೊಡ್ಡ ಪ್ರಯಾಸ ಪಟ್ಟು ಇಡೀ ದಿನ ಸಭೆ ನಡೆಸಿ 3200 ರೂ.ನಿಂದ ಕಾರ್ಖಾನೆಗಳಿಗೆ 50 ರೂ.ಹೆಚ್ಚಿಸುವ ಪ್ರಸ್ತಾವನೆಯನ್ನು ಕೊಟ್ಟಿದ್ದಾರೆ.
ಇದನ್ನು ಕೆಲವರು ಒಪ್ಪಿದ್ದಾರೆ, ಕೆಲವರು ಒಪ್ಪಿಲ್ಲ. ಒಬ್ಬ ಅಧಿಕಾರಿ ಮಾಡಿರುವ ಸಾಧನೆ ರಾಜ್ಯದ ಮುಖ್ಯಸ್ಥರಾಗಿ ಮಾಡಲು ಸಾಧ್ಯವಾಗದ ಅಂದರೆ ಸಿಎಂ ವಿಶ್ವಾಸಾರ್ಹತೆಯ ಪ್ರಶ್ನೆ ಮೂಡಿಸುತ್ತದೆ. ಆದಾಗ್ಯೂ ತಡವಾಗಿಯಾದರೂ ಈ ಪ್ರಯತ್ನ ಮಾಡಿದ್ದಕ್ಕಾಗಿ ಸರಕಾರದಿಂದ 50 ರೂ. ಕೊಡುವ ತೀರ್ಮಾನ ಮಾಡಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿಯವರು ಕಾರ್ಖಾನೆ ಮಾಲಿಕರ ಜೊತೆ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 2900 ರೂ ಇದ್ದಿದ್ದನ್ನು 3200 ರೂ. ವರೆಗೂ ಹೆಚ್ಚಿಗೆ ಮಾಡಿ ರೈತರ ಪ್ರೀತಿಗೆ ಪಾತ್ರರಾಗಿದ್ದಾರೆ.
— Basavaraj S Bommai (@BSBommai) November 8, 2025
ನಮ್ಮ ರಾಜ್ಯದ ಘನವೆತ್ತ ಮುಖ್ಯಮಂತ್ರಿ @siddaramaiah ಅವರು ಬಹಳ ದೊಡ್ಡ ಪ್ರಯಾಸ ಪಟ್ಟು ಇಡೀ ದಿನ ಸಭೆ ನಡೆಸಿ 3200 ರಿಂದ ಕಾರ್ಖಾನೆಗಳಿಗೆ 50 ರೂ.…







