ಕಲಿಕೆಗೆ ಬಡತನ ಅಡ್ಡಿಯಾಗಬಾರದು : ಪ್ರೊ.ಮುಶೀರಾ ಅಶ್ರಫ್

ಬೆಂಗಳೂರು : ವಿದ್ಯೆಯನ್ನು ಕಲಿಯಲು ಬಡತನ ಅಡ್ಡಿ ಆಗಬಾರದು. ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಂಶೋಧಕ ಪ್ರೊ.ಮುಶೀರಾ ಅಶ್ರಫ್ ತಿಳಿಸಿದ್ದಾರೆ.
ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ಬ್ಯಾರೀಸ್ ಸಭಾಂಗಣದಲ್ಲಿ ನಡೆದ ಲರ್ನಿಂಗ್ ಪಾಯಿಂಟ್ ಫೌಂಡೇಶನ್‌ನ 2026ರ ಘಟಿಕೋತ್ಸವದಲ್ಲಿ ಎನ್‌ಐಒಎಸ್ ಪದವೀಧರರು ಮತ್ತು ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಪ್ರೊ.ಮುಶೀರಾ ಅಶ್ರಫ್ ಹೇಳಿದರು
ಯುಎಸ್‌ಎನ ಉದ್ಯಮಿ ಅಕ್ರಮ್ ಸೈಯದ್ ಮಾತನಾಡಿ, ಸಮಾಜ ಉತ್ತಮ ಸ್ಥಿತಿಯಲ್ಲಿ ಸಾಗಬೇಕೆಂದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಮೂಲಕ ಪ್ರಜ್ಞಾವಂತರಾಗಬೇಕು. ಉನ್ನತಮಟ್ಟದವರೆಗೆ ಮಕ್ಕಳನ್ನು ಓದಿಸಿ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂದರು.
ಸಮಾರಂಭದಲ್ಲಿ ಯುಎಸ್‌ಎನ ಎಸ್‌ಇಇಡಿ ಮುಖ್ಯಸ್ಥ ಸೈಯದ್ ಮಝೀರುದ್ದೀನ್ ಹುಸ್ಸೈನಿ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.




