ಎನ್ಯುಮರೇಷನ್ ಫಾರಂ ಭರ್ತಿ ಮಾಡಲು ಸಹಾಯ ಕೇಂದ್ರಗಳ ಸ್ಥಾಪನೆ : ಮುಖ್ಯ ಕಾರ್ಯದರ್ಶಿ

ಬೆಂಗಳೂರು : ಎನ್ಯುಮರೇಷನ್ ಫಾರಂ(ಅರ್ಜಿ ನಮೂನೆ) ಅನ್ನು ಭರ್ತಿ ಮಾಡಲು ಸಮಸ್ಯೆಯಾದರೆ, ಅಂತಹ ಮತದಾರರ ನೆರವಿಗಾಗಿ ವಾರ್ಡ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದರು.
ಮಂಗಳವಾರ ಬೂತ್ ಮಟ್ಟದ ಅಧಿಕಾರಿ(ಬಿಎಲ್‍ಒ)ಯಿಂದ ತಮ್ಮ ಎನ್ಯುಮರೇಷನ್ ಫಾರಂ ಅನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗಾಗಿ ಎಲ್ಲ ಮತದಾರರು ಎನ್ಯುಮರೇಷನ್ ಫಾರಂ(ಗಣತಿ ನಮೂನೆ)ಅನ್ನು ಭರ್ತಿ ಮಾಡಲೇಬೇಕು ಎಂದು ಹೇಳಿದರು.
ಬಿಎಲ್‍ಒಗಳು ಪ್ರತಿಯೊಂದು ಮನೆಗೂ ಭೇಟಿ ನೀಡಿ, ಮತದಾರರಿಗೆ ಎನ್ಯುಮರೇಷನ್ ಫಾರಂನ ಎರಡು ಪ್ರತಿಗಳನ್ನು ನೀಡುತ್ತಾರೆ. ಅದರಲ್ಲಿ ಮತದಾರರು ತಮ್ಮ ವಿವರಗಳನ್ನು ನಮೂದಿಸಿ ಸಹಿ ಮಾಡಿ, ಒಂದು ಪ್ರತಿಯನ್ನು ಬಿಎಲ್‍ಒಗೆ ನೀಡಬೇಕು. ಮತ್ತೊಂದು ಪ್ರತಿಯನ್ನು ಬಿಎಲ್‍ಒ ಸಹಿ ಮಾಡಿ ಮತದಾರರಿಗೆ ಹಿಂದಿರುಗಿಸುತ್ತಾರೆ. ಆ ಪ್ರತಿಯನ್ನು ಜೋಪಾನವಾಗಿಡಬೇಕು ಎಂದು ಮುಖ್ಯಕಾರ್ಯದರ್ಶಿ ತಿಳಿಸಿದರು.
Next Story




