ಸಿ.ಆರ್.ಜನಾರ್ದನ್, ಡಾ.ಕೆ.ಪಿ.ರಾವ್‌ಗೆ ‘ಮುದ್ರಣ ರತ್ನ’ ಪ್ರಶಸ್ತಿ

ಬೆಂಗಳೂರು : ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ ಮುದ್ರಣ ರತ್ನ ಪ್ರಶಸ್ತಿಗೆ ವೆಂಕಟೇಶ್ವರ ಪ್ರಿಂಟಿಂಗ್ ಪ್ರೆಸ್‌ನ ಸಿ.ಆರ್.ಜನಾರ್ದನ, ಭಾರತೀಯ ಭಾಷಾಗಣಕ ಪಿತಾಮಹ ಡಾ.ಕೆ.ಪಿ.ರಾವ್ ಅವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ತಿಳಿಸಿದೆ.
ಗುರುವಾರ ಈ ಕುರಿತು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಆರ್.ದೊಡ್ಡೇಗೌಡ ಪ್ರಕಟಣೆ ನೀಡಿದ್ದು, ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅವರು ಸಾಹಿತ್ಯ ರತ್ನ ಪ್ರಶಸ್ತಿಗೆ, ಲೇಖಕ ಅನಂತ ಕುಣಿಗಲ್ ಅವರು ಯುವ ಸಾಹಿತ್ಯ ರತ್ನ ಪ್ರಶಸ್ತಿಗೆ, ಪ್ರಕಾಶಕ ಎಚ್.ಕೆ.ಲಕ್ಷ್ಮೀನಾರಾಯಣ ಅಡಿಗ ಅವರು ಪುಸ್ತಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಎಲ್ಲ ಪ್ರಶಸ್ತಿಗಳು 10 ಸಾವಿರ ರೂ. ನಗದು ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿವೆ. ಜೂನ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




