ಬಿ.ಇಡಿ. ಕೋರ್ಸ್ನ ಸೀಟ್ ಮ್ಯಾಟ್ರಿಕ್ಸ್ ಪ್ರಕಟ

ಸಾಂದರ್ಭಿಕ ಚಿತ್ರ | ಸಾಂದರ್ಭಿಕ ಚಿತ್ರ | PC : gemini
ಬೆಂಗಳೂರು : 2025ನೆ ಸಾಲಿನ ಬಿ.ಇಡಿ. ಕೋರ್ಸ್ ಪ್ರವೇಶಾತಿಗೆ ಸಂಬಂಧಿಸಿ ಎರಡನೆಯ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು https://schooleducation.karnataka.gov.in ನಲ್ಲಿ ಪ್ರಕಟಿಸಲಾಗಿದ್ದು, ಕಾಲೇಜು ಆಯ್ಕೆಗೆ ಡಿ.29ರವರೆಗೆ ಅವಕಾಶ ನೀಡಲಾಗಿದೆ.
ಹಾಗೆಯೇ ಪ್ರಕಟಿಸಿರುವ ಆಕ್ಷೇಪಿತ/ ತಿರಸ್ಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದಿದ್ದಲ್ಲಿ ಹಾಗೂ ಆಕ್ಷೇಪಣೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಅಂತಹ ಅಭ್ಯರ್ಥಿಗಳು ತಮ್ಮ ನೋಡಲ್ ಕೇಂದ್ರಗಳಿಗೆ ತೆರಳಿ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಲು ಡಿ.29ರವರೆಗೆ ಅವಕಾಶ ನೀಡಲಾಗಿದೆ.
ತಮ್ಮ ಮೂಲ ದಾಖಲೆಗಳನ್ನು ಸಂಬಂಧಿತ ನೋಡಲ್ ಕೇಂದ್ರಗಳಲ್ಲಿ ಪರಿಶೀಲನೆಗೊಳಪಡಿಸಿ, ಒದಗಿಸಲಾದ ಸೀಟ್ ಮ್ಯಾಟ್ರಿಕ್ಸ್ ಪಕಾರ ಹಿಂದಿನ ಆಯ್ಕೆಯನ್ನು ಅಳಿಸಿ ಹೊಸದಾಗಿ ಕಾಲೇಜು ಆಯ್ಕೆಯನ್ನು ಮಾಡಿಕೊಳ್ಳಲು ಸೂಚಿಸಿದೆ ಎಂದು ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.





