ರಾಷ್ಟ್ರೀಯ ಐಕ್ಯತಾ ಕವಿಗೋಷ್ಠಿಯಲ್ಲಿ ಮೌಲಾನಾ ಮಸೂದ್ ಅಹ್ಮದ್‌ಗೆ ಸನ್ಮಾನ

ಬೆಂಗಳೂರು : ರಾಜ್ಯ ಉರ್ದು ಅಕಾಡಮಿ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಐಕ್ಯತಾ ಕವಿಗೋಷ್ಠಿ(ಮುಶಾಯರಾ)ಯಲ್ಲಿ ಸಾಮಾಜಿಕ, ಸಮುದಾಯ ಹಾಗೂ ಉರ್ದು ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಉರ್ದು ಭಾಷೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗ್ರಾಫಿಕ್ ಡಿಸೈನರ್ ಹಾಗೂ ರಾಜ್ಯದ ಪ್ರಸಿದ್ಧ ಉರ್ದು ದಿನಪತ್ರಿಕೆ ‘ಡೈಲಿ ಸಾಲಾರ್’ನ ಹಿರಿಯ ಡಿಸೈನರ್ ಮೌಲಾನಾ ಮಸೂದ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉರ್ದು ಅಕಾಡಮಿ ಸದಸ್ಯರಾದ ಆಬಿದ್ ಅಸ್ಲಂ, ಖಾಜಿ ಸೈಫುಲ್ಲಾ, ಹಾಫಿಝ್ ಅಬ್ದುಲ್ ಅಝೀಮ್ ಹಾಗೂ ಮೌಲಾನಾ ಹಬೀಬರ‌್ರಹ್ಮಾನ್ ಉಪಸ್ಥಿತರಿದ್ದರು.
Next Story




