‘ಆಡಳಿತದ ದುಸ್ಥಿತಿಯ ದಿನಗಳನ್ನು ಕನ್ನಡಿಗರು ಕ್ಷಮಿಸುವುದಿಲ್ಲ’ : ಸಿದ್ದರಾಮಯ್ಯರ ಸಾಧನೆಗೆ ಬಿಜೆಪಿ ಆಕ್ಷೇಪ

ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ತಾವು ದಾಖಲೆಯ ಪುಸ್ತಕದಲ್ಲಿ ಬರೆದಿರುವುದು ಕೇವಲ ದಿನಗಳ ಸಂಖ್ಯೆಯನ್ನೇ ಹೊರತು, ಸಾಧನೆಯ ಅಕ್ಷರಗಳನ್ನಲ್ಲ. ತಮ್ಮ ತುಘಲಕ್ ಆಡಳಿತದ ದುಸ್ಥಿತಿಯ ದಿನಗಳನ್ನು ಕನ್ನಡಿಗರು ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ’ ಎಂದು ಪ್ರತಿಪಕ್ಷ ಬಿಜೆಪಿ ಎಚ್ಚರಿಕೆ ನೀಡಿದೆ.
ಮಂಗಳವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ದಾಖಲೆ ಬರೆದ ‘ಅಭಿನವ ಅರಸು’ಗೆ ಅಭಿನಂದನೆಗಳು... ನಿಮ್ಮ ದಾಖಲೆ ಆಡಳಿತದ ವೈಫಲ್ಯದ ಸಾಧನೆಗಳನ್ನು ಬಿಡುವು ಸಿಕ್ಕಾಗ ಒಮ್ಮೆ ಕಣ್ಣಾಡಿಸಿ ಸಿದ್ದರಾಮಯ್ಯನವರೇ.. ಏಳು ವರ್ಷ 240 ದಿನಗಳ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ಸಾಲದ ಹೊರೆ ಅಧಿಕವಾಗಿದೆ, ಅಭಿವೃದ್ಧಿ ಶೂನ್ಯವಾಗಿದೆ’ ಎಂದು ಟೀಕಿಸಿದೆ.
ಕರುನಾಡು ಗೂಂಡಾ ರಾಜ್ಯವಾಗಿದೆ, ಶಾಲೆಗಳು ಪಾಳು ಬಿದ್ದಿವೆ, ಜಲಾಶಯಗಳು ಹೂಳು ತುಂಬಿವೆ, ನೇಮಕಾತಿ ನಡೆಯದಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ, ರೈತರ ಆತ್ಮಹತ್ಯೆ ಲೆಕ್ಕಕ್ಕೆ ಸಿಗದಾಗಿದೆ, ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ. ಓಲೈಕೆ ರಾಜಕಾರಣ ಮಿತಿಮೀರಿದೆ ಇವಿಷ್ಟೇ ಅಲ್ಲ ಪಟ್ಟಿ ಮುಂದುವರಿಯಲಿದೆ ಎಂದು ಬಿಜೆಪಿ ತಿಳಿಸಿದೆ.
ದಾಖಲೆ ಬರೆದ "ಅಭಿನವ ಅರಸು"ಗೆ ಅಭಿನಂದನೆಗಳು... ನಿಮ್ಮ ದಾಖಲೆ ಆಡಳಿತದ ವೈಫಲ್ಯದ ಸಾಧನೆಗಳನ್ನು ಬಿಡುವು ಸಿಕ್ಕಾಗ ಒಮ್ಮೆ ಕಣ್ಣಾಡಿಸಿ @siddaramaiah ನವರೇ..
— BJP Karnataka (@BJP4Karnataka) January 6, 2026
➡️ 7 ವರ್ಷ 240 ದಿನಗಳ ಆಡಳಿತದಲ್ಲಿ
ಭ್ರಷ್ಟಾಚಾರ ಮಿತಿ ಮೀರಿದೆ
➡️ ಸಾಲದ ಹೊರೆ
ಅಧಿಕವಾಗಿದೆ
➡️ ಅಭಿವೃದ್ಧಿ
ಶೂನ್ಯವಾಗಿದೆ
➡️ ಕರುನಾಡು
ಗೂಂಡಾ ರಾಜ್ಯವಾಗಿದೆ
➡️… pic.twitter.com/KM1OWAtTVn







