ಡಿಜಿಟಲ್ ಅರೆಸ್ಟ್ ಮಾಡುವರನ್ನು ಬಂಧಿಸದೇ ಬಿಡುವುದಿಲ್ಲ: ಡಾ.ಜಿ.ಪರಮೇಶ್ವರ್

ಬೆಂಗಳೂರು : ತಾಂತ್ರಿಕವಾಗಿ ಮುಂದುವರೆದಿರುವ ಅಮೆರಿಕದ ಪ್ರಜೆಗಳನ್ನೆ ಗುರಿಯಾಗಿಸಿಕೊಂಡು ಬೆಂಗಳೂರಿನಲ್ಲಿ ಕುಳಿತವರು ಡಿಜಿಟಲ್ ಅರೆಸ್ಟ್ ಮಾಡುವಷ್ಟು ಮುಂದುವರೆದಿದ್ದಾರೆ. ಇಂತಹ ಆರೋಪಿಗಳನ್ನು ಬಂಧಿಸದೇ ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆಂಗಳೂರಿನ ಮಹಿಳಾ ಟೆಕ್ಕಿ ಒಬ್ಬರಿಗೆ 32 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದರು.
ಮಹಿಳಾ ಟೆಕ್ಕಿ ಅವರನ್ನು ಕಳೆದ ಒಂದು ವರ್ಷದಕ್ಕಿಂತಲೂ ಡಿಜಿಟಲ್ ಅರೆಸ್ಟ್ ದಿಗ್ಭಂದಿಸಲಾಗಿದೆ. ಸುಮಾರು 187ಕ್ಕಿಂತಲೂ ಹೆಚ್ಚು ಬಾರಿ ಹಣದ ವಹಿವಾಟು ನಡೆದಿದೆ. ಆರಂಭದಲ್ಲೇ ಅವರು ಮಾಹಿತಿ ನೀಡಿದ್ದರೆ ಒಂದಿಷ್ಟು ಹಣ ಉಳಿಯುತ್ತಿತ್ತು. ಆದರೆ ಮಾಹಿತಿ ನೀಡಲಾಗದಷ್ಟು ಅವರನ್ನು ಸಿಲುಕಿಸಿರುವಂತಿದೆ. 30 ಕೋಟಿಗೂ ಹೆಚ್ಚಿನ ಹಣ ವರ್ಗಾವಣೆಯಾದ ಮೇಲೆ ನಮಗೆ ಮಾಹಿತಿ ಸಿಕ್ಕಿದೆ ಎಂದು ಅವರು ಉಲ್ಲೇಖಿಸಿದರು.
Next Story





