ಜೆಡಿಎಸ್ ಜಿಬಿಎ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ

ಬೆಂಗಳೂರು : ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾರ್ಗದರ್ಶನದ ಮೇರೆಗೆ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ ಹಾಗೂ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರಗಳನ್ನು ಹಸ್ತಾಂತರ ಮಾಡಿದರು.
ಸೋಮವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿದರು. ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶೈಲಾ ಸಂತೋಜಿ ರಾವ್, ಯುವ ಘಟಕದ ಅಧ್ಯಕ್ಷರಾಗಿ ಆರ್.ಸ್ಯಾಮಿಯಲ್, ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಎಂ.ಗೋಪಾಲ್, ಸೇವಾದ ವಿಭಾಗದ ಅಧ್ಯಕ್ಷರಾಗಿ ಪಿ.ಮಹೇಶ್, ಎಸ್‍ಟಿ ವಿಭಾಗದ ಅಧ್ಯಕ್ಷರಾಗಿ ವಿ.ಜನಾರ್ದನ್, ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷರಾಗಿ ಫಣಿರಾಜ್ ಹಿರಿಯಣ್ಣಗೌಡ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಫ್ರೋಜ್ ಬೇಗ್, ಚಂದ್ರನ್ ಚಾಲ್ರ್ಸ್, ಕಾನೂನು ವಿಭಾಗದ ಅಧ್ಯಕ್ಷರಾಗಿ ಆದಿತ್ಯ ಎನ್.ರಾಜ್, ಈ ವಿಭಾಗದ ಕಾರ್ಯಧ್ಯಕ್ಷರನ್ನಾಗಿ ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಸೂರ್ಯ ಮತ್ತು ವೈದ್ಯಕೀಯ ವಿಭಾಗದ ಅಧ್ಯಕ್ಷರಾಗಿ ಡಾ.ಎಂ.ಭರದ್ವಾಜ್‍ರನ್ನು ನೇಮಕ ಮಾಡಲಾಗಿದೆ.
ನೂತನ ಪದಾಧಿಕಾರಿಗಳು: ಕಾರ್ಯಧ್ಯಕ್ಷರಾಗಿ ಟಿ.ಆರ್.ತುಳಸಿ ರಾಮ್, ಪ್ರದಾನ ಕಾರ್ಯದರ್ಶಿಯಾಗಿ ಎಸ್.ರಮೇಶ್, ಹಿರಿಯ ಉಪಾಧ್ಯಕ್ಷರಾಗಿ ಬಿ.ಅಂದಾನಪ್ಪ, ಕೆ.ಬಾಗೇಗೌಡ, ಎಚ್.ಎಂ.ರಾಮಯ್ಯ ಮತ್ತು ಶ್ರೀರಾಮೇಗೌಡ ಎನ್.ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಬಿ.ಭದ್ರೆಗೌಡ, ಎಚ್.ಜಿ.ಉಮೇಶ್, ಲಕ್ಷ್ಮೀನಾರಾಯಣ್, ಸುರೇಶ್ ನಾಗವಾರ, ಎ.ರುದ್ರಪ್ಪ, ತಾರಾ ಲೋಕೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಆರ್.ಅಭಿಷೇಕ್, ಶ್ವೇತಾ ಯಾದವ್, ಕೆ.ಬಿ.ಶ್ರೀನಿವಾಸ್, ಎಚ್.ಪಿ.ರತ್ನ ರಾಜೇಗೌಡರನ್ನು ನೇಮಿಸಿ ಎಚ್.ಎಂ.ರಮೇಶ್ ಗೌಡರು ಆದೇಶ ಪತ್ರಗಳನ್ನು ಪಕ್ಷದ ಕಚೇರಿಯಲ್ಲಿ ಹಸ್ತಾಂತರ ಮಾಡಿದರು.






