ಡಾ.ಜಯಲಲಿತಾಗೆ ʼಎಚ್.ವಿ.ಸಾವಿತ್ರಮ್ಮ ಪ್ರಶಸ್ತಿʼ : ಆರ್.ಸುನಂದಮ್ಮ

ಡಾ.ಜಯಲಲಿತಾ
ಬೆಂಗಳೂರು : ಡಾ.ಜಯಲಲಿತಾ ಅವರು ಅನುವಾದಿಸಿರುವ ‘ತೊಲ್ಗಾಪ್ಪಿಯಂ’ ಕೃತಿಯು 2025ನೇ ಸಾಲಿನ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿಯನ್ನು ಈ ಬಾರಿ ಅನುವಾದ ವಿಭಾಗಕ್ಕೆ ನೀಡಲು ಯಾವುದೇ ಭಾಷೆಯಿಂದ ಕನ್ನಡಕ್ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು ಎಂದು ತಿಳಿಸಿದ್ದಾರೆ.
ರಶ್ಮಿ ಎಸ್., ಕೆ.ರಾಜಕುಮಾರ್ ಹಾಗೂ ಪ್ರೊ. ಸೆಲ್ವಕುಮಾರಿ ಅವರು ತೀರ್ಪುಗಾರರಾಗಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಗಸ್ಟ್ ತಿಂಗಳಿನಲ್ಲಿ ನಡೆಯುತ್ತದೆ ಎಂದು ಮಾಹಿತಿ ನೀಡಿದ್ದಾರೆ.
Next Story




