ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ‘ಕ್ಲೌಡ್ ಅಡಾಪ್ಷನ್’ ಪ್ರಶಸ್ತಿ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತಂತ್ರಾಂಶ ಅಭಿವೃದ್ಧಿ ಹಾಗೂ ಅನುಷ್ಠಾ ನದಲ್ಲಿ ತೋರಿದ ಅತ್ಯುತ್ತಮ ಸಾಧನೆಗಾಗಿ ರಾಷ್ಟ್ರಮಟ್ಟದ ಪ್ರತಿಷ್ಠಿತ ‘ಕ್ಲೌಡ್ ಅಡಾಪ್ಷನ್’ ಪ್ರಶಸ್ತಿ ದೊರೆತಿದೆ.
ಹೊಸದಿಲ್ಲಿಯ ಖಾಸಗಿ ಹೊಟೇಲ್ನಲ್ಲಿ ಮೇ 29ರಂದು ಆಯೋಜಿಸಿದ್ದ ‘11ನೇ ಇಂಡಿಯಾ ಪಿಎಸ್ಯು ಐಟಿ ಫೋರಮ್ ಮತ್ತು ಅವಾಡ್ರ್ಸ್ 2026’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಂಸ್ಥೆಯ ಪರವಾಗಿ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗದಗ ವಿಭಾಗೀಯ ಸಂಚಾರ ಅಧಿಕಾರಿ ಪಡಿಯಪ್ಪ ಮೇತ್ರಿ ಪ್ರಶಸ್ತಿ ಸ್ವೀಕರಿಸಿದರು ಎಂದು ಪ್ರಕಟನೆ ತಿಳಿಸಿದೆ.
Next Story




