ಡ್ರಗ್ಸ್ ಕಾರ್ಖಾನೆ ಪತ್ತೆ ಮಾಡಿದ ಮಹಾರಾಷ್ಟ್ರ ಪೊಲೀಸ್; ಮೂವರು ಇನ್‍ಸ್ಪೆಕ್ಟರ್‌ಗಳ ಅಮಾನತು

ಬೆಂಗಳೂರು : ನಗರದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಡ್ರಗ್ಸ್ ಕಾರ್ಖಾನೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಇನ್‍ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಅವಲಹಳ್ಳಿ ಠಾಣೆಯ ರಾಮಕೃಷ್ಣ ರೆಡ್ಡಿ, ಕೊತ್ತನೂರು ಠಾಣೆಯ ಚೇತನ್, ಬಾಗಲೂರು ಠಾಣೆಯ ಇನ್‍ಸ್ಪೆಕ್ಟರ್ ಶಬರೀಶ್ ಅವರನ್ನು ಅಮಾನತುಗೊಳಿಸಲಾಗಿದೆ.
ಇತ್ತೀಚಿಗೆ ಮಹಾರಾಷ್ಟ್ರ ಎಎನ್‍ಟಿಎಫ್‍ನಿಂದ ಬೆಂಗಳೂರಲ್ಲಿ ಮೂರು ಡ್ರಗ್ಸ್ ಕಾರ್ಖಾನೆ ಜಪ್ತಿ ಮಾಡಿ, ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಆಧಾರದ ಮೇಲೆ ಕರ್ತವ್ಯ ಲೋಪದಡಿ ಮೂವರು ಪೊಲೀಸರು ಅಮಾನತು ಮಾಡಿ ಕ್ರಮ ಜರುಗಿಸಲಾಗಿದೆ.
Next Story





