ಕೆಎಫ್‍ಡಿ ನಿಯಂತ್ರಣಕ್ಕೆ ಡೆಪಾ ತೈಲ ಖರೀದಿಸಲು ಅನುಮೋದನೆ

ಬೆಂಗಳೂರು : ಕ್ಯಾಸನೂರ್ ಕಾಡಿನ ರೋಗ(ಕೆಎಫ್‍ಡಿ) ನಿಯಂತ್ರಣಕ್ಕೆ ಶೇ.25ರಷ್ಟು ಹೆಚ್ಚುವರಿ ಡೆಪಾ ತೈಲದ ಬಾಟಲಿಗಳನ್ನು ಖರೀದಿ ಮಾಡಲು ರಾಜ್ಯ ಸರಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.
2024-25ನೇ ಸಾಲಿನಲ್ಲಿ ಸರಿಸುಮಾರು 7,84,004 ಡೆಪಾ ಬಾಟಲಿಗಳು ಸರಬರಾಜಾಗಿದ್ದು, ಈವರೆಗೆ 5,05,282 ಬಾಟಲಿಗಳು ವಿತರಣೆಯಾಗಿರುತ್ತದೆ. ಈಗ ಡೆಪಾ ತೈಲದ 2,78,722 ಬಾಟಲಿಗಳು ಲಭ್ಯವಿದ್ದು, ಈ ದಾಸ್ತಾನು ಫೆಬ್ರವರಿ ಎರಡನೇ ವಾರದವರೆಗೆ ಮಾತ್ರ ವಿತರಿಸಬಹುದಾಗಿದೆ. ಮಾರ್ಚ್‍ನಿಂದ ಜೂನ್‍ವರೆಗೆ 5,74,874 ಡೆಪಾ ತೈಲದ ಬಾಟಲಿ ಅವಶ್ಯಕತೆ ಇದ್ದು, ಅದನ್ನು ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕ್ಯಾಸನೂರ್ ಕಾಡಿನ ರೋಗ ಋತುವು ಪ್ರಾರಂಭವಾಗಿದ್ದು, ಸೋಂಕನ್ನು ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ದುರ್ಬಲ ಜನಸಂಖ್ಯೆ, ಅರಣ್ಯ ಕೆಲಸಗಾರರು ಮತ್ತು ಮುಂಚೂಣಿ ಸಿಬ್ಬಂದಿಗಳಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಡೆಪಾ ತೈಲ ಮಾತ್ರ ಪರಿಣಾಮಕಾರಿ ತಡೆಗಟ್ಟುವ ಕ್ರಮವಾಗಿದೆ ಎಂದು ಸರಕಾರ ಹೇಳಿದೆ.
Next Story





