Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಮೊಗಳ್ಳಿ ಕೃತಿಗಳಲ್ಲಿ ದೇಶದ ಜಾತೀಯತೆಯ...

ಮೊಗಳ್ಳಿ ಕೃತಿಗಳಲ್ಲಿ ದೇಶದ ಜಾತೀಯತೆಯ ಕರಾಳತೆ ಅನಾವರಣ: ನಟರಾಜ್ ಹುಳಿಯಾರ್

ವಾರ್ತಾಭಾರತಿವಾರ್ತಾಭಾರತಿ1 Aug 2026 1:07 AM IST
share
ಮೊಗಳ್ಳಿ ಕೃತಿಗಳಲ್ಲಿ ದೇಶದ ಜಾತೀಯತೆಯ ಕರಾಳತೆ ಅನಾವರಣ: ನಟರಾಜ್ ಹುಳಿಯಾರ್
‘ಮೊಗಳ್ಳಿ ಗಣೇಶ್ ಸಾಹಿತ್ಯ’ ಕುರಿತ ವಿಚಾರ ಸಂಕಿರಣ

ಬೆಂಗಳೂರು : ನಿಜಕ್ಕೂ ಈ ದೇಶದ ಜಾತೀಯತೆಯ ಕರಾಳತೆಯನ್ನು ಅರಿಯಲು ಲೇಖಕ ಮೊಗಳ್ಳಿ ಗಣೇಶ್ ಅವರ ಕೃತಿಗಳನ್ನು ಓದಬೇಕು. ಈ ದೇಶ ನಮಗೆ ಅರಿವಿಲ್ಲದೆಯೇ ನಮ್ಮನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಕಾಣಬಹುದು ಎಂದು ಲೇಖಕ, ಸಂಸ್ಕೃತಿ ಚಿಂತಕ ನಟರಾಜ್ ಹುಳಿಯಾರ್ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ಜಯನಗರದಲ್ಲಿರುವ ನ್ಯಾಷನಲ್ ಕಾಲೇಜಿನ ಕನ್ನಡ ವಿಭಾಗ ಮತ್ತು ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ‘ಮೊಗಳ್ಳಿ ಗಣೇಶ್ ಅವರ ಸಾಹಿತ್ಯ’ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಣೇಶ್ ಅವರು ನೇರವಾಗಿ, ಪ್ರಾಮಾಣಿಕವಾಗಿ ಬರೆಯುತ್ತಿದ್ದರು. ಅವರ ‘ತೊಟ್ಟಿಲು’ ಕಾದಂಬರಿ ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಜೀತಪದ್ದತಿಗೆ ಸಿಲುಕಿ ನಾಶವಾಗಬೇಕಿದ್ದ ಮೊಗಳ್ಳಿಯನ್ನು ಸ್ವತಂತ್ರವಾಗಿಸಿದ್ದು ಕತೆ. ಯಾವ ಹಿನ್ನೆಲೆಯೂ ಇಲ್ಲದೆ ಮನೆಯಲ್ಲಿ ಅಕ್ಷರಸ್ಥರೇ ಇಲ್ಲದೆ ಊರಿಂದ ತಪ್ಪಿಸಿಕೊಂಡು ಬಂದಂಥ ಮೊಗಳ್ಳಿ ಗಣೇಶ್ ಉತ್ತಮ ಬರಹಗಾರರಾಗಿ ರೂಪಿತವಾದರು ಎಂದು ನಟರಾಜ್ ಹುಳಿಯಾರ್ ಹೇಳಿದರು.

ಮೊಗಳ್ಳಿ ಗಣೇಶ್ 10ನೇ ತರಗತಿ ಮುಗಿಸಿದ ಬಳಿಕ ಅವರ ತಂದೆ ಅವನನ್ನು ಜೀತಕ್ಕೆ ಕಳುಹಿಸಲು ಮುಂದಾಗಿದ್ದನ್ನು ನಿರಾಕರಿಸಿ ಅಲ್ಲಿಂದ ಕಾಲುಕಿತ್ತು ನಗರ ಪ್ರದೇಶಕ್ಕೆ ಬಂದಾಗ…ಈ ನಗರ ಅವನನ್ನು ಹೇಗೆ ರೂಪಿಸಿತು? ಆ ಜೀತವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಆಗ ಓಡಿ ಬಂದಿದ್ದರಿಂದಲೇ ಆತ ಸ್ವತಂತ್ರನಾಗಲು ಸಾಧ್ಯವಾಗಿದ್ದು. ಹಾಗಾಗಿ ನಾವು ನಮ್ಮ ಮನಸ್ಸಿನಲ್ಲಿರುವ ಜೀತ ಪದ್ದತಿಯನ್ನು ಮೊದಲು ತೊಲಗಿಸಿದರೆ ಸ್ವತಂತ್ರರಾಗಬಹುದು ಎಂದು ನಟರಾಜ್ ಹುಳಿಯಾರ್ ಹೇಳಿದರು.

ಗಣೇಶ್ ಅವರ ಕಥೆಗಾರಿಕೆಯನ್ನು ರೂಪಿಸಿದ್ದು ಕೇವಲ ಸಾಹಿತ್ಯದ ಓದು ಅಥವಾ ಬರವಣಿಗೆಯ ಅಭ್ಯಾಸವಲ್ಲ. ಅವರು ಬದುಕಿನಲ್ಲಿ ಎದುರಿಸಿದ ಶೋಷಣೆ, ಜಾತಿ ವ್ಯವಸ್ಥೆಯ ಹಿಂಸೆ ಹಾಗೂ ಗ್ರಾಮೀಣ ಸಮಾಜದ ಅಸಮಾನತೆಗಳೇ ಅವರ ಕಥೆಗಳ ಮೂಲದ್ರವ್ಯವಾದವು. ಹಳ್ಳಿಯ ಜನರು, ಮಹಿಳೆಯರು, ದಲಿತರು ಎದುರಿಸುವ ದೌರ್ಜನ್ಯಗಳನ್ನು ಅವರು ಸಾಹಿತ್ಯದ ಮೂಲಕ ದಾಖಲಿಸಿದರು ಎಂದು ಹುಳಿಯಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಎನ್‍ಇಎಸ್ ಅಧ್ಯಕ್ಷ ಡಾ.ಎಚ್.ಎನ್.ಸುಬ್ರಹ್ಮಣ್ಯ, ಗೌರವ ಕಾರ್ಯದರ್ಶಿ ವಿ. ವೆಂಕಟಶಿವಾ ರೆಡ್ಡಿ, ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ಸಿ.ಶಿವಾರೆಡ್ಡಿ, ಕಾರ್ಯದರ್ಶಿ ಎಂ.ಸಿ.ನರೇಂದ್ರ, ಶೈಕ್ಷಣಿಕ ಸಂಚಾಲಕ ಕೇಶವ ಮುಳಗಿ ಹಾಗೂ ನ್ಯಾಷನಲ್ ಕಾಲೇಜು ಚೇರ್ಮನ್ ಪಿ.ಎಲ್.ವೆಂಕಟರಾಮ ರೆಡ್ಡಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

‘ಮೊಗಳ್ಳಿ ಗಣೇಶ್ ಈ ನಾಡು ಕಂಡ ಅದ್ಭುತ ಲೇಖಕ. 70ರ ದಶಕದಲ್ಲಿ ಚಳುವಳಿಯ ಬಿರುಸು ಎಲ್ಲೆಡೆ ಹರಡಿ, ಹಾಡು, ಕವಿತೆ, ನಾಟಕ, ಕಥೆ, ಕಾದಂಬರಿಗಳು ನೊಂದವರ ಎದೆಗಳಲ್ಲಿ ಚಿಗುರುತೊಡಗಿದವು. ಆ ಕಾಲಕ್ಕೆ ಮೊಗಳ್ಳಿ ಅವರೊಳಗಿದ್ದ ವೈಯಕ್ತಿಕ ದುಃಖವು, ಸಮುದಾಯದ ದುಃಖವು ಹರಿಯುತ್ತಾ ಅಕ್ಷರದ ಸೃಜನಶೀಲ ಅಸ್ತ್ರವಾಗಿ ತಾನೇ ಬೆರಗು ಮೂಡಿಸುವಂತಹ ಕಥೆಗಳು ಜೀವ ಪಡೆದಾಗ, ಇದು ನಿಜವೇ ಎಂದು ವಿಸ್ಮಯಕ್ಕೆ ಒಳಗಾಗಿದ್ದು ಇದೆ. ಡಾ.ಮೊಗಳ್ಳಿ ಗಣೇಶ್ ಕನ್ನಡಕ್ಕೆ ಮಹತ್ವದ ಕಥೆಗಳನ್ನು, ಸಣ್ಣ ಕಥೆಗಳನ್ನು ಕೊಟ್ಟಿದ್ದಾರೆ. ಕಾದಂಬರಿಯನ್ನು ಬರೆದಿದ್ದಾರೆ. ನಾಟಕವನ್ನು ರಚಿಸಿದ್ದಾರೆ. ಎರಡು ಅಪರೂಪದ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ. ಬಹಳ ಮುಖ್ಯವಾಗಿ ಆಧುನಿಕ ಕನ್ನಡ ಸಾಹಿತ್ಯವನ್ನು ತಕರಾರು ವಿಮರ್ಶೆಯ ಮೂಲಕ ಈ ಸಾಹಿತ್ಯದ ಒಳವರ್ಗವನ್ನು ಬಯಲು ಮಾಡಿದ್ದಾರೆ.’

-ಸುಬ್ಬು ಹೊಲೆಯಾರ್, ಕವಿ, ಲೇಖಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X